ಮಡಿಕೇರಿ, ನ. ೨೦: ವೀರಾಜಪೇಟೆ ತಾಲೂಕು ಮೈದಾನದಲ್ಲಿ ನಡೆದ ಕಲ್ಲುಬಾಯ್ಸ್ ಕಲ್ಲುಬಾಣೆ ಲೈಕ್ಸ್ ಫ್ಯಾಶನ್ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ನಿಯೋನ್ ಎಫ್.ಸಿ. ತಂಡವು ಚಾಂಪಿಯನ್ ಪ್ರಶಸ್ತಿಯನ್ನು ಅಲಂಕರಿಸುವುದರ ಮೂಲಕ ಅತ್ಯಾಕರ್ಷಕ ಟ್ರೋಫಿಯೊಂದಿಗೆ ೧.೨೫ ಲಕ್ಷ ರೂ. ನಗದು ತಮ್ಮದಾಗಿಸಿಕೊಂಡಿತು. ಜಿದ್ದಾಜಿದ್ದಿನಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ನಿಯೋನ್ ಎಫ್.ಸಿ. ತಂಡವು ಕೊಡಗಿನ ಬಲಿಷ್ಠ ತಂಡವಾದ ಮಿಡ್ ಸಿಟಿ ಸುಂಟಿಕೊಪ್ಪ ತಂಡವನ್ನು ಎದುರಿಸಿತು.

ಎರಡು ತಂಡವು ಫೈನಲ್ ಪಂದ್ಯದಲ್ಲಿ ೧-೧ ಗೋಲುಗಳನ್ನು ಬಾರಿಸಿ ಸಮಬಲ ಸಾಧಿಸಿತು. ಅಂತಿಮವಾಗಿ ಪೆನಾಲ್ಟಿ ಶೂಟೌಟ್‌ನಲ್ಲಿ ೨-೧ ಗೋಲುಗಳ ಅಂತರದಿAದ ನಿಯೋನ್ ಎಫ್.ಸಿ. ಗೆಲುವು ಸಾಧಿಸಿತು. ಮಿಡ್‌ಸೆಟ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಇದಕ್ಕೂ ಮೊದಲು ನಡೆದ ಮೊದಲನೇ ಸೆಮಿಫೈನಲ್ ಪಂದ್ಯವು ನಿಯೋನ್ ಎಫ್.ಸಿ. ಅಮ್ಮತ್ತಿ ಹಾಗೂ ಟ್ರೆಡೀಶನಲ್ ಟೂರಿಸಮ್ ತಂಡಗಳ ನಡುವೆ ನಡೆಯಿತು. ಎರಡು ತಂಡಗಳು ಯಾವುದೇ ಗೋಲುಗಳಿಸದೆ ಸಮಬಲ ಸಾಧಿಸಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಕೂಡ ಎರಡು ತಂಡಗಳು ೫-೫ ಗೋಲುಗಳನ್ನು ಬಾರಿಸಿ ಸಮಬಲ ಸಾಧಿಸಿತು. ಅಂತಿಮವಾಗಿ ಟಾಸ್ ಮೂಲಕ ವಿಜೇತ ತಂಡವನ್ನು ಆಯ್ಕೆಮಾಡಲಾಯಿತು. ಟಾಸ್ ಅದೃಷ್ಟ ಪರೀಕ್ಷೆಯಲ್ಲಿ ನಿಯೋನ್ ಎಫ್.ಸಿ. ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ಎರಡನೇ ಸೆಮಿಫೈನಲ್ ಪಂದ್ಯವು ಮಿಡ್ ಸಿಟಿ ಸುಂಟಿಕೊಪ್ಪ ಹಾಗೂ ಅಮಿಗೋಸ್ ಕಲ್ಲುಬಾಣೆ ತಂಡಗಳ ನಡುವೆ ನಡೆಯಿತು. ನಿಗದಿತ ಸಮಯದಲ್ಲಿ ಎರಡು ತಂಡಗಳು ೧-೧ ಗೋಲು ಬಾರಿಸಿ ಸಮಬಲ ಸಾಧಿಸಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಮಿಡ್ ಸಿಟಿ ತಂಡವು ೭-೬ ಗೋಲುಗಳ ಅಂತರದಿAದ ಗೆದ್ದು ಫೈನಲ್ ಪ್ರವೇಶಿಸಿತು. ಸೆಮಿಫೈನಲ್ ಪಂದ್ಯದಲ್ಲಿ ಮಿಡ್ ಸಿಟಿ ತಂಡದ ಗೋಲ್ ಕೀಪರ್ ಕೆವಿನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದುಕೊಂಡರು. ಕಲ್ಲು ಬಾಯ್ಸ್ ಫ್ಯಾಶನ್ ಕಪ್ ಎರಡನೇ ಆವೃತ್ತಿಯ ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ನಿಯೋನ್ ಎಫ್.ಸಿ. ಗೋಲ್ ಕೀಪರ್ ಶಾಹುಲ್ ಪಡೆದುಕೊಂಡರು. ಅತ್ಯುತ್ತಮ ಗೋಲ್ ಕೀಪರ್ ಮಿಡ್ ಸಿಟಿ ತಂಡದ ಕೆವಿನ್, ಅತ್ಯುತ್ತಮ ಡಿಫೆಂಡರ್ ನಿಯೋನ್ ಎಫ್.ಸಿ. ತಂಡದ ಮಣಿ, ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಮಣಿ ಪಡೆದುಕೊಂಡರು.