ಮಡಿಕೇರಿ, ನ. ೨೧: ಗಾಯಾಳುವಿನ ಜೀವ ಸಂರಕ್ಷಣೆ ಮತ್ತು ರೋಗಿಗೆ ಅನಿವಾರ್ಯತೆಯಾದ ಸಂದರ್ಭದಲ್ಲಿ ನೀಡಲ್ಪಡುವ ರಕ್ತವನ್ನು ದಾನವಾಗಿ ನೀಡುವ ಮಹತ್ವದ ಸೇವೆ ಕೈಗೊಳ್ಳುವ ರಕ್ತದಾನಿಗಳೇ ನಿಜವಾದ ಸೂಪರ್ ಹೀರೋಗಳು ಎಂದು ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಅನಿಲ್ ಎಚ್.ಟಿ. ಹೇಳಿದರು.

ನಗರದ ರೋಟರಿ ಸಭಾಂಗಣದಲ್ಲಿ ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆಯ ೭ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಸಸಿಗೆ ನೀರೆರೆದು ಉದ್ಘಾಟಿಸಿದ ಅನಿಲ್ ಎಚ್.ಟಿ., ಸಮಾಜಮುಖಿ ಯಾದ ಮಾನವನಿಗೆ ಎಲ್ಲಾ ರೀತಿಯಲ್ಲಿಯೂ ತೃಪ್ತಿ ನೀಡಬಲ್ಲ ಕಾರ್ಯವಾಗಿ ರಕ್ತದಾನದಂತಹ ಸೇವೆ ಕಂಡುಬರುತ್ತದೆ. ರಕ್ತದಾನದ ಮೂಲಕ ದಾನಿಯು ಮತ್ತೊಂದು ಜೀವವನ್ನು ಸಂರಕ್ಷಿಸುತ್ತಾನೆ. ಈ ನಿಟ್ಟಿನಲ್ಲಿ ದೇವರು ಕೂಡ ಮೆಚ್ಚುವ ಕೆಲಸ ಮಾಡಿ, ರಕ್ತವನ್ನು ಸಕಾಲಿಕವಾಗಿ ಪಡೆದು ಜೀವ ಉಳಿಸಿಕೊಳ್ಳುವವನ ಪಾಲಿಗೂ ದಾನಿ ದೇವರಂತೆ ಕಾಣುತ್ತಾನೆ. ರಕ್ತ ದಾನಿಗಳೇ ಈ ಸಮಾಜದಲ್ಲಿ ನಿಜವಾದ ಸೂಪರ್ ಹೀರೋಗಳಾಗಿ ದ್ದಾರೆ ಎಂದು ಅಭಿಪ್ರಾಯಪಟ್ಟರು.

ಜಗತ್ತು ಆಧುನಿಕ ತಂತ್ರಜ್ಞಾನಗಳ ನೆರವಿನಿಂದ ಎಷ್ಟೇ ಮುಂದುವರೆ ದಿದ್ದರೂ ಇಂದಿಗೂ ಕೃತಕ ರೀತಿಯಲ್ಲಿ ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಹೀಗಾಗಿಯೇ ರಕ್ತಕ್ಕೆ ಮಹತ್ವ ಎಂದೆAದೂ ಇರುತ್ತದೆ. ಸರ್ಕಾರ ರಕ್ತದಾನಕ್ಕೆ ಸಾಕಷ್ಟು ಪ್ರಚಾರ ಕೈಗೊಂಡಿದ್ದರೂ ಅನೇಕರಲ್ಲಿ ರಕ್ತದಾನದ ಕುರಿತು ಆತಂಕ ಇನ್ನೂ ಇದೆ. ಇಂತಹ ಭಯವನ್ನು ಹೋಗಲಾಡಿಸುವ ಕೆಲಸಗಳೂ ಸಂಘ-ಸAಸ್ಥೆಗಳಿAದ ಆಗಬೇಕೆಂದು ಕರೆ ನೀಡಿದರು.

ಮಡಿಕೇರಿಯಲ್ಲಿ ೨೧ ಸಮಾನ ಮನಸ್ಕರು ಸೇರಿ ಸಂಘಟಿಸಿದ ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆಯು ಈವರೆಗೂ ೩೫೨೨ ಮಂದಿಗೆ ರಕ್ತದಾನ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಶ್ಲಾಘನೀಯ ಸಾಧನೆಯಾಗಿದೆ ಎಂದು ಅನಿಲ್ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ. ಕರುಂಬಯ್ಯ ಮಾತನಾಡಿ, ಮಡಿಕೇರಿಯಲ್ಲಿ ಜಿಲ್ಲಾಸ್ಪತ್ರೆ ವಿಸ್ತಾರಗೊಂಡು ಇನ್ನಷ್ಟು ಸೌಲಭ್ಯ ಹೊಂದಿದ ಬಳಿಕ ರೋಗಿಗಳ ದಾಖಲಾತಿ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಹೀಗಾಗಿ ರಕ್ತಕ್ಕಾಗಿ ಬೇಡಿಕೆ ಕೂಡ ಏರಿಕೆಯಾಗಿದೆ. ಪ್ರತೀ ತಿಂಗಳು ಜಿಲ್ಲಾ ರಕ್ತನಿಧಿಗೆ ೫೦೦ ಯೂನಿಟ್ ರಕ್ತದ ಅಗತ್ಯವಿದ್ದು, ತಿಂಗಳಿಗೆ ರಕ್ತ ಸಂಗ್ರಹಣೆಯ ಕನಿಷ್ಟ ೧೦ ಶಿಬಿರಗಳ ಮೂಲಕ ಪ್ರತೀ ಶಿಬಿರದಿಂದಲೂ ೫೦ ಯೂನಿಟ್ ರಕ್ತ ಸಂಗ್ರಹ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು. ವಾರ್ಷಿಕವಾಗಿ ಕೊಡಗು ಜಿಲ್ಲೆಯಲ್ಲಿ ಕನಿಷ್ಟ ೧೦೦ ರಕ್ತ ಸಂಗ್ರಹಣಾ ಶಿಬಿರದ ಅನಿವಾರ್ಯತೆಯಿದ್ದು, ಈ ನಿಟ್ಟಿನಲ್ಲಿ ರಕ್ತ ಸಂಗ್ರಹಣೆಗೆ ಜಿಲ್ಲೆಯಾದ್ಯಂತ ಜನರು ಸಹಕಾರ ನೀಡಬೇಕೆಂದು ಕೋರಿದರು.

ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆಯ ಅಧ್ಯಕ್ಷ ಪಿ.ಜಿ. ಸುಕುಮಾರ್ ಮಾತನಾಡಿ, ಈ ಶಿಬಿರದಲ್ಲಿ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತ ದಾನ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಯಾಗಿದ್ದು, ಮುಂದಿನ ಶಿಬಿರಗಳಿಗೆ ಬರುವ ರಕ್ತದಾನಿಗಳಿಗೆ ಪ್ರಯಾಣ ವೆಚ್ಚವನ್ನೂ ಸಂಸ್ಥೆ ವತಿಯಿಂದ ಭರಿಸ ಲಾಗುತ್ತದೆ ಎಂದು ಘೋಷಿಸಿದರು. ಕಾಲೇಜುಗಳಿಗೆ ತೆರಳಿ ರಕ್ತದಾನದ ಮಹತ್ವವನ್ನು ತಿಳಿಸುವುದಲ್ಲದೇ ರಕ್ತದಾನಕ್ಕೆ ಪ್ರೇರೇಪಣೆ ಮಾಡುವ ಉದ್ದೇಶವೂ ಇದೆ ಎಂದು ಹೇಳಿದರು.

ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಖಲೀಲ್ ಕ್ರಿಯೇಟಿವ್ ಮಾತ ನಾಡಿದರು. ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮೊಹಮ್ಮದ್ ಅಂಜುಮ್ ಮಾತನಾಡಿ, ಕರ್ನಾಟಕ ಬ್ಲಡ್ ಹೆಲ್ಪ್ಲೈನ್ ಅವರ ಸಹಕಾರ ಕೂಡ ತಮ್ಮ ಸಂಸ್ಥೆಗೆ ದೊರಕಿರುವುದು ಹೆಮ್ಮೆ ತಂದಿದೆ ಎಂದರು.

ಮಡಿಕೇರಿ ರೋಟರಿ ಸಂಸ್ಥೆಯ ಅಧ್ಯಕ್ಷ ಸುದಯ್ ನಾಣಯ್ಯ, ಮಡಿಕೇರಿಯ ಹೆಚ್‌ಡಿಎಫ್‌ಸಿ ಬ್ಯಾಂಕ್ ಆಪರೇಷನ್ ಮ್ಯಾನೇಜರ್ ನಾರಾಯಣ ರಾಜೇಂದ್ರ, ಉದ್ಯಮಿ ಅಫ್ಸಾನ್, ಡಾ. ವಿನಾಯಕ್ ವೇದಿಕೆಯಲ್ಲಿದ್ದರು. ಚನ್ನನಾಯಕ ನಿರೂಪಿಸಿದ ಕಾರ್ಯಕ್ರಮದಲ್ಲಿ ಬಾಳೆಯಡ ದಿವ್ಯ ಸ್ವಾಗತಿಸಿದರು, ಸಂಸ್ಥೆಯ ಕಾರ್ಯದರ್ಶಿ ಮೈಖೆಲ್ ವರ್ಗೀಸ್ ಸಂಸ್ಥೆಯ ಮಾಹಿತಿ ನೀಡಿ, ಮುಸ್ತಫ ವಂದಿಸಿದರು.