ಮಡಿಕೇರಿ, ನ. ೨೭: ೨೦೨೨-೨೩ನೇ ಸಾಲಿನಲ್ಲಿ ಸಹಕಾರ ಕ್ಷೇತ್ರದಲ್ಲಿನ ಉತ್ತಮ ಕಾರ್ಯ ನಿರ್ವಹಣೆಗಾಗಿ ರಾಷ್ಟಿçÃಯಮಟ್ಟದಲ್ಲಿ ಕೊಡಗಿನ ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪ್ಯಾಕ್ಸ್) ಪ್ರಶಸ್ತಿ ಪಡೆದುಕೊಂಡಿದೆ. ನ್ಯಾಷನಲ್ ಫೆಡರೇಷನ್ ಆಫ್ ಸ್ಟೇಟ್ ಕೋ ಆಪರೇಟಿವ್ (ಓಂಈSಅಔಃ) ವತಿಯಿಂದ ರಾಷ್ಟಿçÃಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವ ಹಾತೂರು ಪ್ಯಾಕ್ಸ್ಗೆ ಸುಭಾಷ್ ಯಾದವ್ ಪ್ರಶಸ್ತಿ ನೀಡಲಾಗಿದೆ. ನಿನ್ನೆ ನವದೆಹಲಿಯ ಭಾರತ್ಮಂಡಪಮ್ನಲ್ಲಿ ಆಯೋಜಿತವಾಗಿದ್ದ ಸಮಾರಂಭದಲ್ಲಿ ಹಾತೂರು ಸಂಘದ ಅಧ್ಯಕ್ಷರೂ ಆಗಿರುವ ಡಿ.ಸಿ.ಸಿ. ಬ್ಯಾಂಕ್ನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಹಾಗೂ ಆಡಳಿತ ಮಂಡಳಿಯವರು ಪ್ರಶಸ್ತಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.