ಗುಡ್ಡೆಹೊಸೂರು, ನ. ೨೧: ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ವಿರುದ್ಧ ಗ್ರಾ.ಪಂ. ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದರು. ೧೮ ಮಂದಿ ಸದಸ್ಯರ ಪೈಕಿ ೧೫ ಮಂದಿ ಅವಿಶ್ವಾಸದ ಪರ ಕೈ ಎತ್ತಿದರು. ಅಪರÀ ಜಿಲ್ಲಾಧಿಕಾರಿ ಐಶ್ವರ್ಯ ಪ್ರಕ್ರಿಯೆ ನಡೆಸಿದರು.

ಕರ್ನಾಟಕ ಗ್ರಾಮ ಪಂಚಾಯಿತಿ ಮತ್ತು ಪಂಚಾಯತ್ ರಾಜ್ ನಿಯಮ ೧೯೯೪ ರ ನಿಯಮದ ಪ್ರಕಾರ ೩ರಷ್ಟು ಮಂದಿ ಅವಿಶ್ವಾಸದ ಪರವಾಗಿ ಮತ ಚಲಾಯಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನ ಬಿಡುವಂತೆ ಅಪರ ಜಿಲ್ಲಾಧಿಕಾರಿ ಸೂಚಿಸಿದರು.