ಅನಿಲ್ ಎಚ್.ಟಿ.
ಮಡಿಕೇರಿ, ನ. ೨೧: ಅನ್ನದಾನ ಮಹಾದಾನ ಎಂಬ ಮಾತಿಗೆ ಮಾದರಿ ಯಾಗಿ ಕಾವೇರಿ ಉಗಮತಾಣ ನಾಡಿನ ಪವಿತ್ರ ತೀರ್ಥ ಕ್ಷೇತ್ರ ತಲಕಾವೇರಿಯಲ್ಲಿ ಕಾವೇರಿ ಜಾತ್ರೆ ಅಂಗವಾಗಿ ಈ ವರ್ಷವೂ ಕೊಡಗು ಏಕೀಕರಣ ರಂಗದಿAದ ಯಶಸ್ವಿಯಾಗಿ ಅನ್ನ ದಾಸೋಹ ಸಂಪೂರ್ಣ ಗೊಂಡಿದೆ. ಈ ವರ್ಷ ೩೦ ದಿನಗಳಲ್ಲಿ ೧.೬೦ ಲಕ್ಷಕ್ಕೂ ಅಧಿಕ ಯಾತ್ರಾರ್ಥಿ ಗಳಿಗೆ ಅನ್ನಸಂತರ್ಪಣೆ, ೪೫ ಸಾವಿರ ಭಕ್ತರಿಗೆ ಬೆಳಗ್ಗಿನ ತಿಂಡಿಯನ್ನು ಏಕೀಕರಣ ರಂಗದ ಕಾರ್ಯಕರ್ತರು ವಿತರಿಸಿದ್ದಾರೆ.
ಕೊಡಗಿನ ಬ್ರಹ್ಮಗಿರಿ ತಪ್ಪಲಿ ನಲ್ಲಿರುವ ತಲಕಾವೇರಿಗೆ ಕಾವೇರಿ ಪವಿತ್ರ ತೀರ್ಥೋದ್ಭವ ಸಂದರ್ಭ ಬರುವ ಸಾವಿರಾರು ಭಕ್ತರಿಗೆ ಸೂಕ್ತ ರೀತಿಯಲ್ಲಿ ಅನ್ನಪ್ರಸಾದ ದೊರಕದೇ ಇರುವುದನ್ನು ಮತ್ತು ಮಹಿಳೆಯರು, ಮಕ್ಕಳು, ಅಸ್ವಸ್ಥರಿಗೆ ಬೆಟ್ಟದ ತಪ್ಪಲಿನಲ್ಲಿ ಕಾವೇರಿ ಜಾತ್ರೆಯ ದಿನಗಳಲ್ಲಿ ಸೂಕ್ತ ಅನ್ನಾಹಾರದ ಅಗತ್ಯತೆಗೆ ವ್ಯವಸ್ಥೆ ಇಲ್ಲದಿರುವುದನ್ನು ಮನಗಂಡು ೩೪ ವರ್ಷಗಳ ಹಿಂದೆ ಜಿಲ್ಲೆಯ ಸಾಮಾಜಿಕ ಸೇವಾ ಸಂಘಟನೆಯಾದ ಕೊಡಗು ಏಕೀಕರಣ ರಂಗ ತಲಕಾವೇರಿಯಲ್ಲಿ ಅನ್ನಪ್ರಸಾದವನ್ನು ಭಕ್ತರಿಗೆ ನೀಡುವ ಕೈಂಕರ್ಯಕ್ಕೆ ಮುಂದಾಯಿತು. ಪ್ರಾರಂಭಿಕ ವರ್ಷದಲ್ಲಿಯೇ ದಾನಿಗಳಿಂದ ಅತ್ಯುತ್ತಮ ಸ್ಪಂದನ ದೊರಕಿತ್ತು.
ಈ ವರ್ಷ ೩೦ನೇ ವರ್ಷದ ಅನ್ನದಾಸೋಹವನ್ನು ಕೊಡಗು ಏಕೀಕರಣ ರಂಗ ಯಶಸ್ವಿಯಾಗಿ ಆಯೋಜಿಸಿದೆ, ತಲಕಾವೇರಿಯ ಅನ್ನಸಂತರ್ಪಣಾ ಭವನದಲ್ಲಿ ಕ್ಷೇತ್ರಕ್ಕೆ ಬಂದ ಭಕ್ತಾದಿಗಳಿಗೆ ಬೆಳಗ್ಗಿನಿಂದ ಸಂಜೆಯವರೆಗೂ ತಿಂಡಿ, ಮಧ್ಯಾಹ್ನದ ಊಟ ವಿತರಿಸುವ ಮೂಲಕ ದಾಖಲೆಯ ವರ್ಷದ ತೃಪ್ತಿ ಹೊಂದಿದೆ.
ಆರAಭವಾದದ್ದು ಹೇಗೆ?
ಹಲವು ವರ್ಷಗಳ ಹಿಂದೆ ತಲಕಾವೇರಿಗೆ ಭಕ್ತನಾಗಿ ತೆರಳಿದ ಸಂದರ್ಭ ನಿವೃತ್ತ ಜಿಲ್ಲಾಧಿಕಾರಿ ರಾಮಕೃಷ್ಣ ಅವರು ಬರೆದ ‘ನಾ ಕಂಡ ಕಾವೇರಿ’ ಎಂಬ ಪುಸ್ತಕ ಕ್ಷೇತ್ರದಲ್ಲಿ ಓದಲು ಸಿಕ್ಕಿತು. ಕ್ಷೇತ್ರದ ಕೆಲವೊಂದು ಅಭಿವೃದ್ಧಿಗೆ ಮುಂದಾಗಿದ್ದ ರಾಮಕೃಷ್ಣ ತಾವು ಬರೆದ ಪುಸ್ತಕದಲ್ಲಿ ಅನೇಕ ಅಪ್ರಸ್ತುತ ವಿಚಾರಗಳನ್ನು ದಾಖಲಿಸಿ ದ್ದರು. ಇದು ನನ್ನ ಅಸಮಾಧಾನಕ್ಕೆ ಕಾರಣವಾಯಿತು. ಇದೇ ಸಂದರ್ಭ ಜತೆಗಿದ್ದ ಮಾತಂಡ ಮೊಣ್ಣಪ್ಪ, ಸತೀಶ್ ಜತೆ ಸೇರಿ ತಲಕಾವೇರಿ ಕ್ಷೇತ್ರದ ಜೀರ್ಣೋದ್ದಾರಕ್ಕೆ ಪಣತೊಟ್ಟೆವು. ನಂತರದ ದಿನಗಳಲ್ಲಿ ಕೆ.ಪಿ. ಚಂದ್ರಕಲಾ, ಜಿ. ಚಿದ್ವಿಲಾಸ್ ಸೇರಿದಂತೆ ಕೊಡಗಿನ ನಾನಾ ಸಮುದಾಯಗಳ ಪ್ರತಿನಿಧಿಗಳೊಂದಿಗೆ ಸೇರಿ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನೇತೃತ್ವದಲ್ಲಿ ಸರ್ಕಾರದ ಪ್ರಧಾನ ಇಂಜಿನಿಯರ್ ಆಗಿದ್ದ
(ಮೊದಲ ಪುಟದಿಂದ) ಟಿ.ಡಿ. ಮನಮೋಹನ್ ಉಸ್ತುವಾರಿಯಲ್ಲಿ ತಲಕಾವೇರಿಯ ಜೀರ್ಣೋದ್ದಾರ ವಾಯಿತು. ಈ ರೀತಿ ಜೀರ್ಣೋ ದ್ದಾರವಾದ ಕ್ಷೇತ್ರದಲ್ಲಿ ಅನ್ನ ಸಂತರ್ಪಣೆಗೆ ವ್ಯವಸ್ಥೆ ಇರಲಿಲ್ಲ. ರಾಜ್ಯದ ಪ್ರತೀ ಪ್ರಮುಖ ಕ್ಷೇತ್ರದಲ್ಲಿಯೂ ಭಕ್ತರಿಗೆ ಅನ್ನಸಂತರ್ಪಣೆಗೆ ವ್ಯವಸ್ಥೆ ಇರುವಾಗ ಕಾವೇರಿ ಮಾತೆಯ ಕ್ಷೇತ್ರದಲ್ಲಿಯೂ ಯಾಕೆ ಈ ವ್ಯವಸ್ಥೆಯಿಲ್ಲ ಎಂದು ಯೋಚಿಸಿ ೧೯೯೦ ರಿಂದ ಕ್ಷೇತ್ರದಲ್ಲಿ ಸಣ್ಣ ಪ್ರಮಾಣದಲ್ಲಿ ಅನ್ನಸಂತರ್ಪಣೆಗೆ ಯೋಜನೆ ರೂಪಿಸಿದೆವು. ಆ ಯೋಜನೆ ಈಗ ಇಷ್ಟೊಂದು ಬೃಹತ್ ರೂಪದಲ್ಲಿ ಭಕ್ತರಿಗೆ ನೆರವಾಗುತ್ತಿದೆ ಎಂದು ಕೊಡಗು ಏಕೀಕರಣ ರಂಗದ ಸಂಚಾಲಕ ತಮ್ಮು ಪೂವಯ್ಯ ಸ್ಮರಿಸಿಕೊಂಡರು.
ಈ ವರ್ಷ ಅಕ್ಟೋಬರ್ ೧೬ ರಿಂದ ನವೆಂಬರ್ ೧೭ ರವರೆಗೆ ಕಾವೇರಿ ಶೀ ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಉಪಹಾರ, ಅನ್ನಪ್ರಸಾದ ನೀಡಲಾಗಿತ್ತು,
ಬೆಳಗ್ಗಿನ ಉಪಹಾರವಾಗಿ ಅಂದಾಜು ೪೫ ಸಾವಿರ ಭಕ್ತರಿಗೆ ಇಡ್ಲಿ, ವಡೆ, ಅಥವಾ ಉಪ್ಪಿಟ್ಟು, ಕೇಸರಿಬಾತ್, ಕಾಫಿ ನೀಡಲಾಗಿದೆ. ಮಧ್ಯಾಹ್ನದ ಹೊತ್ತು ಅನ್ನ, ತರಕಾರಿ ಸಾಂಬಾರು, ಪಲ್ಯ, ಮೊಸರು, ಮಜ್ಜಿಗೆ, ಉಪ್ಪಿನಕಾಯಿ ಜತೆಗೆ ಸಿಹಿಯಾಗಿ ಪಾಯಸವನ್ನು ವಿತರಿಸಲಾಗಿದೆ.
ಅ.೧೭ ರಂದು ಕಾವೇರಿ ತೀರ್ಥೋದ್ಭವದ ದಿನ ಸಾವಿರಾರು ಭಕ್ತಾಧಿಗಳಿಗೆ ಅನ್ನಸಂತರ್ಪಣೆಗಾಗಿ ೧೫ ಜನ ಬಾಣಸಿಗರು ಮತ್ತು ಇತರ ದಿನಗಳಲ್ಲಿ ದಿನನಿತ್ಯ ತಲಾ ೨ ಬಾಣಸಿಗರು, ೧೦ ಸಹಾಯಕ ಸಿಬ್ಬಂದಿಗಳು ನಾಪೋಕ್ಲುವಿನ ಬಾಣಸಿಗ ರವಿ ನೇತೃತ್ವದಲ್ಲಿ ಕಾರ್ಯನಿರ್ವಹಿಸಿದ್ದರು, ಏಕೀಕರಣ ರಂಗದ ೩ ಸದಸ್ಯರು ಪ್ರತೀ ದಿನವೂ ಉಸ್ತುವಾರಿಗಾಗಿ ನಿಯೋಜಿತ ರಾಗಿದ್ದರು. ಸಹಾಯಕರಾಗಿ ಕೆಲಸ ನಿರ್ವಹಿಸಿದ ೧೪ ಜನರಿಗೆ ತಲಾ ರೂ. ೧೫ ಸಾವಿರ ವೇತನವನ್ನು ನೀಡಲಾಗಿದೆ.
ತೆಂಗಿನಕಾಯಿ, ಬಾಳೆ ಕಾಯಿ, ಕುಂಬಳಕಾಯಿ, ಸೋರೆಕಾಯಿ, ಬೂದುಕುಂಬಳ ಸೇರಿದಂತೆ ತರಕಾರಿಗಳು ಬಹುತೇಕ ಸ್ಥಳೀಯ ದಾನಿಗಳಿಂದಲೇ ಅನ್ನಪ್ರಸಾದ ತಯಾರಿಕೆಗೆ ದೊರಕಿದೆ. ಅಂತೆಯೇ ಅನ್ನಪ್ರಸಾದ ಸ್ವೀಕರಿಸಿದ ಅನೇಕ ಭಕ್ತರು ಸ್ವಯಂಪ್ರೇರಣೆಯಿAದ ಈ ಕಾರ್ಯ ಮೆಚ್ಚಿ ನಗದು ರೂಪದಲ್ಲಿಯೂ ನೆರವು ನೀಡಿದ್ದಾರೆ ಎಂದು ಏಕೀಕರಣ ರಂಗದ ತೇಲಪಂಡ ಪ್ರಮೋದ್ ಸೋಮಯ್ಯ ಮಾಹಿತಿ ನೀಡಿದರು. ಕೊಡಗಿನ ಭಕ್ತರು ಯಾರೂ ಬರಿಕೈಯಲ್ಲಿ ಬರಲೇ ಇಲ್ಲ, ತರಕಾರಿ, ಹಣ್ಣು, ಅಕ್ಕಿ, ಬೆಲ್ಲವನ್ನು ಬ್ಯಾಗ್ ನಲ್ಲಿ ಹಿಡಿದುಕೊಂಡೇ ಬಂದು ನಮ್ಮ ಸೇವಾ ಕಾರ್ಯ ನೋಡಿ ತೃಪ್ತಿಯಿಂದ ಕೊಡುಗೆ ನೀಡಿದರು ಎಂದೂ ತಮ್ಮ ಪೂವಯ್ಯ ಹೆಮ್ಮೆಯಿಂದ ಹೇಳಿದರು
ತಲಕಾವೇರಿ ಕ್ಷೇತ್ರಕ್ಕೆ ಕಾವೇರಿ ಜಾತ್ರೆಯ ದಿನಗಳಲ್ಲಿ ತೆರಳಿದ ಸಾವಿರಾರು ಭಕ್ತರಿಗೆ ಈ ವರ್ಷ ಕೊಡಗು ಏಕೀಕರಣ ರಂಗದಿAದ ಮಾತ್ರ ಅನ್ನ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಅತ್ಯಂತ ಅಚ್ಚುಕಟ್ಟಾಗಿ ಸ್ವಾದಿಷ್ಟ ಆಹಾರವನ್ನು ಕಾವೇರಿ ಮಾತೆಯ ಭಕ್ತರಿಗೆ ರಂಗದ ವತಿಯಿಂದ ಅನ್ನಪ್ರಸಾದಕ್ಕಾಗಿನ ಭವನದಲ್ಲಿ ವಿತರಿಸಲಾಗಿದೆ.
೨೦೨೦ರಲ್ಲಿ ಕೋವಿಡ್ ಹಿನ್ನಲೆಯಲ್ಲಿ ಅನ್ನಸಂತರ್ಪಣೆ ಮಾಡಲಾಗಲಿಲ್ಲ. ಉಳಿದಂತೆ ಪ್ರತೀ ವರ್ಷವೂ ವರ್ಷದಿಂದ ವರ್ಷಕ್ಕೆ ಅತ್ಯಧಿಕ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆಯನ್ನು ಮಾಡಿಕೊಂಡು ಬರುತ್ತಿರುವ ತೃಪ್ತಿ ನಮ್ಮದು ಎಂದು ಕೊಡಗು ಏಕೀಕರಣ ರಂಗದ ಸಂಚಾಲಕ ತಮ್ಮು ಪೂವಯ್ಯ ಹೇಳಿದರು.
ಅನ್ನಸಂತರ್ಪಣೆ ಕಾರ್ಯದಲ್ಲಿ ಶ್ರಮಿಸಿದ ಏಕೀಕರಣ ರಂಗದ ಅಧ್ಯಕ್ಷ ಮಂಡೇಪAಡ ಸುಗುಣ ಮುತ್ತಣ್ಣ ನೇತೃತ್ವದಲ್ಲಿ ರಂಗದ ಪ್ರಮುಖರಾದ ತೇಲಪಂಡ ಪ್ರಮೋದ್ ಸೋಮಯ್ಯ, ಬಿದ್ದಾಟಂಡ ತಮ್ಮಯ್ಯ, ಪಾಂಡೀರ ಮುತ್ತಣ್ಣ, ತಾತಪಂಡ ನಯನ, ಕಾವೇರಿ, ಮದನ್, ಅಪ್ಪಂಡೇರAಡ ಡಾಲಿ, ಸುಬ್ಬಯ್ಯ, ಕೇಟೋಳಿರ ಶಮ್ಮಿ,, ಮಂದಪAಡ ಸತೀಶ್, ಪುದಿಯೊಕ್ಕಡ ರಾಜ ಮೇದಪ್ಪ, ನಂದೇಟಿರ ರಾಜ ಮಾದಪ್ಪ ಮತ್ತು ಸ್ಥಳೀಯರನ್ನು ಸ್ಮರಿಸುವುದಾಗಿಯೂ ರಂಗದ ಪ್ರಮುಖರು ಹೇಳಿದರು.