ಕುಶಾಲನಗರ, ನ. ೨೧: ಸರಕಾರಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ಸಂದರ್ಭ ಕಳೆದುಹೋಗಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ಬಸ್ ನಿರ್ವಾಹಕ ಮಾಲೀಕರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ತಾ.೧೯ರಂದು ಭಟ್ಕಳದಿಂದ ಕುಶಾಲನಗರಕ್ಕೆ ಸ್ಥಳೀಯ ಗುಮ್ಮನಕೊಲ್ಲಿ ಕೃಷ್ಣಪ್ಪ ಬಡಾವಣೆಯ ಅನಿಲ್ ಕುಮಾರ್ ಮತ್ತು ರಜನಿ ದಂಪತಿ ಬಸ್ ಹತ್ತುವ ಸಂದರ್ಭ ಸುಮಾರು ೫೦ ಗ್ರಾಂ ತೂಕದ ಚಿನ್ನದ ಸರ ಬಿದ್ದು ಹೋಗಿತ್ತು.

ಈ ಸಂದರ್ಭ ಬಸ್ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಗೋಕರ್ಣ -ಮೈಸೂರು ಬಸ್ ನಿರ್ವಾಹಕ ದೇವೇಂದ್ರಪ್ಪ ಎಂಬವರಿಗೆ ಚಿನ್ನದ ಸರ ಸಿಕ್ಕಿದ್ದು ಅದನ್ನು ಕಳೆದುಕೊಂಡು ಹುಡುಕಾಟದಲ್ಲಿದ್ದ ರಜನಿ ಅವರನ್ನು ಪತ್ತೆಹಚ್ಚಿ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.