ಶನಿವಾರಸಂತೆ, ನ. ೨೧: ಪಟ್ಟಣದ ತ್ಯಾಗರಾಜ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಡಿಕೇರಿಯ ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಷನ್ ಹಾಗೂ ಸೇವಾ ಭಾರತಿ ಸಂಯುಕ್ತ ಆಶ್ರಯದಲ್ಲಿ ಕಾವೇರಿ ಸ್ವಾಸ್ಥö್ಯ ಸೇವಾಯಾತ್ರಾ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಜ್ಯೋತಿ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದ ಸಾಹಿತಿ ಶ.ಗ. ನಯನತಾರಾ ಮಾತನಾಡಿ, ಎಲ್ಲರ ಜೀವನದಲ್ಲಿ ಆರೋಗ್ಯವೇ ಭಾಗ್ಯ ವಾಗಿದ್ದು, ಆರೋಗ್ಯ ಸುತ್ತಮುತ್ತಲಿನ ಪರಿಸರವನ್ನು ಅವಲಂಬಿಸಿರುತ್ತದೆ.
ಆರೋಗ್ಯ ಒಬ್ಬ ವ್ಯಕ್ತಿಯ ನಿರಂತರ ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ಸಾಮರ್ಥ್ಯವೇ ಆಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಒಂದು ವರದಾನವಾಗಿದೆ.
ಆರೋಗ್ಯದ ಬಗ್ಗೆ ಅತೀವ ಕಾಳಜಿ ಹೊಂದಿರುವ ಗ್ರಾಮಸ್ಥರು ಶಿಬಿರಕ್ಕೆ ಹಾಜರಾಗಿ ತಪಾಸಣೆಗೆ ಒಳಗಾಗಿ ಚಿಕಿತ್ಸೆ ಮತ್ತು ಔಷಧೋಪಚಾರ ಪಡೆದುಕೊಂಡು ಶಿಬಿರವನ್ನು ಯಶಸ್ವಿಗೊಳಿಸಬೇಕು ಎಂದರು. ಶಿಬಿರದಲ್ಲಿ ೧೧೦ ಮಂದಿ ವಿವಿಧ ವೈದ್ಯಕೀಯ ತಪಾಸಣೆ ಮಾಡಿಸಿ ಕೊಂಡರು. ವೈದ್ಯಕೀಯ ತಂಡದಲ್ಲಿ ಮುಖ್ಯ ವೈದ್ಯಾಧಿಕಾರಿಗಳಾಗಿ ಡಾ. ಕಾಂತಶೆಟ್ಟಿ, ಡಾ. ರಾಹುಲ್ ಚಿನ್ನ, ಡಾ. ಕೆ. ಸಾತ್ವಿಕ್ ಕಾರ್ಯ ನಿರ್ವಹಿಸಿದರು. ಇವರ ಜತೆ ಸಹಾಯಕರಾಗಿ ಡಾ. ಎಂ.ಕೆ. ಧನ್ಯಾ, ಡಾ. ವಾದಿತ ಚೌದರಿ, ಡಾ. ವೇದಿಕಾ, ಡಾ. ತೇಜಸ್ ವಿ. ಸ್ವಾಮಿ ಹಾಗೂ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದ ಶುಶ್ರೂಷಕಿ ಯರಾದ ಜೆ. ನಂದಿನಿ, ಎಂ. ವನಿತಾ, ಆಶಾ ಕಾರ್ಯಕರ್ತರು, ಕರ್ತವ್ಯ ನಿರ್ವಹಿಸಿದರು.
ಸೇವಾ ಭಾರತಿಯ ರಾಷ್ಟಿçÃಯ ಸ್ವಯಂ ಸೇವಾ ಸಂಘದ ಕಾರ್ಯಕರ್ತರಾದ ಅಶೋಕ್ ರೈ, ಯೋಗೇಶ್, ಎಸ್.ಎನ್. ರಘು, ಎಸ್.ಆರ್. ರಾಜು, ಕಿರಣ್, ಮುಖೇಶ್, ಶಂಕರ್, ರಾಮಚಂದ್ರ ಶಿಬಿರ ಕಾರ್ಯಕ್ರಮ ಯಶಸ್ವಿಯಾಗಿ ನಿರ್ವಹಿಸಿದರು.