ಸೋಮವಾರಪೇಟೆ, ನ. ೨೧: ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ೬೯ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಚನ್ನಬಸಪ್ಪ ಸಭಾಂಗಣದಲ್ಲಿ ‘ಸಾಹಿತ್ಸೋತ್ಸವ ೨೦೨೪’ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಕಸಾಪ ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್ ಉದ್ಘಾಟಿಸಿದರು. ನಂತರ ಮಾತನಾಡಿ, ಬಾಲ್ಯದಲ್ಲೇ ಕನ್ನಡ ಸಾಹಿತ್ಯವನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಕಥೆ, ಕವನಗಳನ್ನು ಬರೆಯಲು ಪ್ರಯತ್ನ ಮಾಡಿದರೆ, ಮುಂದೊAದು ದಿನ ಸಾಹಿತಿ, ಕವಿಗಳು ಆಗಬಹುದು ಎಂದು ಹೇಳಿದರು.

ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಸಾಪ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದರಲ್ಲಿ ವಿದ್ಯಾರ್ಥಿಗಳು ಭಾಗಿಯಾಗಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಪರಿಷತ್‌ನ ಮಾಜಿ ಅಧ್ಯಕ್ಷ ಜೆ.ಸಿ. ಶೇಖರ್, ಹೆಚ್.ಜೆ. ಜವರಪ್ಪ, ಮುಖ್ಯ ಶಿಕ್ಷಕಿ ಯಶೋದಮ್ಮ, ಪದಾಧಿಕಾರಿಗಳಾದ ಜಲಕಾಳಪ್ಪ, ನಂಗಾರು ಕೀರ್ತಿ ಪ್ರಸಾದ್, ವಸಂತಿ ರವೀಂದ್ರ, ಡಿ.ಪಿ. ಸತೀಶ್, ಚಿತ್ರಕಲಾ ಶಿಕ್ಷಕ ಹೆಚ್.ಆರ್. ಶೇಖರ್ ಇದ್ದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.