ಸೋಮವಾರಪೇಟೆ, ನ. ೨೦: ದೇಶದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾಗಾAಧಿ ಅವರ ಜನ್ಮ ದಿನವನ್ನು ಸೋಮವಾರಪೇಟೆ ಪಟ್ಟಣದಲ್ಲಿ ಆಚರಿಸಲಾಯಿತು. ಇಂದಿರಾ ಗಾಂಧಿ ಅಭಿಮಾನಿಗಳ ಸಂಘದಿAದ ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು ಅವರು, ಇಂದಿರಾ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಉಕ್ಕಿನ ಮಹಿಳೆ ಎಂದೇ ಹೆಸರು ಮಾಡಿದ್ದ ಇಂದಿರಾಗಾAಧಿ ಅವರ ಆಡಳಿತ ವೈಖರಿ ಇಂದಿಗೂ ಮಾದರಿಯಾಗಿದೆ ಎಂದು ಅಭಿಪ್ರಾಯಿಸಿದರು.
ಈ ಸಂದರ್ಭ ಉಪಾಧ್ಯಕ್ಷ ಅಜಯ್, ಕಾರ್ಯದರ್ಶಿ ಹೆಚ್.ಬಿ. ರಾಜಪ್ಪ, ಸಲಹೆಗಾರ ಹೆಚ್.ಎನ್. ಹೂವಯ್ಯ, ಪಳನಿಸ್ವಾಮಿ, ಮಂಜು, ಮೊಹಿದ್ದೀನ್, ಮೋಹನ್, ನಾಗರಾಜು, ರಾಜೇಶ್, ಸಂಗಮೇಶ್, ಕಂಬಳ್ಳಿ ಲೋಕೇಶ್, ಶಿವ ಸೇರಿದಂತೆ ಇತರರು ಉಪಸ್ಥಿತರಿದ್ದರು. ಜನ್ಮ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.