ಕುಶಾಲನಗರ, ನ. ೨೧: ಕುಶಾಲನಗರ ಗಣಪತಿ ದೇವಾಲಯ ಜಾತ್ರೆ ಅಂಗವಾಗಿ ಗುಂಡೂರಾವ್ ಬಡಾವಣೆಯಲ್ಲಿ ನಡೆಯುತ್ತಿರುವ ಮನೋರಂಜನ ಪಾರ್ಕ್ ನಲ್ಲಿ ಸೋಮವಾರಪೇಟೆ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಐಇಸಿ ಮತ್ತು ಎಸ್‌ಬಿಸಿಸಿ ಕಾರ್ಯಕ್ರಮದ ಅಡಿಯಲ್ಲಿ ಆರೋಗ್ಯ ಕಾರ್ಯಕ್ರಮಗಳ ವಸ್ತು ಪ್ರದರ್ಶನ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಆರಂಭಿಸಲಾಗಿದೆ.

ಶಿಬಿರದಲ್ಲಿ ಆರೋಗ್ಯ ಬಗ್ಗೆ ಮಾಹಿತಿ, ರಕ್ತ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ ಮತ್ತು ತುರ್ತು ಸೇವೆಗಳನ್ನು ಒದಗಿಸಲಾಗುವುದು ಎಂದು ವೈದ್ಯಾಧಿಕಾರಿ ಡಾ. ಮಧುಸೂದನ್ ತಿಳಿಸಿದ್ದಾರೆ. ಪ್ರತಿನಿತ್ಯ ಜಾತ್ರಾ ಮೈದಾನದಲ್ಲಿ ಮಧ್ಯಾಹ್ನ ೨ ಗಂಟೆಯಿAದ ರಾತ್ರಿ ೯ ಗಂಟೆ ತನಕ ಈ ಸೇವೆ ಲಭ್ಯವಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಸಂದರ್ಭ ತಾಲೂಕು ವೈದ್ಯಾಧಿಕಾರಿ ಡಾ ಇಂದೂಧರ್, ಡಾ ದೀಪಿಕಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಆರೋಗ್ಯ ನಿರೀಕ್ಷಕರಾದ ಚಂದ್ರೇಶ್ ದಿನೇಶ್, ಮಹೇಶ್, ಆಶಾ ಕಾರ್ಯಕರ್ತೆಯರು ಮತ್ತಿತರರು ಇದ್ದರು.