ಮಡಿಕೇರಿ, ನ. ೨೧: ಜೂನಿಯರ್ ಇಂಡಿಯಾ ಹಾಕಿ ಕ್ಯಾಂಪ್‌ಗೆ ಕರ್ನಾಟಕ ರಾಜ್ಯದಿಂದ ನಾಲ್ವರು ಆಯ್ಕೆಯಾಗಿದ್ದು, ಇವರಲ್ಲಿ ಮೂರು ಆಟಗಾರರು ಕೊಡಗು ಜಿಲ್ಲೆಯವರಾಗಿದ್ದಾರೆ. ಕಳೆದ ಹಲವು ಪಂದ್ಯಾವಳಿಗಳಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿರುವ ಈ ನಾಲ್ವರನ್ನು ಜೂನಿಯರ್ ಇಂಡಿಯಾ ಶಿಬಿರಕ್ಕೆ ಪರಿಗಣಿಸಲಾಗಿದೆ.

ಜಿಲ್ಲೆಯ ಆಟಗಾರರಾದ ಕುಪ್ಪಂಡ ಗೌರವ್ ಗಣಪತಿ, ಮಾತಂಡ ಆರ್ಯನ್ ಉತ್ತಪ್ಪ ಹಾಗೂ ಕುಂಞAಗಡ ತರುಣ್ ಗಣಪತಿ ಅವರುಗಳು ಶಿಬಿರಕ್ಕೆ ಆಯ್ಕೆಯಾಗಿರುವ ಆಟಗಾರರಾಗಿದ್ದಾರೆ. ಇವರೊಂದಿಗೆ ಶಿವಮೊಗ್ಗ ಮೂಲದ ಸುನಿಲ್ ಪಿ.ಬಿ. ಕೂಡ ಅವಕಾಶ ಪಡೆದಿದ್ದು, ರಾಜ್ಯದಿಂದ ನಾಲ್ವರು ಶಿಬಿರ ಸೇರ್ಪಡೆಯಾಗುತ್ತಿದ್ದಾರೆ.