ವೀರಾಜಪೇಟೆ, ನ, ೨೦: ವೀರಾಜಪೇಟೆ ತಾಲೂಕು ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಂಬೆಬೆಳ್ಳೂರು, ಪುದುಕೋಟೆ, ಐಮಂಗಲ, ಮಗ್ಗುಲ, ಕೋಟೆಕೊಪ್ಪ, ಕುಕ್ಲೂರು ಬೊಳ್ಳರಿಮಾಡು ಗ್ರಾಮಗಳಲ್ಲಿ ಕಾಡಾನೆಗಳ ನಿರಂತರ ಉಪಟಳದೊಂದಿಗೆ ಹುಲಿಯಿಂದಲೂ ಭೀತಿ ಎದುರಾಗಿರುವ ಹಿನೆÀ್ನಲೆಯಲ್ಲಿ ಗ್ರಾಮಸ್ಥರು, ಬೆಳೆಗಾರರು ಮೆರವಣಿಗೆಯೊಂದಿಗೆ ಗಡಿಯಾರ ಕಂಬದ ಬಳಿ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದರು. ಬಳಿಕ ಅರಣ್ಯ ಭವನದ ಮುಂದೆ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು. ಸತತ ಐದು ವರ್ಷಗಳಿಂದ ಕಾಡಾನೆಗಳ ಧಾಳಿಯಿಂದಾಗಿ ಈ ಭಾಗದ ರೈತಾಪಿ ವರ್ಗ ಕಂಗಾಲಾಗಿದೆ. ಕಾಡಾನೆ ಉಪಟಳ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಕಾಡಾನೆಗಳ ಭಯದಿಂದ ಕಾರ್ಮಿಕರು ತೋಟಕ್ಕೆ ತೆರಳದೆ ಕಾಫಿ ತೋಟಗಳು ಅವನತಿಯತ್ತ ಸಾಗಿವೆ. ಗದ್ದೆಗಳನ್ನು ಪಾಳು ಬೀಡಲಾಗಿದೆ. ಇಂತಹ ಸನ್ನಿವೇಶ ಎದುರಾಗಿದ್ದರೂ ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳದೆ ರೈತರಿಗೆ ಅಲ್ಪ ಪರಿಹಾರ ನೀಡಿ ಸುಮ್ಮನಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಗ್ರಾಮಸ್ಥ ಕೊಳುವಂಡ ಮಂದಪ್ಪ ಮಾತನಾಡಿ, ದಿನನಿತ್ಯ ಕಾಡಾನೆಗಳ ಭೀತಿಯೊಂದಿಗೆ ಹುಲಿಯ ಧಾಳಿಯ ಭೀತಿಯು ಗ್ರಾಮದಲ್ಲಿ ಎದುರಾಗಿದೆ. ಅರಣ್ಯ ಇಲಾಖೆಯು ಶಾಶ್ವತ ಪರಿಹಾರಕ್ಕೆ ಮುಂದಾಗಬೇಕಿದೆ ಎಂದರು.

ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಅವರು ಕಾಡಾನೆ ಸಮಸ್ಯೆಯ ಗಂಭೀರತೆಯನ್ನು ಅರಿತು ಸರ್ಕಾರದ ಮಟ್ಟದಲ್ಲಿ ಶಾಶ್ವತ ಪರಿಹಾರಕ್ಕೆ ಮುಂದಾಗಲಿ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಗ್ರಾಮಸ್ಥರಾದ ಚೆಂಬAಡ ಕರುಣ್ ಕಾಳಯ್ಯ ಮಾತನಾಡಿ, ಸರ್ಕಾರವು ಜಿಲ್ಲೆಯ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಕಾಡಾನೆಗಳ ದಾಳಿ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಅಲ್ಲದೆ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು. ಬೆÀಳೆಗಾರರಿಗೆ, ಗ್ರಾಮಸ್ಥರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.

ಗ್ರಾಮಸ್ಥರಿಂದ ಮನವಿ ಸ್ವೀಕರಿಸಿ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಅವರು ಗ್ರಾಮಸ್ಥರ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಇಲಾಖೆ ವತಿಯಿಂದ ಪ್ರಯತ್ನಿಸಲಾಗುವುದು. ಹುಲಿಯನ್ನು ಸೆರೆಹಿಡಿಯಲು ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಹುಲಿಯ ಚಲನವಲನಗಳ ಮಾಹಿತಿ ಪಡೆದುಕೊಂಡು ಸೆರೆಹಿಡಿಯಲಾಗುವು ದೆಂದರು. ಕಾಡಾನೆಗಳ ಹಾಗೂ ಹುಲಿಯ ಸಮಸ್ಯೆಯನ್ನುಶೀಘ್ರ ಬಗೆಹರಿಸದಿದ್ದಲ್ಲಿ ಗ್ರಾಮಸ್ಥರು, ಬೆಳೆಗಾರರು ಜಂಟಿಯಾಗಿ ಕಚೇರಿಯ ಮುಂದೆ ಅನಿರ್ಧಿಷ್ಟಾವಧಿ ಧರಣಿ ಮಾಡುವುದಾಗಿ ಇಲಾಖೆಯ ಅಧಿಕಾರಿ ಗಳಿಗೆ ಗ್ರಾಮಸ್ಥರು ಎಚ್ಚರಿಕೆಯಿತ್ತರು.

ಪ್ರತಿಭಟನೆ ಸಂದರ್ಭ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್, ಚೆಂಬೆಬೆಳ್ಳೂರು, ಪುದುಕೋಟೆ, ಐಮಂಗಲ, ಮಗ್ಗುಲ, ಕೋಟೆಕೊಪ್ಪ, ಕುಕ್ಲೂರು ಬೊಳ್ಳರಿಮಾಡು ಗ್ರಾಮಗಳ ಗ್ರಾಮಸ್ಥರಾದ ಉಳ್ಳಿಯಡ ಜೀವನ್, ಕೊಳುವಂಡ ಗಣಪತಿ, ವೀರಪ್ಪ, ಚೆಂಗಪ್ಪ, ಚಂಬAಡ ಸಂತೋಷ್, ಜನತಾ, ಪಿ. ನಾಚಪ್ಪ, ಚಾರಿಮಂಡ ಜೀವನ್, ಮಂಡೇಪAಡ ಗಣೇಶ್ ಕುಟ್ಟಂಡ ಪ್ರಭು, ಒಕ್ಕಲಿಗರ ಡಾಲು ಮತ್ತಿತರ ಗ್ರಾಮಸ್ಥರು ಹಾಜರಿದ್ದರು.

-ಕಿಶೋರ್ ಕುಮಾರ್ ಶೆಟ್ಟಿ