ಮಡಿಕೇರಿ, ನ. ೨೧: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಕೊಡಗು ಇವರ ವತಿಯಿಂದ ೨೦೨೪-೨೫ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಜನಾಂಗದವರಿಗೆ ನಿಗಮದಿಂದ ಸಮುದಾಯ ಆಧಾರಿತ ತರಬೇತಿ ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಸಮುದಾಯ ಆಧಾರಿತ ತರಬೇತಿ ಯೋಜನೆಯಲ್ಲಿ ಯುವಕ/ ಯುವತಿಯರಿಗೆ ರಿಮೋಟ್ ಪೈಲಟ್ ವಿಮಾನ (ಡ್ರೋನ್ ಆಪರೇಟರ್) ತರಬೇತಿ ನೀಡಲಾಗುವುದು, ಈ ಯೋಜನೆಗೆ ಅರ್ಜಿ ಸಲ್ಲಿಸಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಈ ತರಬೇತಿಯು ೧೫ ದಿವಸಗಳ ವಸತಿ ಸಹಿತ ತರಬೇತಿಯಾಗಿದ್ದು ೧೦ ದಿವಸ ಕ್ಲಾಸ್ ರೂಮ್ (ಖಿheoಡಿಥಿ) ಮತ್ತು ೫ ದಿವಸ ಪ್ರಾಯೋಗಿಕ (Pಡಿಚಿಛಿಣiಛಿಚಿಟ) ತರಬೇತಿ ಇರುತ್ತದೆ. ವಿದ್ಯಾರ್ಹತೆ ತರಬೇತಿಗೆ ಅಗತ್ಯವಿರುವಂತೆ ವಾಸದ ವ್ಯವಸ್ಥೆ, ಊಟ, ಉಪಹಾರ ಇತ್ಯಾದಿಗಳನ್ನು ತರಬೇತಿಯಲ್ಲಿ ನೀಡಲಾಗುವುದು. ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ವಯೋಮಿತಿ ೧೮-೪೫ ವರ್ಷ ಆಗಿರುತ್ತದೆ.

ನಿಗಮದ ವೆಬ್‌ಸೈಟ್ hಣಣಠಿs://ಞmಜಛಿoಟಿಟiಟಿe.ಞಚಿಡಿಟಿಚಿಣಚಿಞಚಿ.gov.iಟಿ/ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಅರ್ಜಿ ಸಲ್ಲಿಸಿದ ನಂತರ ಸೂಕ್ತ ದಾಖಲಾತಿಗಳ ಪ್ರತಿಗಳನ್ನು “ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಮೌಲಾನಾ ಅಜಾದ್ ಭವನ, ಗ್ರಾಮಾಂತರ ಪೊಲೀಸ್ ಠಾಣೆ ಹತ್ತಿರ, ಎಫ್.ಎಂ.ಸಿ. ಕಾಲೇಜು ರಸ್ತೆ, ಮಡಿಕೇರಿ ಜಿಲ್ಲೆ ಈ ಕಚೇರಿಗೆ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ ೦೮೨೭೨-೨೦೧೪೪೯ ಸಹಾಯವಾಣಿ ಸಂಖ್ಯೆ ೮೨೭೭೭೯೯೯೯೦ಗೆ ಸಂಪರ್ಕಿಸಬಹುದಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿಸೆಂಬರ್ ೫ ಕೊನೆಯ ದಿನವಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.