*ಗೋಣಿಕೊಪ್ಪ, ನ. ೨೦: ಮೈಸೂರಿನಲ್ಲಿ ನಡೆದ ೨೭ನೇ ಶೊರಿನ್ ಕೈ ನ್ಯಾಷನಲ್ ಕರಾಟೆ ಪಂದ್ಯಾವಳಿಯಲ್ಲಿ ಲಯನ್ಸ್ ಶಾಲೆಯ ವಿದ್ಯಾರ್ಥಿಗಳು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಕತಾ ವಿಭಾಗದಲ್ಲಿ ಪಿ. ದರ್ಶಿನಿ ದ್ವಿತೀಯ ಮತ್ತು ಕುಮಿಟೆ ವಿಭಾಗದಲ್ಲಿ ತೃತೀಯ ಸ್ಥಾನವನ್ನು, ಪಿ. ದಕ್ಷ ಕತಾ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಟೆರೆಷಿಯನ್ ಕಾಲೇಜು ಇಂಡೋರ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ನಡೆದ ೨೭ನೇ ಶೊರಿನ್ ಕೈ ನ್ಯಾಷನಲ್ ಕರಾಟೆ ಮತ್ತು ಕುಬುಡೋ ಚಾಂಪಿಯನ್‌ಶಿಪ್‌ನಲ್ಲಿ ಪದಕ ಪಡೆದುಕೊಂಡಿದ್ದಾರೆ.

ಈ ವಿದ್ಯಾರ್ಥಿಗಳು ಗೋಣಿಕೊಪ್ಪಲು ಪಟೇಲ್‌ನಗರ ನಿವಾಸಿಗಳಾದ ವಕೀಲೆ ಕಲ್ಪನಾ ಹಾಗೂ ಪ್ರದೀಪ್ ದಂಪತಿ ಪುತ್ರಿಯರಾಗಿದ್ದಾರೆ. ಈಶ್ವರ್ ತರಬೇತುದಾರರಾಗಿದ್ದಾರೆ.