ಅನಿಲ್ ಎಚ್.ಟಿ.

ಮಡಿಕೇರಿ, ನ. ೨೦: ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯಲ್ಲಿ ಇಂಡಿಯನ್ ಫಿಲ್ಟರ್ ಕಾಫಿ ಚಾಂಪಿಯನ್ ಶಿಪ್ ಸ್ಪರ್ಧೆ ಸ್ಪರ್ಧಿಗಳ ಉತ್ಸಾಹದೊಂದಿಗೆ ಆಯೋಜಿಸಲ್ಪಟ್ಟಿತ್ತು,

ವೈವಿಧ್ಯಮಯ, ಸ್ವಾದಿಷ್ಟ ಫಿಲ್ಟರ್ ಕಾಫಿ ತಯಾರಿಕೆ ನಿಟ್ಟಿನಲ್ಲಿ ಮಡಿಕೇರಿ ಹೊರವಲಯದಲ್ಲಿನ ಬಿಗ್ ಕಪ್ ನಲ್ಲಿ ಸ್ಪೆಷಾಲಿಟಿ ಕಾಫಿ ಅಕಾಡೆಮಿ ಆಫ್ ಇಂಡಿಯಾದ ವತಿಯಿಂದ ಆಯೋಜಿತ ಸ್ಪರ್ಧೆಯಲ್ಲಿ ಕೊಡಗು, ಚಿಕ್ಕಮಗಳೂರು, ಸಕಲೇಶಪುರ, ಹಾಸನ ವ್ಯಾಪ್ತಿಯ ೨೦ ಸ್ಪರ್ಧಿಗಳು ಪಾಲ್ಗೊಂಡಿದ್ದರು, ಸ್ವಾದಿಷ್ಟ ಕಾಫಿಯನ್ನು ತಯಾರಿಸಿ ಕಠಿಣವಾದ ಸ್ಪರ್ಧಾ ತೀರ್ಪುಗಾರಿಕೆಗೆ ನೀಡಿದ್ದ ಸ್ಪರ್ಧಿಗಳು ಎರಡು ಸುತ್ತಿನಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಬೇಕಾಗಿತ್ತು,

ಚಿಕೋರಿ ಮತ್ತು ಸಕ್ಕರೆ ರಹಿತವಾಗಿ ಫಿಲ್ಟರ್ ಕಾಫಿಯನ್ನು ಮೊದಲ ಹಂತದಲ್ಲಿ ತಯಾರಿಸ ಬೇಕಾಗಿದ್ದರೆ ಆಲ್ಕೋಹಾಲ್ ಹೊರತುಪಡಿಸಿದಂತೆ ಹಾಲು, ಚಾಕೋಲೇಟ್, ಹಣ್ಣು, ಸೇರಿದಂತೆ ವಿವಿಧ ದ್ಯವ್ಯಗಳನ್ನು ಬಳಸಲು ಅವಕಾಶವಿದ್ದ ಮತ್ತೊಂದು ಸುತ್ತಿನಲ್ಲಿ ಕೂಡ ಸ್ಪರ್ಧಿಗಳು ನಿಗಧಿತ ೧೦ ನಿಮಿಷದಲ್ಲಿ ಪಿಲ್ಟರ್ ಕಾಫಿಯನ್ನು ತಯಾರಿಸಬೇಕಾದ ಸವಾಲು ಎದುರಿಸಿದರು, ಫಿಲ್ಟರ್ ಕಾಫಿಯ ತಯಾರಿಕೆಯ ಹಂತಕ್ಕೆ ಪ್ರತ್ಯೇಕವಾದ ೧೦ ನಿಮಿಷಗಳ ಕಾಲಾವಧಿ ನಿಗಧಿಯಾಗಿತ್ತು,

ಇದೇ ಮೊದಲ ಬಾರಿಗೆ ಕೊಡಗಿನಲ್ಲಿ

(ಮೊದಲ ಪುಟದಿಂದ) ಆಯೋಜಿತ ಫಿಲ್ಟರ್ ಕಾಫಿ ತಯಾರಿಕೆಯ ಚಾಂಪಿಯನ್ ಶಿಪ್ ಸ್ಪರ್ಧೆಯ ತೀರ್ಪುಗಾರರಾಗಿ ಭಾರತದ ವಿವಿಧೆಡೆಗಳ ಸ್ಪರ್ಧಾ ತೀರ್ಪುಗಾರರಾಗಿ ಖ್ಯಾತರಾದ ೯ ಮಂದಿಯ ತಂಡವು ಮಡಿಕೇರಿಗೆ ಬಂದದ್ದು ವಿಶೇಷವಾಗಿತ್ತು,

ನಿರೀಕ್ಷೆಗೂ ಮೀರಿ ಫಿಲ್ಟರ್ ಕಾಫಿ ಟೇಸ್ಟಿಂಗ್ ಸ್ಪರ್ಧೆ ಯಶಸ್ವಿಯಾಗಿದೆ. ಸಾಕಷ್ಟು ಸ್ಧರ್ಧಿಗಳು ಉತ್ಪುಕ ರಾಗಿದ್ದರೂ ಕಾಲಮಿತಿಯಿಂದಾಗಿ ೨೦ ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು, ಈ ಸ್ಪಧೆ೯ಯಲ್ಲಿ ಗೆಲವು ಸಾಧಿಸಿದ ವಿಜೇತ ಕಾಫಿ ತಯಾರಕರು ಮುಂದಿನ ಹಂತವಾಗಿ ಬೆಂಗಳೂರಿನಲ್ಲಿ ಡಿಸೆಂಬರ್ ೪ ರಂದು ಮತ್ತು ಡಿಸೆಂಬರ್ ತಿಂಗಳಿನಲ್ಲಿ ಚೆನ್ನೆöÊನಲ್ಲಿ ಆಯೋಜಿತ ರಾಷ್ಟçಮಟ್ಟದ ಫಿಲ್ಟರ್ ಕಾಫಿ ತಯಾರಿಕಾ ಸ್ಪರ್ಧೆಗೆ ಆಯ್ಕೆಯಾಗುತ್ತಾರೆ ಎಂದು ಕೊಡಗು ಜಿಲ್ಲೆಯಲ್ಲಿ ಸ್ಪರ್ಧೆಯನ್ನು ಆಯೋಜಿಸಿದ ಬಿಗ್ ಕಪ್ ಸಂಸ್ಥೆಯ ಅಧ್ಯಕ್ಷ ಶ್ಯಾಮ್ಯುವಲ್ ನಿಜಾಂ ಮಾಹಿತಿ ನೀಡಿದರು

ರಾಷ್ಟಿçÃಯ ಮಟ್ಟದಲ್ಲಿ ಆಯ್ಕೆಯಾದವರು ನಂತರದ ಹಂತದಲ್ಲಿ ಅಂತರರಾಷ್ಟಿçÃಯ ಕಾಫಿ ಉತ್ಸವದ ಸ್ಪರ್ಧೆಗೆ ಆಯ್ಕೆಯಾಗಲಿದ್ದು ಅಲ್ಲಿ ಜಾಗತಿಕ ಮಟ್ಟದಲ್ಲಿ ಫಿಲ್ಟರ್ ಕಾಫಿಯ ಸ್ವಾದಿಷ್ಟತೆಯ ಚಾಂಪಿಯನ್ ಶಿಪ್ ಸ್ಪರ್ಧೆ ಜರುಗಲಿದೆ.

ಕಾಫಿ ಮಂಡಳಿ ಅಧ್ಯಕ್ಷರ ಮೆಚ್ಚುಗೆ

ಮಡಿಕೇರಿಯಲ್ಲಿ ಸ್ಪರ್ಧೆಯನ್ನು ಉದ್ಗಾಟಿಸಿ ಮಾತನಾಡಿದ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್, ಇಂಥ ಪ್ರತಿಷ್ಟಿತ ಸ್ಪರ್ಧೆ ಕಾಫಿ ಜಿಲ್ಲೆಯಾದ ಕೊಡಗಿನಲ್ಲಿ ಆಯೋಜಿತವಾಗಿರುವುದು ಸಂತೋಷ ತಂದಿದೆ. ಈ ಮೂಲಕ ಮಹಾನಗರ ಗಳಲ್ಲಿ ಮಾತ್ರ ಆಯೋಜಿತವಾಗುತ್ತಿದ್ದ ಇಂಥ ಸ್ಪರ್ಧೆಯನ್ನು ಕೊಡಗಿನಂಥ ಪುಟ್ಟ ಜಿಲ್ಲೆಯಲ್ಲಿ ಕೂಡ ಆಯೋಜಿಸ ಬಹುದು ಎಂಬುದನ್ನು ನಿರೂಪಿಸಿದೆ, ಸ್ವಾದಿಷ್ಟ ಕಾಫಿ ತಯಾರಿಕೆಯ ಸ್ಪರ್ಧೆಗೆ ಮಹಿಳೆಯರೂ ಸೇರಿದಂತೆ ಕಾಫಿ ಜಿಲ್ಲೆಗಳ ಕಾಫಿ ತಯಾರಕರು ಉತ್ಪಾಹದಿಂದ ಪಾಲ್ಗೊಂಡದ್ದು ಸ್ಪರ್ಧೆಯನ್ನು ಅರ್ಥಪೂರ್ಣ ವಾಗಿಸಿದೆ. ಇಂಥ ಸ್ಪರ್ಧೆಯ ಮೂಲಕ ಭಾರತೀಯ ಕಾಫಿಯು ಮತ್ತಷ್ಟು ಪ್ರಚಾರದೊಂದಿಗೆ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸಿಕೊಳ್ಳಲಿದೆ ಎಂದು ಹೇಳಿದರು.

ಸ್ಪೆಷಾಲಿಟಿ ಕಾಫಿ ಅಕಾಡೆಮಿ ಆಫ್ ಇಂಡಿಯಾದ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಕಳೆದ ವರ್ಷ ಬೆಂಗಳೂರಿನಲ್ಲಿ ಆಯೋಜಿತ ವಾಗಿದ್ದ ಸ್ಪೆಷಾಲಿಟಿ ಕಾಫಿ ತಯಾರಿಕೆಯ ಪ್ರಥಮ ಹಂತದ ಸ್ಪರ್ಧೆ ಈ ಬಾರಿ ಕಾಫಿ ನಾಡೆಂದು ಖ್ಯಾತವಾದ ಕೊಡಗಿನ ಮಡಿಕೇರಿಯಲ್ಲಿ ಯಶಸ್ವಿಯಾಗಿ ಆಯೋಜಿತವಾಗಿದ್ದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾಫಿ ಕೆಫೆಗಳು, ಕಾಫಿ ರೋಸ್ಟರ್ ಸಂಸ್ಥೆಗಳು ಮಾತ್ರವಲ್ಲದೇ ಗೃಹಿಣಿಯರೂ ಕೂಡ ಪಿಲ್ಟರ್ ಕಾಫಿ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಸ್ವಾದಿಷ್ಟ ಫಿಲ್ಟರ್ ಕಾಫಿ ತಯಾರಿಕೆಯ ಪ್ರಾವಿಣ್ಯತೆ ಪ್ರದರ್ಶಿಸಿದ್ದು ಗಮನಾರ್ಹವಾಗಿತ್ತು,

ಸ್ಪರ್ಧೆಯಲ್ಲಿ ಅಗಸ್ತö್ಯ ಕಾಫಿಯ ಶಶಾಂಕ್ ವಿಜೇತರಾಗಿ ಹೊರಹೊಮ್ಮಿದರು.