ಸೋಮವಾರಪೇಟೆ,ನ.೨೧: ಮಡಿಕೇರಿ, ಮಾದಾಪುರ, ಹರಗ, ಶಾಂತಳ್ಳಿ ಮಾರ್ಗವಾಗಿ ಸೋಮವಾರಪೇಟೆಗೆ ಆಗಮಿಸುವ ಸರ್ಕಾರಿ ಬಸ್ ಸಕಾಲಕ್ಕೆ ಬಾರದೇ ಇರುವುದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಪರದಾಡುವಂತಾಗಿದೆ ಎಂದು ಹರಗ ಗ್ರಾಮಸ್ಥರು ಆರೋಪಿಸಿದ್ದಾರೆ.

ಪ್ರತಿದಿನ ಬೆಳಿಗ್ಗೆ ಮಡಿಕೇರಿಯಿಂದ ಮಾದಾಪುರ, ಗರ್ವಾಲೆ, ಸೂರ್ಲಬ್ಬಿ, ಹರಗ. ಶಾಂತಳ್ಳಿ ಮೂಲಕ ಸೋಮವಾರಪೇಟೆಗೆ ಆಗಮಿಸುವ ಬಸ್ ನಿಗದಿತ ಸಮಯಕ್ಕೆ ಬಾರದೇ ಇರುವುದರಿಂದ ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಸಾಧ್ಯವಾಗುತ್ತಿಲ್ಲ.

ಮಡಿಕೇರಿಯಿಂದ ಪ್ರತಿದಿನ ಬೆಳಿಗ್ಗೆ ೭.೩೦ಕ್ಕೆ ಹೊರಟು ೯.೩೦ಕ್ಕೆ ಹರಗ, ೧೦ ಗಂಟೆಗೆ ಶಾಂತಳ್ಳಿ, ೧೦.೩೦ಕ್ಕೆ ಸೋಮವಾರಪೇಟೆಗೆ ಆಗಮಿಸಬೇಕಿದ್ದರೂ ವಾರದ ಬಹುತೇಕ ದಿನಗಳಲ್ಲಿ ಸಮಯ ಪಾಲನೆ ಆಗುತ್ತಿಲ್ಲ. ಈ ಬಗ್ಗೆ ಸಂಬAಧಿಸಿದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಗಮನ ಹರಿಸಬೇಕೆಂದು ಹರಗ ಗ್ರಾಮದ ಶರಣ್ ಗೌಡ ಆಗ್ರಹಿಸಿದ್ದಾರೆ.