ಸೋಮವಾರಪೇಟೆ, ನ. ೨೦: ಸಮೀಪದ ತೋಳೂರು ಶೆಟ್ಟಳ್ಳಿಯಲ್ಲಿ ಅನಾರೋಗ್ಯದಿಂದ ಮೃತಪಟ್ಟ ಬಡ ವ್ಯಕ್ತಿಯ ಅಂತ್ಯಸAಸ್ಕಾರವನ್ನು ಸ್ಥಳೀಯರೇ ನಡೆಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ತೋಳೂರುಶೆಟ್ಟಳ್ಳಿಯಲ್ಲಿ ನೆಲೆಸಿದ್ದ ಪೈಂಟರ್ ರಾಜಣ್ಣ (೭೪) ಅವರು ತೀರ ಕಡುಬಡವರಾಗಿದ್ದು, ಇಂದು ಮನೆಯಲ್ಲಿಯೇ ಮೃತಪಟ್ಟಿದ್ದರು. ಅವರ ಸಂಬAಧಿಕರು ಯಾರೂ ಸಹ ಇಲ್ಲಿ ಇಲ್ಲದ್ದರಿಂದ ತೋಳೂರು ಶೆಟ್ಟಳ್ಳಿ ಗ್ರಾಮದ ಯುವಕರು ಮೃತ ವ್ಯಕ್ತಿಯ ಅಂತಿಮ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದರು.

ಸೋಮವಾರಪೇಟೆಯ ಕರ್ಕಳ್ಳಿ ಲಯನ್ಸ್ ರುದ್ರಭೂಮಿಯಲ್ಲಿ ಮೃತದೇಹದ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶೇಖರ್, ನವೀನ, ಮಾಜಿ ಸದಸ್ಯ ರಜಿತ್, ಬಸವರಾಜು, ರವಿ, ಮಂಜುನಾಥ, ಲಯನ್ಸ್ ಅಧ್ಯಕ್ಷ ಶಿವಕುಮಾರ್, ಜಿ.ಪಂ. ಮಾಜಿ ಸದಸ್ಯ ವೆಂಕಪ್ಪ ಅವರುಗಳು ಸಹಕರಿಸಿದರು. ಮೃತ ಶರೀರವನ್ನು ವಣಗೂರುಕೊಪ್ಪದ ಉಮೇಶ್ ತಮ್ಮ ವಾಹನದಲ್ಲೇ ರುದ್ರಭೂಮಿಗೆ ಸಾಗಿಸಿದರು. ಕಡುಬಡವರಾಗಿರುವ ರಾಜಣ್ಣ ಅವರ ಪತ್ನಿ ಶಕುಂತಲ ಅವರಿಗೆ ಒಂದಿಷ್ಟು ದೇಣಿಗೆ ಸಂಗ್ರಹಿಸಿ ನೀಡುವ ಮೂಲಕ ಮಾನವೀಯ ಕಾರ್ಯ ಮಾಡಿದರು.