ಮುಳ್ಳೂರು, ನ. ೨೦: ಕಾವೇರಿ ಸ್ವಾಸ್ಥö್ಯ ಸೇವಾಯಾತ್ರಾ-೨.೦ ಕಾರ್ಯಕ್ರಮದಡಿಯಲ್ಲಿ ಸೇವಾ ಭಾರತಿ ಮಡಿಕೇರಿ ಮತ್ತು ನ್ಯಾಷನಲ್ ಮೆಡಿಕೋಸ್ ಆರ್ಗನೈಜೆ಼Ãಷನ್ ಹಾಗೂ ಮೆಡಿಕಲ್ ಕಾಲೇಜ್ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಗ್ರಾಮದಲ್ಲಿರುವ ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಶಿಬಿರವನ್ನು ಗ್ರಾಮದ ಹಿರಿಯರಾದ ಈರಪ್ಪ ಮತ್ತು ನಾಗಣ್ಣ ಉದ್ಘಾಟಿಸಿದರು.
ಕಾರ್ಯಕ್ರಮದ ಕುರಿತು ಮಡಿಕೇರಿ ವೈದ್ಯಕೀಯ ಕಾಲೇಜಿನ ವೈದ್ಯ ಡಾ. ಅಭಿಷೇಕ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಕೆಮ್ಮು, ಜ್ವರ ಮುಂತಾದ ಸಾಮಾನ್ಯ ಖಾಯಿಲೆಗಳಿಗೆ ಸಂಬAಧಪಟ್ಟ ಚಿಕಿತ್ಸೆಗಾಗಿ ಪಟ್ಟಣಗಳಿಗೆ ಹೋಗಬೇಕಾಗುತ್ತದೆ ಈ ನಿಟ್ಟಿನಲ್ಲಿ ಜಿಲ್ಲಾ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿರುವ ವೈದ್ಯರ ತಂಡ ಆರೋಗ್ಯ ಕೇಂದ್ರಗಳಿಗೆ ತೆರಳಿ ಜನರಿಗೆ ಆರೋಗ್ಯ ಉಚಿತ ತಪಾಸಣೆಯನ್ನು ನಡೆಸಲಾಗುತ್ತಿದೆ ಇದು ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಯಾಗಿದೆ ಕೊಡಗು ಜಿಲ್ಲೆಯಲ್ಲಿ ಸೇವಾ ಭಾರತಿ ಆಶ್ರಯದಲ್ಲಿ ಈ ದಿನ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ ತಪಾಸಣೆ, ದೇಹತೂಕ ಪರೀಕ್ಷೆ ಪೌಷ್ಟಿಕಾಂಶ ಮೌಲ್ಯ ಮಾಪನ ಇನ್ನು ಮುಂತಾದ ಆರೋಗ್ಯ ತಪಾಸಣೆ ನಡೆಸಲಾಯಿತು. ಶಿಬಿರದಲ್ಲಿ ಹಿರಿಯ ವೈದ್ಯಕೀಯ ವಿದ್ಯಾರ್ಥಿಗಳಾದ ಡಾ. ಹನುಮಂತ್ ರಾವ್, ಡಾ. ಚಂದನ್, ಡಾ. ವಿನಿತ್, ಡಾ. ರಕ್ಷಿತ್, ಡಾ. ತನುಶ್ರೀ ಆರೋಗ್ಯ ತಪಾಸಣೆ ನಡೆಸಿದರು.
ಈ ಸಂದರ್ಭ ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಅನುಶ್ರೀ, ಆಶಾ ಕಾರ್ಯಕರ್ತೆ ಪಲ್ಲವಿ ಸೇವಾ ಭಾರತಿ ಕಾರ್ಯಕರ್ತ ನಿಡ್ತ ಸುರೇಶ್, ನಿಡ್ತ ಗ್ರಾ.ಪಂ.ಮಾಜಿ ಸದಸ್ಯ ವಿಜಯ್‌ಕುಮಾರ್ ಮುಂತಾದವರು ಹಾಜರಿದ್ದರು.