ಕುಶಾಲನಗರ, ನ. ೨೧: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ನೆರೆ ಜಿಲ್ಲೆ ರಾಮನಾಥಪುರ ಬಳಿ ಪತ್ತೆಯಾಗಿದೆ.

ಕೊಪ್ಪ ಸಮೀಪದ ಚಿಕ್ಕ ಹೊಸೂರು ಬಳಿ ಕಳೆದ ಹಲವು ವರ್ಷಗಳಿಂದ ಸಿಮೆಂಟ್ ಕಂಬ ಉತ್ಪಾದನ ಘಟಕದಲ್ಲಿ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದ ದತ್ತರಾಜ್ ಶೆಟ್ಟಿಗಾರ್ (೪೦) ಬುಧವಾರ ಮುಂಜಾನೆಯಿAದ ನಾಪತ್ತೆಯಾಗಿದ್ದರು.

ತನ್ನ ಮೊಬೈಲ್ ಸ್ಟೇಟಸ್‌ನಲ್ಲಿ ದತ್ತರಾಜ್ ಶೆಟ್ಟಿಗಾರ್ ಬುಧವಾರ ಬೆಳಿಗ್ಗೆ ೭. ೨೦ಕ್ಕೆ ಸಂದೇಶವೊAದನ್ನು ನೀಡಿದ್ದು ತನ್ನ ಘಟಕದಿಂದ ಕೆಲವು ಸಮಯದಿಂದ ಸಾಲ ಮೂಲಕ ಸಾಮಗ್ರಿಗಳನ್ನು ಖರೀದಿಸಿರುವ ಕೆಲವು ಗುತ್ತಿಗೆದಾರರು ತನಗೆ ಹಣ ಪಾವತಿ ಮಾಡದೇ ಇರುವ ಕಾರಣ ತಾನು ನೊಂದಿರುವುದಾಗಿ ತಿಳಿಸಿ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿರೋ ಬಗ್ಗೆ ಎಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ವಿಷಯ ಬಿತ್ತರಗೊಂಡಿತ್ತು. ಈ ಸಂಬAಧ ದತ್ತರಾಜ್ ಕುಟುಂಬ ಸದಸ್ಯರು ಮತ್ತು ಫ್ಯಾಕ್ಟರಿ ಸಿಬ್ಬಂದಿಗಳು ದತ್ತ ರಾಜ್ ಹುಡುಕಾಟದಲ್ಲಿ ತೊಡಗಿದ್ದು ಸುಳಿವು ಪತ್ತೆಯಾಗಿರಲಿಲ್ಲ.

ಗುರುವಾರ ಮಧ್ಯಾಹ್ನ ವೇಳೆಗೆ ಸಮೀಪದ ಅರಕಲಗೂಡು ತಾಲೂಕು ರಾಮನಾಥಪುರ ಮುಖ್ಯ ರಸ್ತೆ ಬಳಿ ವ್ಯಕ್ತಿಯೊಬ್ಬನ ಮೃತ ದೇಹ ಪತ್ತೆಯಾಗಿದ್ದು, ವಿಚಾರಣೆ ಸಂದರ್ಭ ದತ್ತರಾಜ್ ಮೃತ ದೇಹ ಎಂಬುದು ಖಚಿತಗೊಂಡಿದೆ. ಮೃತ ದೇಹದ ಮುಖ ಭಾಗದಲ್ಲಿ ರಕ್ತ ಕಲೆಗಳು ಗೋಚರಿಸಿದ್ದು ಸಾವಿನ ಬಗ್ಗೆ ಅನುಮಾನ ಉಂಟಾಗಿದೆ.

ಮೃತ ದತ್ತ ರಾಜ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಳಿ ಕೊಯಿಲಾ ಗ್ರಾಮದ ನಿವಾಸಿಯಾಗಿದ್ದಾರೆ. ಮೃತರು ಪತ್ನಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಕೊಣನೂರು ಪೊಲೀಸರು ವಿಚಾರಣೆ ಕೈಗೊಂಡಿದ್ದು ಆಸ್ಪತ್ರೆಗೆ ಮೃತ ದೇಹ ಸಾಗಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಕೊಣನೂರು ಪೊಲೀಸರು ಮಾಹಿತಿ ನೀಡಿದ್ದಾರೆ. - ಚಂದ್ರಮೋಹನ್