ಕರಿಕೆ, ನ. ೨೧: ಇಲ್ಲಿಗೆ ಸಮೀಪದ ಚೆತ್ತುಕಾಯ ಪಚ್ಚೆಪಿಲಾವು ಗ್ರಾಮದಲ್ಲಿ ನಿರಂತರವಾಗಿ ಉಪಟಳ ನೀಡುತ್ತಿರುವ ಚಿರತೆಯನ್ನು ಸೆರೆ ಹಿಡಿಯಲು ಬೋನ್ ಇರಿಸಲಾಯಿತು.

ಪಚ್ಚೆಪಿಲಾವು ಭಾಗದಲ್ಲಿ ಮೂವತ್ತಕ್ಕೂ ಅಧಿಕ ನಾಯಿಗಳನ್ನು ಬಲಿ ಪಡೆದ ಚಿರತೆ ಸೆರೆಗೆ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಭಾಸ್ಕರ ಬಿ. ಸೂಚನೆಯನ್ವಯ ಭಾಗಮಂಡಲ ವಲಯ ಅರಣ್ಯ ಅಧಿಕಾರಿ ರವೀಂದ್ರ ನೇತೃತ್ವದಲ್ಲಿ ಕರಿಕೆ ಉಪವಲಯ ಅರಣ್ಯ ಅಧಿಕಾರಿ ಸಚಿನ್ ಹಾಗೂ ಸಿಬ್ಬಂದಿಗಳು ಹುಲಿಮನೆ ಜಯಾನಂದರವರ ಜಮೀನಿನಲ್ಲಿ ಬೋನ್ ಇರಿಸಿ ಚಿರತೆ ಚಲನವಲನ ಗಮನಿಸಲು ಕ್ಯಾಮರಾ ಅಳವಡಿಸಲಾಗಿದೆ.

-ಸುಧೀರ್ ಹೊದ್ದೆಟ್ಟಿ