ಮಡಿಕೇರಿ, ನ. ೨೦: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ., ಮಡಿಕೇರಿ, ಸಹಕಾರ ಇಲಾಖೆ, ಕೊಡಗು ಜಿಲ್ಲೆ, ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘ ನಿ., ಇವರ ಸಂಯುಕ್ತ ಆಶ್ರಯದಲ್ಲಿ ೭೧ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ‘ಸಹಕಾರಿ ಉದ್ಯಮಗಳಲ್ಲಿ ಪರಿವರ್ತನೆ’ ದಿನಾ ಚರಣೆಯನ್ನು ಗುಡ್ಡೆಹೊಸೂರು ಸಮು ದಾಯ ಭವನದ ಸಭಾಂಗಣದಲ್ಲಿ ಏರ್ಪಡಿಸಲಾಯಿತು.
ಈ ಸಂದರ್ಭ ಸಂಘದ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರುಗಳಾದ ಸಿ.ಟಿ. ಮೇದಪ್ಪ, ಕೆ.ಎನ್. ಚಂದ್ರಶೇಖರ್, ಬಿ.ಎಸ್. ಧನಪಾಲ್, ಜಿ.ಬಿ. ಅಶ್ವಥ್, ಟಿ.ಬಿ. ಕಾವೇರಪ್ಪ, ಬಿ.ಎಸ್. ಚಂದ್ರಶೇಖರ್, ಪಿ.ಬಿ. ಯತೀಶ್, ಬಿ.ಪಿ. ಗುರುಬಸಪ್ಪ, ಕಿರಣ್ ಕುಮಾರ್ ಅವರನ್ನು ಸನ್ಮಾನಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರಾದ ಎಂ.ಎನ್. ಉಮೇಶ್ ಉತ್ತಪ್ಪ ಅವರು ಮಾತನಾಡಿ, ಮಾಜಿ ಅಧ್ಯಕ್ಷರುಗಳನ್ನು ಗುರುತಿಸಿ, ಗೌರವಿಸಿ ಸನ್ಮಾನಿಸಿದ್ದರಿಂದ ಹಿರಿಯರಲ್ಲಿ ಚೇತನ, ಸ್ಪೂರ್ತಿ ತುಂಬುತ್ತದೆ. ಅಂದು ತಮ್ಮ ಸ್ವಂತ ಕಟ್ಟಡಗಳಲ್ಲಿ ಸಂಘ ನಡೆಸಿ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಿದ ಸಂಘಗಳು ಇಂದು ಸ್ವಂತ ಕಟ್ಟಡವನ್ನು ಹೊಂದಿವೆ. ಈ ಸಂದರ್ಭ ಹಿರಿಯರನ್ನು ಸ್ಥಳೀಯರನ್ನು, ಸಂಘ ಬೆಳೆದು ಬಂದ ಹಾದಿಯನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕೊಡಗಿನೆಲ್ಲೆಡೆ ಹಿಂದಿನAತೆ ಹೈನುಗಾರಿಕೆ ಮಾಡುವಂತಾಗಬೇಕು, ಮಕ್ಕಳು ಹಿರಿಯರು ತಾವೇ ಸಾಕಿದ ಹಸುಗಳ ಉತ್ಪನ್ನವನ್ನು ಬಳಸು ವಂತಾಗಬೇಕು. ಹಳೆಯ ಪದ್ಧತಿ ಪರಂಪರೆಗಳನ್ನು ಸಹ ನಾವು ಉಳಿಸಿ ಬೆಳೆಸಿಕೊಂಡು ಹೋದಲ್ಲಿ ಮನಸ್ಸು ವಿಕಸಿತವಾಗಿ ಆಹ್ಲಾದಗೊಂಡು ಕ್ರಿಯಾತ್ಮಕ ಶಕ್ತಿಯನ್ನು ಪಡೆಯುತ್ತದೆ. ಕಷ್ಟದಲ್ಲಿರುವ ಸಂಸ್ಥೆಗಳಿಗೆ ಉತ್ತಮರು ಹಾಗೂ ಯುವ ನಾಯಕರು ಸೇರಿದಲ್ಲಿ ಸಂಘ ಪುನಶ್ಚೇತನಗೊಳ್ಳುತ್ತದೆ. ಹಿರಿ ಯರು ಸ್ಥಾಪಿಸಿದ ಸಂಘ-ಸAಸ್ಥೆಗಳು ಉಳಿಯಬೇಕು ಹಾಗೂ ಅಭಿವೃದ್ಧಿ ಹೊಂದಬೇಕು ಈ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕೆಂದು ಹೇಳಿದರು. ಸಂಸ್ಥೆಯೊAದು ಉನ್ನತ ಮಟ್ಟಕ್ಕೆ ಬೆಳೆಯಲು ಕಾರಣಿಕರ್ತರಾದ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನಿಸಿ ಗೌರವಿ ಸುವುದು ಧನ್ಯತೆಯ ವಿಷಯವಾಗಿದ್ದು ಸಕಾಲದಲ್ಲಿ ತಮ್ಮ ಅನುಭವ ಹಂಚಿಕೊAಡು ಸಂಘದ ಮತ್ತಷ್ಟು ಅಭಿವೃದ್ಧಿಗೆ ಸಹಕರಿಸಲು ಕಾರ್ಯಕ್ರಮದ ಅಧ್ಯಕ್ಷರು ಹಾಗೂ ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಬಿ.ಎಂ. ಸಾಗರ್ ಅವರು ಮನವಿ ಮಾಡಿಕೊಂಡರು.
ಈ ಸಂದರ್ಭ ಮಾಜಿ ಅಧ್ಯಕ್ಷ ಸಿ.ಟಿ. ಮೇದಪ್ಪ ಅವರ ಪತ್ನಿ ದೀನಾ ಮೇದಪ್ಪ, ಮಾಜಿ ಅಧ್ಯಕ್ಷರುಗಳ ಸಾಧನೆ ಯನ್ನು ಗುರುತಿಸಿ ಸನ್ಮಾನಿಸಿದಕ್ಕಾಗಿ ಕೃತಜ್ಞತೆಗಳನ್ನು ಅರ್ಪಿಸಿದರು. ಶ್ವೇತ ಕ್ರಾಂತಿಯ ಪಿತಾಮಹ ಡಾ. ವರ್ಗಿಸ್ ಕುರಿಯನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ವೇದಿಕೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎನ್.ಎ. ರವಿ ಬಸಪ್ಪ, ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷೆ ಎನ್.ಪಿ. ಸುಲೋಚನಾ ಉಪಸ್ಥಿತರಿದ್ದರು. ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಉಷಾ ಯತೀಶ್ ಪ್ರಾರ್ಥಿಸಿ, ಗುಡ್ಡೆಹೊಸೂರು ಎಂ.ಪಿ.ಸಿ.ಎಸ್.ನ ಕಾರ್ಯದರ್ಶಿ ನವೀನ್ ಸ್ವಾಗತಿಸಿದರು.