ನಾಪೋಕ್ಲು, ನ. ೨೦: ಗ್ರಾಮೀಣ ಕ್ರೀಡಾಕೂಟಗಳಿಂದ ವಿವಿಧ ಜನಾಂಗಗಳ ನಡುವಿನ ಸಾಮರಸ್ಯ ವೃದ್ಧಿಯಾಗಲಿದೆ ಎಂದು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಹೇಳಿದರು. ಪಾರಾಣೆ ಕೇಂದ್ರ ಕ್ರೀಡಾಮಂಡಳಿ ವತಿಯಿಂದ ಪಾರಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ೬೩ನೇ ವರ್ಷದ ಅಂತರ ಗ್ರಾಮಾಂತರ ಕೈಲ್ ಮುಹೂರ್ತ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ವಿವಿಧ ಕ್ರೀಡಾಕೂಟಗಳು ವಿಜೃಂಭಣೆಯಿAದ ನಡೆಯುತ್ತವೆ. ೬೩ ವರ್ಷಗಳ ಕಾಲ ನಿರಂತರವಾಗಿ ಕ್ರೀಡಾಕೂಟವನ್ನು ನಡೆಸಿಕೊಂಡು ಬಂದಿರುವ ಪಾರಾಣೆ ಕೇಂದ್ರ ಕ್ರೀಡಾಮಂಡಳಿ ಪ್ರಯತ್ನ ಶ್ಲಾಘನೀಯ. ಕ್ರೀಡಾಕೂಟಕ್ಕೆ ಡಿಸಿಸಿ ಬ್ಯಾಂಕ್ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಬೃಂದಾವನ ಆಸ್ಪತ್ರೆಯ ನಿರ್ದೇಶಕ, ದಾನಿಗಳು ಆದ ಅಪ್ಪನೆರವಂಡ ಎಸ್ ಮನೋಜ್ ಮಂದಪ್ಪ ಮಾತನಾಡಿ, ಇಂತಹ ಕ್ರೀಡಾಕೂಟಗಳಿಂದ ಗ್ರಾಮೀಣ ಪ್ರತಿಭೆಗಳು ಹೊರಹೊಮ್ಮಲು ಸಹಕಾರಿಯಾಗಿದೆ, ಈ ನಿಟ್ಟಿನಲ್ಲಿ ಪಾರಾಣೆ ಕೇಂದ್ರ ಕ್ರೀಡಾಮಂಡಳಿ ಕಾರ್ಯೋಮುಖವಾಗಿರುವುದು ಹೆಮ್ಮೆಯ ವಿಷಯ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಖೇಲೋ ಇಂಡಿಯಾ ಸೇರಿದಂತೆ ಕ್ರೀಡೆಗೆ ವಿವಿಧ ಹಲವಾರು ಕಾರ್ಯಕ್ರಮ ಯೋಜನೆಗಳನ್ನು ಜಾರಿಮಾಡಿ ಕ್ರೀಡೆಗೆ ಯುವಜನತೆಯನ್ನು ಆಕರ್ಷಿಸುವ ಕಾರ್ಯ ಮಾಡುತ್ತಿದ್ದು ಇದರ ಸದುಪಯೋಗವನ್ನು ಯುವಪೀಳಿಗೆ ಪಡೆದುಕೊಂಡು ಗ್ರಾಮದಿಂದ ರಾಷ್ಟç, ಅಂತರಾಷ್ಟಿçÃಯ ಮಟ್ಟದಲ್ಲಿ ಪ್ರತಿನಿಧಿಸುವಂತಾಗಬೇಕೆAದರು.

ಅAತರಾಷ್ಟಿçÃಯ ಕ್ರೀಡಾಪಟು ಬೊಳ್ಳಂಡ ಉನ್ನತಿ ಅಯ್ಯಪ್ಪ ಮಾತನಾಡಿ ಆಸಕ್ತಿ, ಶ್ರದ್ಧೆ, ಸಾಧಿಸುವ ಛಲ ಇದ್ದರೆ ಯಶಸ್ಸು ಸಾಧ್ಯ ಎಂದರು. ಇಂತಹ ಕಾರ್ಯಕ್ರಮಗಳಿಂದ ಕ್ರೀಡಾಪ್ರತಿಭೆಗಳನ್ನು ಗುರುತಿಸುವ ಕೆಲಸ ಆಗುತ್ತಿದೆ. ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ಪ್ರೋತ್ಸಾಹ ದೊರೆತಲ್ಲಿ ಅವರು ರಾಷ್ಟ್ರೀಯ ಮಟ್ಟಕ್ಕೇರಲು ಸಾಧ್ಯ. ಕ್ರೀಡಾಕ್ಷೇತ್ರಕ್ಕೆ, ರಕ್ಷಣಾ ಕ್ಷೇತ್ರಕ್ಕೆ ಜಿಲ್ಲೆಯ ಕೊಡುಗೆ ಅಪಾರವಾಗಿದ್ದು, ಪ್ರತಿಭೆಗಳನ್ನು ಗುರುತಿಸುವ ಕೆಲಸ ಆಗಬೇಕಿದೆ. ಗ್ರಾಮೀಣ ಕ್ರೀಡಾಕೂಟಗಳು ಉತ್ತಮ ಪ್ರತಿಭೆಗಳು ಹೊರಹೊಮ್ಮಲು ಸಹಕಾರಿಯಾಗಿದೆ. ಯುವಜನರನ್ನು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಹಿರಿಯರ ಜವಾಬ್ದಾರಿಯಾಗಿದೆ ಎಂದರು.

ಪಾರಾಣೆ ಕೇಂದ್ರ ಕ್ರೀಡಾ ಮಂಡಳಿ ಅಧ್ಯಕ್ಷ ಮಚ್ಚಂಡ ಸಾಬ ದೇವಯ್ಯ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಚೈಯ್ಯಂಡ ರಘು ತಿಮ್ಮಯ್ಯ, ಅಂತರಾಷ್ಟಿçÃಯ ಕ್ರೀಡಾಪಟು ಬೊಳ್ಳಂಡ ಉನ್ನತಿ ಅಯ್ಯಪ್ಪ ಅವರನ್ನು ಕ್ರೀಡಾ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.

ಪುರುಷರ ಹಾಕಿ ಟೂರ್ನಿಯಲ್ಲಿ ಬಾವಲಿ ಗ್ರಾಮದ ತಂಡವು ಪ್ರಥಮ ಸ್ಥಾನ ಕಿರುಂದಾಡು ಗ್ರಾಮದ ತಂಡ ದ್ವಿತೀಯ ಸ್ಥಾನಗಳಿಸಿತು. ವಾಲಿಬಾಲ್ ಪಂದ್ಯದಲ್ಲಿ ಕಿರುಂದಾಡು ತಂಡ ಪ್ರಥಮ ಸ್ಥಾನ ಗಳಿಸಿದರೆ ಬಾವಲಿ ತಂಡ ದ್ವಿತೀಯ ಸ್ಥಾನ ಗಳಿಸಿತು. ಮಹಿಳೆಯರ ಥ್ರೋಬಾಲ್ ಸ್ಪರ್ಧೆಯಲ್ಲಿ ಬಲಮುರಿ ತಂಡ ಪ್ರಥಮ ಸ್ಥಾನವನ್ನು, ಕೊಣಂಜಗೇರಿ ತಂಡ ದ್ವಿತೀಯ ಸ್ಥಾನವನ್ನು ಗಳಿಸಿತು. ಪಥಸಂಚಲನದಲ್ಲಿ ಕೊಣಂಜಗೇರಿ ತಂಡ ಪ್ರಶಸ್ತಿ ಗಳಿಸಿತು. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಬಲಮುರಿ ತಂಡ ಪ್ರಥಮ ಸ್ಥಾನ ಹಾಗೂ ಕೈಕಾಡು ತಂಡ ದ್ವಿತೀಯ ಸ್ಥಾನ ಗಳಿಸಿತು.

ಪುರುಷರ ವಿಭಾಗದಲ್ಲಿ ಗ್ರಾಮಾಂತರ ವೈಯಕ್ತಿಕ ಚಾಂಪಿಯನ್ ಆಗಿ ಕೊಣಂಜಗೇರಿಯ ಪೊಂಜಾAಡ ಅಯ್ಯಪ್ಪ ಹೊರಹೊಮ್ಮಿದರು. ಮಹಿಳೆಯರ ವಿಭಾಗದಲ್ಲಿ ದೇವಜನ ಪಿ.ಕೃಪಾ ವೈಯಕ್ತಿಕ ಚಾಂಪಿಯನ್ ಶಿಪ್ ಗಳಿಸಿದರು. ಕಿರುಂದಾಡು ಗ್ರಾಮವು ಗ್ರಾಮಾಂತರ ಸಮಗ್ರ ಚಾಂಪಿಯನ್ ಶಿಪ್ ಗಳಿಸಿತು. ಗೇಮ್ಸ್ ವಿಭಾಗದಲ್ಲಿ ಕಿರುಂದಾಡು ಗ್ರಾಮ ಚಾಂಪಿಯನ್ ಆಯಿತು. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಟ್ರೋಫಿ ಹಾಗೂ ನಗದು ಬಹುಮಾನಗಳನ್ನು ಗಣ್ಯರು ವಿತರಿಸಿದರು.

ವೇದಿಕೆಯಲ್ಲಿ ಕೊಣಂಜಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಡೆಯಂಡ ಕಟ್ಟಿ ಕುಶಾಲಪ್ಪ, ಕಾಫಿ ಬೆಳೆಗಾರರಾದ ಮೂವೇರ ಧರಣಿ ಗಣಪತಿ, ಅಪ್ಪನೆರವಂಡ ರಾಜ್ಯ ಪೂವಯ್ಯ, ಬೊಳ್ಳಂಡ ಅಯ್ಯಪ್ಪ, ಗೌರವ ಕಾರ್ಯದರ್ಶಿ ಅಪ್ಪನೆರವಂಡ ಬಿ. ರಾಜೇಶ್, ಉಪಾಧ್ಯಕ್ಷ ಬೊಳ್ಳಚೆಟ್ಟಿರ ಜಯಂತಿ ಉಪಸ್ಥಿತರಿದ್ದರು.

ವಿಜೇತರಿಗೆ ದಾನಿಗಳಾದ ಕಿರುಂದಾಡು ಗ್ರಾಮದ ನಾಳಿಯಂಡ ನಿವೃತ್ತ ಪೊಲೀಸ್ ಇನ್ಸ್ಪೆಕ್ಟರ್ ದಿ.ಡಿ. ತಿಮ್ಮಯ್ಯ ಮತ್ತು ದಿ. ನಾಳಿಯಂಡ ಡಿ. ಕಾಮವ್ವ ಇವರ ಮಕ್ಕಳಾದ ನಾಳಿಯಂಡ ಟಿ. ಸುಬ್ಬಯ್ಯ ಮತ್ತು ನಾಳಿಯಂಡ ಟಿ. ದೇವಯ್ಯ ಹಾಗೂ ಪಾರಾಣೆ ಕೃಷಿ ಪತ್ತಿನ ಸಹಕಾರ ಸಂಘದ ಸ್ಥಾಪಕ ಕಾರ್ಯದರ್ಶಿ ದಿ. ಅಪ್ಪನೆರವಂಡ ಜೋಯಪ್ಪ ಇವರ ಜ್ಞಾಪಕಾರ್ಥ ಪತ್ನಿ ದೇವಕ್ಕಿ ಜೋಯಪ್ಪ ಮತ್ತು ಮಗ ಅಪ್ಪನೆರವಂಡ ವಿಜಯ್ ಪ್ರಾಯೋಜಿಸಿದ ಟ್ರೋಫಿಗಳನ್ನು ವಿತರಿಸಲಾಯಿತು.

ಸಮಾರಂಭಕ್ಕೆ ಮೊದಲು ಪುರುಷ ಮತ್ತು ಮಹಿಳೆಯರ ಅಂತಿಮ ಹಗ್ಗಜಗ್ಗಾಟ ಕ್ರೀಡಾಪಟುಗಳನ್ನು ಅತಿಥಿಗಳು ಪರಿಚಯಿಸಿಕೊಂಡು ಉದ್ಘಾಟಿಸಿ ಶುಭ ಹಾರೈಸಿದರು.

ಬೊಳ್ಳಂಡ ಗೀತಾ ಶರೀನ್ ಪ್ರಾರ್ಥಿಸಿ, ಕ್ರೀಡಾಮಂಡಳಿ ಕಾರ್ಯದರ್ಶಿ ಅಪ್ಪನೆರವಂಡ ರಾಜೇಶ್ ಸ್ವಾಗತಿಸಿ, ಶಿಕ್ಷಕಿ ಕಸ್ತೂರಿ ಮತ್ತು ಮಂಜು ನಿರೂಪಿಸಿದರು.

ತೀರ್ಪುಗಾರರಾಗಿ ಪಿ.ಆರ್. ಮಂಜು. ಎಂ.ಜಿ. ದೇವಯ್ಯ, ಸಿ.ಕೆ. ತಿಮ್ಮಯ್ಯ, ಸಿ.ಬಿ. ಕಸ್ತೂರಿ, ಎಂ.ಎA. ವಸಂತಿ, ಕೆ.ಎಂ. ದೇಚಮ್ಮ, ಎಂ.ಜಿ. ಚಿನ್ನಪ್ಪ, ವೀಕ್ಷಿತಾ ಕಾರ್ಯನಿರ್ವಹಿಸಿದರು.

ಕ್ರೀಡಾ ಹಬ್ಬದಲ್ಲಿ ಬಾವಲಿ, ಕಿರುಂದಾಡು, ಪಾರಾಣೆ, ಕೈಕಾಡು ಹಾಗೂ ಬಲಮುರಿ ಗ್ರಾಮಗಳ ಕ್ರೀಡಾಪಟುಗಳು ಹಾಗೂ ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. - ದುಗ್ಗಳ ಸದಾನಂದ