ಮಡಿಕೇರಿ, ನ. ೨೦: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ರಾಜ್ಯ ಸಂರಕ್ಷಿತ ಸ್ಮಾರಕಗಳ ಪೈಕಿ ಒಂದಾಗಿರುವ ಕೊಡಗು ರಾಜರ ಗದ್ದುಗೆಗಳಿಗೆ ಸೇರಿದ ಜಾಗದಲ್ಲಿ ಆಗಿರುವ ಒತ್ತುವರಿ ಹಾಗೂ ಅನಧಿಕೃತ ಮನೆ, ಕಟ್ಟಡಗಳ ನಿರ್ಮಾಣಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಸರಕಾರದಿಂದ ಆದೇಶ ಜಾರಿಯಾಗಿದೆ. ಗದ್ದುಗೆ ವ್ಯಾಪ್ತಿಯ ಪ್ರದೇಶ ೧೯.೮೬ ಏಕರೆ ಜಾಗವನ್ನು ಹೊಂದಿದ್ದು ಈ ಜಾಗದ ಪೈಕಿ ೧.೧೮ ಏಕರೆಯಷ್ಟು ಪ್ರದೇಶ ಒತ್ತುವರಿಯಾಗಿದ್ದು ಇಲ್ಲಿ ಹಲವು ರೀತಿಯ ಅನಧಿಕೃತ ನಿರ್ಮಾಣಗಳಾಗಿವೆ ಎಂಬುದಾಗಿ ನೀಡಲಾಗಿರುವ ವರದಿಯನ್ವಯ ಗದ್ದುಗೆ ಜಾಗ ಒತ್ತುವರಿ ಪ್ರಕರಣದ ವಿರುದ್ಧ ಕಳೆದ ಹಲವು ವರ್ಷಗಳ ಹಿಂದಿನಿAದಲೇ ಆಗ್ರಹ ಕೇಳಿಬಂದಿತ್ತಲ್ಲದೆ ಹೋರಾಟಗಳೂ ನಡೆದಿದ್ದವು. ಈ ವಿಚಾರ ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದು, ಈ ಹಿಂದೆಯೇ ನ್ಯಾಯಾಲಯದ ಮೂಲಕವೂ ಆದೇಶ ಜಾರಿಯಾಗಿದ್ದನ್ನು, ಪರ-ವಿರೋಧ ಹೋರಾಟಗಳು ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.
ತಹಶೀಲ್ದಾರ್ ವರದಿ, ಜಿಲ್ಲಾಧಿಕಾರಿಗಳ ವರದಿಗಳನ್ನು ಉಲ್ಲೇಖಿಸಿ ಈ ಬಗ್ಗೆ ಸಮರ್ಪಕವಾದ ವಿವರವನ್ನು ಈ ಹಿಂದೆಯೇ ಸರಕಾರ-ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಆದರೂ ಕಾರಣಾಂತರಗಳಿAದ ಈ ವಿಚಾರ ಈ ತನಕವೂ ನೆನೆಗುದಿಗೆ ಬಿದ್ದಿತ್ತು. ಇದೀಗ ನವೆಂಬರ್ ೪ ರಂದು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಮಹಮದ್ ಇಬ್ರಾಹಿಂ ಅವರು ಸರಕಾರದ ಆದೇಶವನ್ನು ಪ್ರಕಟಿಸಿದ್ದಾರೆ.
ರಾಜ್ಯ ಸಂರಕ್ಷಿತ ಸ್ಮಾರಕವಾದ ರಾಜರ ಗದ್ದುಗೆಗೆ ಸೇರಿದ ೧೯.೮೬ ಏಕರೆಯಲ್ಲಿ ೧.೧೮ ಏಕರೆ ಜಮೀನಿನಲ್ಲಿ ಒಟ್ಟು ೨೮(ಜನರು-ಇಲಾಖೆ-ಉದ್ದಿಮೆ) ಅನಧಿಕೃತ ನಿರ್ಮಾಣಗಳಾಗಿವೆ. ವಾಸದ ಮನೆಗಳು, ಶಾಲೆ, ತೋಟಗಾರಿಕೆ ಇಲಾಖೆಯ ವತಿಯ ಹೊಟೇಲ್, ಐಟಿ.ಡಿ.ಪಿ(ಬಿ.ಸಿ.ಎಂ) ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಇತ್ಯಾದಿ ಕಟ್ಟಡಗಳನ್ನು, ಒತ್ತುವರಿದಾರರು ಈ ಆದೇಶ ಸ್ವೀಕರಿಸಿದ ೧೫ ದಿನಗಳೊಳಗೆ ತೆರವುಗೊಳಿಸುವಂತೆ ಆದೇಶಿಸಲಾಗಿದೆ.
ನಿಗದಿಪಡಿಸಿದ ಅವಧಿಯೊಳಗೆ ಅಕ್ರಮವಾಗಿ ನಿರ್ಮಾಣಗೊಂಡಿರುವ ಕಟ್ಟಡಗಳನ್ನು ತೆರವುಗೊಳಿಸುವಲ್ಲಿ ಸಂಬAಧಪಟ್ಟವರು ವಿಫಲರಾದಲ್ಲಿ ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ಮತ್ತು ಅವಶೇಷಗಳ ಅಧಿನಿಯಮ ೧೯೬೧ ಕಲಂ ೨೦(೨)ಅನ್ವಯ ಜಿಲ್ಲಾಧಿಕಾರಿಗಳು ಈ ಕಟ್ಟಡಗಳನ್ನು ತೆರವುಗೊಳಿಸಲು ಕಾನೂನು ರೀತಿ ತಕ್ಷಣ ಕ್ರಮವಹಿಸಬೇಕು ಎಂದೂ ಆದೇಶದಲ್ಲಿ ಸೂಚಿಸಲಾಗಿದೆ.
ಗದ್ದುಗೆ ಜಾಗ ಸಂರಕ್ಷಣೆಗೆ ೨೦೨೧ರಲ್ಲಿ ನ್ಯಾಯಾಲಯದಿಂದ ಆದೇಶ
ಮಡಿಕೇರಿಯಲ್ಲಿನ ಪುರಾತನವಾದ ಗದ್ದುಗೆ ಹಾಗೂ ಇದಕ್ಕೆ ಸೇರಿದ ಜಾಗವನ್ನು ಸಂರಕ್ಷಿಸುವAತೆ ಆಗಿನ ರಾಜ್ಯ ಉಚ್ಚನ್ಯಾಯಾಲಯದ ವಿಭಾಗೀಯ ಪೀಠದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ಅವರು ೨೦೨೧ರ ಮಾರ್ಚ್ನಲ್ಲಿ ಆದೇಶಿಸಿದ್ದರು. ಕೊಡಗಿನ ಐ.ಎ.ಎಸ್ ನಿವೃತ್ತ ಅಧಿಕಾರಿ ಜೆ.ಎಸ್. ವಿರೂಪಾಕ್ಷಪ್ಪ ಉಚ್ಚ ನ್ಯಾಯ್ಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿ ಗದ್ದುಗೆಗೆ ಸೇರಿದ ಜಾಗವನ್ನು ಅನೇಕ ಮಂದಿ ಒತ್ತುವರಿ ಮಾಡಿ ಮನೆ ಕಟ್ಟಿಕೊಂಡು ಗದ್ದುಗೆಯ ಸ್ಮಾರಕದ ಅಂದಗೆಡವಿದ್ದಾರೆ.
(ಮೊದಲ ಪುಟದಿಂದ) ಇದನ್ನು ಸಂರಕ್ಷಿಸಲು ಸರಕಾರ ವಿಫಲಗೊಂಡಿರುವುದಾಗಿ ದೂರಿದ್ದರು. ಅರ್ಜಿದಾರರಾದ ವಿರೂಪಾಕ್ಷಪ್ಪ ಅವರ ಪರವಾಗಿ ವಿಭಾಗೀಯ ಪೀಠದ ಮುಂದೆ ವಾದ ಮಂಡಿಸಿದ ವಕೀಲ ಎನ್.ರವೀಂದ್ರನಾಥ್ ಕಾಮತ್ ಅವರು ಈ ಹಿಂದೆ ಕೇಂದ್ರ ಸರಕಾರದ ಅಧೀನದಲ್ಲಿದ್ದ ಮಡಿಕೇರಿ ಗದ್ದುಗೆಯನ್ನು ಕಳೆದ ೧೯೮೧ರಲ್ಲಿ ರಾಜ್ಯ ಸರಕಾರಕ್ಕೆ ವಹಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಇದರÀ ಸಂರಕ್ಷಣೆ ಬಗ್ಗೆ ಸರಕಾರ ಕಾಳಜಿ ವಹಿಸದ್ದರಿಂದ ಗದ್ದುಗೆಯ ಕಟ್ಟಡಗಳ ಶಿಥಿಲಾವಸ್ಥೆಗೆ ಕಾರಣವಾಗಿದೆ. ಜೊತೆಗೆ ಈ ರಾಜರ ಗದ್ದುಗೆಯ ೧೯ ಏಕರೆ ೮೬ ಸೆಂಟುಗಳಷ್ಟು ಜಾಗದ ಪೈಕಿ ಬಹುಪಾಲು ಜಾಗವನ್ನು ಕೆಲವರು ಅತಿಕ್ರಮಿಸಿ ಕಟ್ಟಡವನ್ನು ಕಟ್ಟಿಕೊಂಡಿದ್ದಾರೆ. ಈ ಸಂಬAಧದಲ್ಲಿ ಮಡಿಕೇರಿ ತಾಲೂಕು ತಹಶೀಲ್ದಾರ್ ಅವರಿಗೆ ೧೨ ವರ್ಷಗಳ ಹಿಂದೆಯೇ ದೂರು ನೀಡಲಾಗಿದ್ದರೂ ಗದ್ದುಗೆ ಜಾಗದ ಅತಿಕ್ರಮಣಕಾರರನ್ನು ತೆರವುಗೊಳಿಸಲು ಅಧಿಕಾರಿಗಳು ವಿಫಲಗೊಂಡಿದ್ದು, ಗದ್ದುಗೆ ಹಾಗೂ ಇದರ ಜಾಗವನ್ನು ಸಂರಕ್ಷಿಸುವAತೆ ವಿಭಾಗೀಯ ಪೀಠದ ಮುಂದೆ ವಾದಿಸಿದ್ದರು.
ವಿಭಾಗೀಯ ಪೀಠದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ಅವರು ಗದ್ದುಗೆಯ ಜಾಗವನ್ನು ಸರ್ವೆ ಮಾಡಿ ಅತಿಕ್ರಮಿಸಿರುವ ಜಾಗವನ್ನು ಗುರುತಿಸಬೇಕು. ನಂತರ ಅತಿಕ್ರಮಣಕಾರರನ್ನು ತೆರವುಗೊಳಿಸಿ ಗದ್ದುಗೆಯನ್ನು ಸಂರಕ್ಷಿಸುವುದರೊAದಿಗೆ ಗದ್ದುಗೆಯನ್ನು ಎಲ್ಲ ರೀತಿಯಿಂದಲೂ ಸ್ಮಾರಕವಾಗಿ ರಕ್ಷಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಅಂದು ಆದೇಶಿಸಿದ್ದರು. ಇದರ ಬೆನ್ನಲ್ಲೇ ಹಲವು ಬಾರಿ ಪರ-ವಿರೋಧಗಳ ನಡುವೆ ಒತ್ತುವರಿ ಜಾಗದ ಸರ್ವೇ ಕಾರ್ಯ ಕೂಡ ನಡೆದಿತ್ತು. ಆದರೆ ಇದೀಗ ಸರಕಾರದ ಮಟ್ಟದಿಂದಲೇ ಒತ್ತುವರಿ ತೆರವಿಗೆ ಆದೇಶ ಬಂದಿರುವುದು ಹೊಸ ಬೆಳವಣಿಗೆಯಾಗಿದೆ.