ಸೋಮವಾರಪೇಟೆ, ನ. ೨೦: ಮಂಗಳೂರಿನಲ್ಲಿ ವೃದ್ಧರೋರ್ವರು ಸಾವನ್ನಪ್ಪಿದ್ದು, ಜಿಲ್ಲೆಯ ಹಟ್ಟಿಹೊಳೆ ಮೂಲದವರೆಂದು ಸಂಶಯಿಸಲಾಗಿದೆ. ಸದ್ಯ ಮೃತದೇಹ ವೆನ್ ಲಾಕ್ ಆಸ್ಪತ್ರೆಯಲ್ಲಿದ್ದು, ಮೃತರ ಪತ್ತೆಗೆ ಕೊಣಾಜೆ ಪೊಲೀಸರು ಮನವಿ ಮಾಡಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಮಂಗಳೂರಿನ ಉಳ್ಳಾಲ ಸಮೀಪದ ಕಂಬಪದವು ಎಂಬಲ್ಲಿ, ಸಾರ್ವಜನಿಕ ಪ್ರದೇಶದಲ್ಲಿ ತಂಗುತ್ತಿದ್ದ ವೃದ್ಧ, ಇಂದು ಬೆಳಿಗ್ಗೆ ಸಾವಿಗೀಡಾಗಿದ್ದು, ಹೃದಯಾಘಾತ ಸಂಭವಿಸಿರಬಹುದು ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ.
ಆಗಾಗ್ಗೆ ಊರಿಗೆ ಹೋಗಿ ಬರುತ್ತಿದ್ದ ವೃದ್ಧ, ಕಂಬಪದವು ಭಾಗದಲ್ಲಿ ಸಣ್ಣಪುಟ್ಟ ಕೂಲಿ ಕೆಲಸ ಮಾಡಿಕೊಂಡಿದ್ದರು. ತನ್ನ ಊರು ಹಟ್ಟಿಹೊಳೆ, ಹೆಸರು ಕೃಷ್ಣ, ಪತ್ನಿ ಹಾಗೂ ಈರ್ವರು ಮಕ್ಕಳಿದ್ದಾರೆ ಎಂದಷ್ಟೇ ಮಾಹಿತಿ ನೀಡಿದ್ದರು. ಕಳೆದ ಒಂದೂವರೆ ತಿಂಗಳ ಹಿಂದೆ ಊರಿಗೆ ಹೋಗಿ ವಾಪಸ್ ಬಂದಿದ್ದ ಇವರು, ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಕುಟುಂಬದವರು ಇದ್ದಲ್ಲಿ ಮೊ. ೯೦೩೫೫೮೭೧೫೧ ಸಂಖ್ಯೆಗೆ ಮಾಹಿತಿ ನೀಡುವಂತೆ ಅಲ್ಲಿನ ಪೊಲೀಸರು ಮನವಿ ಮಾಡಿದ್ದಾರೆ.