ಸೋಮವಾರಪೇಟೆ, ನ.೨೧ : ಹೊಸೂರಿನ ಕೋರ್ಟ್ ಆವರಣದಲ್ಲಿ ವಕೀಲ ಕಣ್ಣನ್ ಅವರ ಮೇಲೆ ನಡೆದಿರುವ ಹಲ್ಲೆ ಘಟನೆ ಖಂಡನೀಯವಾಗಿದ್ದು, ತಕ್ಷಣ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೋಮವಾರಪೇಟೆ ವಕೀಲರ ಸಂಘ ಆಗ್ರಹಿಸಿದೆ.

ಇಲ್ಲಿನ ವಕೀಲರ ಸಂಘದ ವತಿಯಿಂದ ನ್ಯಾಯಾಲಯ ಆವರಣದಲ್ಲಿ ಒಟ್ಟು ಸೇರಿದ ವಕೀಲರುಗಳು, ಹಲ್ಲೆ ಘಟನೆಯನ್ನು ಖಂಡಿಸಿದರು. ವಕೀಲರ ಮೇಲಿನ ಹಲ್ಲೆ ಪ್ರಕರಣಗಳನ್ನು ತಡೆಗಟ್ಟಲು ಕಾನೂನಿನಲ್ಲಿ ನೂತನ ಕಾಯ್ದೆಗಳನ್ನು ತರಬೇಕು. ರಾಜ್ಯಾದ್ಯಂತ ವಕೀಲರುಗಳು ಭಯಮುಕ್ತವಾಗಿ ಕೆಲಸ ನಿರ್ವಹಿಸುವ ಸನ್ನಿವೇಶ ನಿರ್ಮಾಣಗೊಳ್ಳಬೇಕೆಂದು ಸಂಘದ ಅಧ್ಯಕ್ಷ ಕಾಟ್ನಮನೆ ವಿಠಲ್ ಆಗ್ರಹಿಸಿದರು.

ಈ ಸಂದರ್ಭ ವಕೀಲರ ಸಂಘದ ಬಿ.ಜೆ. ದೀಪಕ್, ಕೆ.ಎಸ್. ಪದ್ಮನಾಭ್, ಡಿ.ಕೆ. ತಿಮ್ಮಯ್ಯ, ಹೊಸಬೀಡು ಪವನ್, ಹೇಮಚಂದ್ರ, ಮನೋಹರ್, ಚಂದ್ರಶೇಖರ್, ಬಿ.ಈ. ಜಯೇಂದ್ರ, ಪವಿತ್ರ, ಯತೀಶ್, ರೂಪಾ, ಹರೀಶ್ ಸೇರಿದಂತೆ ಇತರರು ಇದ್ದರು.