ಸುಂಟಿಕೊಪ್ಪ, ನ. ೨೧: ಸುಂಟಿಕೊಪ್ಪ ಮಲಯಾಳಿ ಸಮಾಜದ ವತಿಯಿಂದ ೧೭ನೇ ವರ್ಷದ ಓಣಂ ಹಬ್ಬದ ಆಚರಣೆಯ ಅಂಗವಾಗಿ ಸೋಮವಾರ ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಇಲ್ಲಿನ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಸಾಂಸ್ಕೃತಿಕ ವೈವಿಧ್ಯಮಯ ನೃತ್ಯ ರೂಪಕಗಳು, ಸಿನಿಮಾ ಹಾಡಿನ ನೃತ್ಯಗಳು, ಪುಟಾಣಿ ಮಕ್ಕಳ ನೃತ್ಯ ಆಕರ್ಷಕವಾಗಿತ್ತು.
ಸಮಾಜದ ಅಧ್ಯಕ್ಷ ಎಂ. ಆರ್. ಶಶಿಕುಮಾರ್, ಉಪಾಧ್ಯಕ್ಷರಾದ ಕನೀಶ್, ಕೆ.ರಾಜೇಶ್, ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ಖಜಾಂಚಿ ವಾಸುದೇವ್, ಸಹ ಕಾರ್ಯದರ್ಶಿ ರಾಜು, ರಾಮಕೃಷ್ಣ, ಸುಬ್ರಮಣಿ, ಅನೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.