ಗೋಣಿಕೊಪ್ಪಲು, ನ. ೨೧: ಪೊನ್ನಂಪೇಟೆ ತಾಲೂಕಿನ ಕುಟ್ಟಂದಿಯ ಕುತ್ತುನಾಡು ಹಾಗೂ ಬೇರಳಿ ನಾಡುವಿನ ಪ್ರೌಢಶಾಲೆಯು ವಜ್ರ ಮಹೋತ್ಸವದ ಸಂಭ್ರಮದಲ್ಲಿದ್ದು, ತಾ.೨೫ ರಿಂದ ಡಿ.೧ ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದೆ.

ತಾ.೨೫ರ ಪೂರ್ವಾಹ್ನ ೧೦ ಗಂಟೆಗೆ ಕೆ.ಬಿ. ಪ್ರೌಢಶಾಲಾ ಆವರಣ ದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕಂಜಿತAಡ ಕೆ. ಮಂದಣ್ಣ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ. ಕಾರ್ಯಕ್ರಮವನ್ನು ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷÀ ಕೊಲ್ಲೀರ ಯು. ಬೋಪಣ್ಣ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬಿಟ್ಟಂಗಾಲ ವಿ.ಎಸ್.ಎಸ್.ಎನ್.ನ ಅಧ್ಯಕ್ಷ ಚೇಂದ್ರಿಮಾಡ ಗಣೇಶ್ ನಂಜಪ್ಪ, ಬಿಟ್ಟಂಗಾಲ ಗ್ರಾ.ಪಂ. ಸದಸ್ಯರಾದ ಕಂಜಿತAಡ ಸಂಧ್ಯಾ ಉತ್ತಪ್ಪ, ವಿ.ಬಾಡಗ ಪ್ಲಾಂಟರ್‌ನ ಕರ್ತಮಾಡ ನಂಜಪ್ಪ, ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೂಕಚಂಡ ಪ್ರಸನ್ನ ಸುಬ್ಬಯ್ಯ, ಕಾಫಿ ಬೆಳೆಗಾರರು ಹಾಗೂ ದಾನಿಗಳಾದ ಕಡೇಮಾಡ ಅನಿಲ್ ಕಾಳಪ್ಪ ಭಾಗವಹಿಸಲಿದ್ದಾರೆ.

ತಾ.೨೬ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಜಿಲ್ಲಾಮಟ್ಟದ ಹಾಕಿ ಪಂದ್ಯಾವಳಿ ಉದ್ಘಾಟನೆಗೊಳ್ಳಲಿದ್ದು, ಕಾರ್ಯಕ್ರಮ ಕಂಜಿತAಡ ಕೆ. ಮಂದಣ್ಣ ವಹಿಸಲಿದ್ದಾರೆ. ಕೊಂಗಣ ಬಿ.ಶೆಟ್ಟಿಗೇರಿ ಗ್ರಾಮದ ಶ್ರೀ ಪರಮಾನಂದ ಸ್ವಾಮೀಜಿಗಳು ಪಂದ್ಯಾಟ ಉದ್ಘಾಟನೆ ಮಾಡಲಿದ್ದಾರೆ. ಅತಿಥಿಗಳಾಗಿ ದಾನಿಗಳಾದ ಸುಳ್ಳಿಮಾಡ ಕಾವೇರಪ್ಪ, ಅಮ್ಮೇಕಂಡ ಸವಿತಾ, ಚೇಂದಿರ ವಿನು ಹಾಗೂ ಮದ್ರೀರ ಕಸ್ತೂರಿ ಭಾಗವಹಿಸಲಿದ್ದಾರೆ.

ಡಿ.೧ರಂದು ಪೂರ್ವಾಹ್ನ ೧೦.೩೦ ಗಂಟೆಗೆ ವಜ್ರಮಹೋತ್ಸವದ ಸಭಾ ಕಾರ್ಯಕ್ರಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಕಂಜಿತAಡ ಕೆ.ಮಂದಣ್ಣ ಅಧ್ಯಕ್ಷತೆಯಲ್ಲಿ ಜರುಗಲಿದೆ. ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್. ಬೋಸರಾಜ್, ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಸಂಸದ ಯದುವೀರ್ ಒಡೆಯರ್, ವಿಧಾನ ಪರಿಷತ್ ಸದಸ್ಯರುಗಳಾದ ಮಂಡೇಪAಡ ಸುಜಾ ಕುಶಾಲಪ್ಪ, ಎಸ್.ಎಲ್. ಭೋಜೇಗೌಡ, ಡಾ.ಧನಂಜಯ್ ಸರ್ಜಿ, ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲೀರ ಯು. ಬೋಪಣ್ಣ, ಜಿಲ್ಲಾಧಿಕಾರಿಗಳಾದ ವೆಂಕಟ್‌ರಾಜಾ, ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮತ್ತಿತರರು ಭಾಗವಹಿಸಲಿದ್ದಾರೆ.

ಅಪರಾಹ್ನ ೨ ಗಂಟೆಗೆ ನಡೆಯುವ ಹಾಕಿ ಪಂದ್ಯಾವಳಿಯ ಸಮಾರೋಪ ಸಮಾರಂಭದ ಉದ್ಘಾಟಕರಾಗಿ ದಾನಿಗಳಾದ ಕೊಲ್ಲೀರ ಯು. ಕಾವೇರಮ್ಮ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಯೋಮ್ ಇಂಡಿಯ ಪ್ರೆöÊವೇಟ್ ಲಿಮಿಟೆಡ್‌ನ ಉಪಾಧ್ಯಕ್ಷ ಎಂ.ಬಿ. ವರುಣ್ ಗಣಪತಿ, ಎ ದರ್ಜೆ ಗುತ್ತಿಗೆದಾರ ನಾಮೇರ ನವೀನ್, ದಾನಿಗಳಾದ ಚೇರಂಡ ಮೋಹನ್ ಕುಶಾಲಪ್ಪ, ಕಂಜಿತAಡ ಭಾಗ್ಯ, ಪೊನ್ನಪ್ಪ, ಎಲ್‌ಡಿಸಿ ಕಂಪನಿಯ ವ್ಯವಸ್ಥಾಪಕರಾದ ಸಿ.ಎಂ. ಕಾರ್ಯಪ್ಪ, ಹಾಕಿ ಕೂರ್ಗ್ನ ಅಧ್ಯಕ್ಷ ಪಳಂಗAಡ ಲವಕುಶಾಲಪ್ಪ ಮತ್ತಿತರರು ಭಾಗವಹಿಸಲಿದ್ದಾರೆ.