ಸೋಮವಾರಪೇಟೆ, ನ. ೨೦: ಮೊನ್ನೆ ದಿನ ಸಮೀಪದ ತಣ್ಣೀರುಹಳ್ಳ ಗ್ರಾಮದಲ್ಲಿ ನಡೆದ ಹೊಡೆದಾಟ ಪ್ರಕರಣಕ್ಕೆ ಸಂಬAಧಿಸಿದAತೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಒಟ್ಟು ೭ ಮಂದಿಯ ವಿರುದ್ಧ ಮೊಕದ್ದಮೆ ದಾಖಲಾಗಿದ್ದು, ಓರ್ವನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಎರಡೂ ಕಡೆಯವರು ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ತಣ್ಣೀರು ಹಳ್ಳ ಗ್ರಾಮದ ಅಂಕಿತ ಎಂಬವರು ನೀಡಿದ ದೂರಿನ ಮೇರೆ ಅದೇ ಗ್ರಾಮದ ಹೇಮಂತ್, ನಯನ ಹಾಗೂ ಗಗನ್ ಅವರುಗಳ ಮೇಲೆ ಮೊಕದ್ದಮೆ ದಾಖಲಾಗಿದ್ದು, ಹೇಮಂತ್ ಎಂಬವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಂಕಿತ ಅವರು ಮನೆಯಲ್ಲಿದ್ದ ಸಂದರ್ಭ ಅರಣ್ಯ ಇಲಾಖೆಯವರು ಬಂದಿದ್ದು, ಮೀಸಲು ಅರಣ್ಯ ಒತ್ತುವರಿ ವಿಚಾರದ ಬಗ್ಗೆ ಮಾಹಿತಿ ಕೇಳಿದ್ದಾರೆ. ಈ ಸಂದರ್ಭ ನೆರೆಮನೆಯ ಹೇಮಂತ್ ಹಾಗೂ ಪತ್ನಿ ನಯನ, ಮಗ ಗಗನ್ ಅವರುಗಳು ನನ್ನ ವೀಡಿಯೋ ಮಾಡುತ್ತಿದ್ದು, ಇದನ್ನು ಪ್ರಶ್ನಿಸಿದ ಸಂದರ್ಭ, ಅವಾಚ್ಯ ಶಬ್ದಗಳಿಂದ ನಿಂದಿಸಿ ನನ್ನನ್ನು ತಳ್ಳಿದ್ದಾರೆ. ನಾನು ಜೋರಾಗಿ ಕಿರುಚಿಕೊಂಡಾಗ ನನ್ನ ಪತಿ ಹಾಗೂ ಮಾವ ಬಂದು ತಡೆದಿದ್ದಾರೆ. ಈ ಸಂದರ್ಭ ಹೇಮಂತ್ ಅವರು ದೊಣ್ಣೆಯಿಂದ ನನ್ನ ಪತಿ ಹಾಗೂ ಮಾವನವರ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ಅಂಕಿತ ದೂರು ನೀಡಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದೇ ತಮ್ಮ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಜಾಲನೆ ಮಾಡಿಕೊಂಡು ಬಂದು ನಮನ್ನು ಕೊಲ್ಲುವ ಉದ್ದೇಶದಿಂದ ಡಿಕ್ಕಿ ಪಡಿಸಲು ಬಂದಿದ್ದಾರೆ ಎಂದು ನೀಡಿದ ದೂರಿನ ಮೇರೆ ಮೂವರ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಈ ದೂರಿಗೆ ಸಂಬAಧಿಸಿದAತೆ ಹೇಮಂತ್ ಅವರನ್ನು ಬಂಧಿಸಲಾಗಿದೆ.
ಇದೇ ಘಟನೆಗೆ ಸಂಬAಧಿಸಿದAತೆ ಹೇಮಂತ್ ಅವರು ಆಸ್ಪತ್ರೆಗೆ ದಾಖಲಾಗಿ ಪೊಲೀಸ್ ದೂರು ನೀಡಿದ್ದು, ನಾಲ್ವರ ವಿರುದ್ದ ಮೊಕದ್ದಮೆ ದಾಖಲಾಗಿದೆ. ಹೇಮಂತ್ ಅವರು ಮನೆಯಲ್ಲಿದ್ದ ಸಂದರ್ಭ ಆಗಮಿಸಿದ ನೆರೆಮನೆ ನಿವಾಸಿಗಳಾದ ಸೋಮಣ್ಣ, ಶೋಭಾ, ಪ್ರಜ್ಞಾ ಹಾಗೂ ಸಂಪತ್ ಅವರುಗಳು, ನೀನು ಹೇಗೆ ಮೀಸಲು ಅರಣ್ಯದಿಂದ ಮರಗಳನ್ನು ಸಾಗಿಸುತ್ತೀಯಾ ಎಂದು ಜಗಳ ತೆಗೆದು ಪತ್ನಿ, ಪುತ್ರ ಸೇರಿದಂತೆ ತನ್ನ ಮೇಲೂ ಹಲ್ಲೆ ನಡೆಸಿದ್ದಾರೆ. ಆಸ್ಪತ್ರೆಗೆ ಬರುವ ಸಂದರ್ಭ ಕಾರನ್ನು ತಡೆದು ಮುಂಭಾಗದ ಗಾಜು ಒಡೆದಿದ್ದಾರೆ ಎಂದು ನೀಡಿದ ದೂರಿನ ಮೇರೆ ನಾಲ್ವರ ವಿರುದ್ದ ಮೊಕದ್ದಮೆ ದಾಖಲಾಗಿದೆ.
ಪೊಲೀಸ್ ಇನ್ಸ್ಪೆಕ್ಟರ್ ಮುದ್ದು ಮಹದೇವ ಅವರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.