ಕೂಡಿಗೆ, ನ. ೨೧: ಭುವನಗಿರಿ ಶ್ರೀ ಭಕ್ತ ಕನಕದಾಸ ಮತ್ತು ಸಂಗೊಳ್ಳಿ ರಾಯಣ್ಣ ಗೆಳೆಯ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಮೊದಲನೇಯ ವರ್ಷದ ಹೊನಲು ಬೆಳಕಿನ ಡಾ. ಮಂತರ್ ಗೌಡ ಕಪ್ ವಾಲಿಬಾಲ್ ಪಂದ್ಯಾವಳಿಯು ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಆಟದ ಮೈದಾನದಲ್ಲಿ ನಡೆಯಿತು.

ಕ್ರೀಡಾಕೂಟದ ಫೈನಲ್ ಪಂದ್ಯಾವಳಿಯ ಉದ್ಘಾಟನೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ನೆರವೇರಿಸಿ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಕ್ರೀಡಾಕೂಟಗಳು ಆಯೋಜನೆಗೊಳ್ಳುವುದರಿಂದ ಯುವಕರು ಒಂದೆಡೆ ಸೇರುವಿಕೆ ಮೂಲಕ ಸ್ನೇಹ ಮನೋಭಾವದ ಮುಖೇನ ಗ್ರಾಮಗಳ ಅಭಿವೃದ್ಧಿ ಪೂರಕವಾಗಲಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಕ್ರೀಡಾ ಕೌಶಲ್ಯದೊಂದಿಗೆ ಐಕ್ಯತೆ, ಒಗ್ಗೂಡುವಿಕೆ ಮೂಲಕ ಭ್ರಾತೃತ್ವದಿಂದ ಬದುಕುವ ಸಂದೇಶವನ್ನು ಸಹ ಕ್ರೀಡಾಕೂಟಗಳು ಕಲಿಸಿಕೊಡುತ್ತವೆ. ಇದರ ಮೂಲಕ ಯುವಕರು ಸಂಘಟನಾತ್ಮಕವಾಗಿ ಕಾರ್ಯ ನಿರ್ವಹಿಸಲು ಅನುಕೂಲ ಕಲ್ಪಿಸುತ್ತದೆ ಎಂದರು.

ಮAತರ್ ಗೌಡ ಕಪ್‌ನಲ್ಲಿ ಆರ್.ಕೆ. ಸ್ಟೆçöÊಕರ್ ಪ್ರಥಮ ಸ್ಥಾನ, ದ್ವಿತೀಯ ಸ್ಥಾನ ಮಾರುತಿ ಯೂತ್ ಫ್ರೆಂಡ್ಸ್, ತೃತೀಯ ರಂಜು ಫ್ರೆಂಡ್ಸ್ ಶಿರಂಗಾಲ, ನಾಲ್ಕನೇ ಸ್ಥಾನವನ್ನು ಟೀಮ್ ಆಗಸ್ಥಿಯಾ ಪಡೆದುಕೊಂಡಿತು.

ವಿಜೇತ ತಂಡಗಳಿಗೆ ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಅನಂತ ಬಹುಮಾನ ವಿತರಣೆ ಮಾಡಿದರು. ಈ ಸಂದರ್ಭ ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ, ಬಸವನಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಎಸ್.ಆರ್. ಅರುಣ್ ರಾವ್, ಕೆ.ಪಿ.ಸಿ.ಸಿ ಸದಸ್ಯ ಮಂಜುನಾಥ ಗುಂಡೂರಾವ್, ನಗರ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕುಶಾಲನಗರ ಕಾಂಗ್ರೆಸ್ ಅಧ್ಯಕ್ಷ ಸೋನ್ಸ್ ವಿಕ್ಟರ್, ಹೆಬ್ಬಾಲೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರ್, ಭುವನಗಿರಿ ಶ್ರೀ ಭಕ್ತ ಕನಕದಾಸ ಗೆಳೆಯರ ಬಳಗದ ಸಂಘದ ಅಧ್ಯಕ್ಷ ರವಿ, ಪ್ರಮುಖರಾದ ಅಂಕುಶ್, ಚರಣ್, ಸಂತೋಷ್, ಕಿರಣ್, ಬಳಗದ ಸದಸ್ಯರು ಸೇರಿದಂತೆ ಪಂದ್ಯಾವಳಿಯಲ್ಲಿ ೧೦ ತಂಡಗಳು ಭಾಗವಹಿಸಿದ್ದವು.