ಪಾಲಿಬೆಟ್ಟ, ನ. ೨೧: ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ರಾಷ್ಟçಧ್ವಜ, ರಾಷ್ಟçಗೀತೆ ಹಾಗೂ ರಾಷ್ಟç ಲಾಂಛನದ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ "ತ್ರಿವರ್ಣ" ಕಾರ್ಯಕ್ರಮವು ಪಾಲಿಬೆಟ್ಟ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.

ನಿವೃತ್ತ ಶಿಕ್ಷಕರು ಹಾಗೂ ಸ್ಕೌಟ್ ಗೈಡ್ಸ್ನ ಸಂಯೋಜಕರಾದ ಜಿಮ್ಮಿ ಸಿಕ್ವೇರ ಅವರು ರಾಷ್ಟçಧ್ವಜ, ರಾಷ್ಟçಗೀತೆ ಹಾಗೂ ರಾಷ್ಟç ಲಾಂಛನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಪುತ್ತಂ ಪ್ರದೀಪ್, ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ಪೊನ್ನಂಪೇಟೆ ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಎನ್. ದಿನೇಶ್, ಕೋಶಾಧಿಕಾರಿ ಅರುಣ್ ಕುಮಾರ್, ನಿರ್ದೇಶಕ ಅಂಥೋಣಿ, ಪ್ರಬಾರ ಮುಖ್ಯ ಶಿಕ್ಷಕಿ ಮಮತ ಕಾಮತ್, ಶಿಕ್ಷಕರಾದ ಮದನ್, ಸವಿತ ಇದ್ದರು. ವೀರಾಜಪೇಟೆ ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಎ.ಎಸ್. ಮುಸ್ತಫ ಸ್ವಾಗತಿಸಿ, ನಿರೂಪಿಸಿ, ಶಾಲಾ ಶಿಕ್ಷಕಿ ನಯನಕುಮಾರಿ ವಂದಿಸಿದರು.