ಮಡಿಕೇರಿ, ನ. ೨೭: ತಾ. ೨೯ ರಿಂದ ಡಿಸೆಂಬರ್ ೫ ರವರೆಗೆ ಕೊಲ್ಕತ್ತಾದಲ್ಲಿ ನಡೆಯಲಿರುವ ೩೯ನೆ ಯೂತ್ ನ್ಯಾಷನಲ್ ಬಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್‌ಗೆ ಕೊಡಗಿನವರಾದ ದೀಪಿಕಾ ಪಿ.ಪಿ. ಅವರು ಆಯ್ಕೆಗೊಂಡಿದ್ದಾರೆ.

ಬೆಂಗಳೂರಿನ ಡಿ.ವೈ.ಇ.ಎಸ್. ಕ್ರೀಡಾ ವಸತಿ ನಿಲಯದಲ್ಲಿ ತರಬೇತಿ ಪಡೆಯುತ್ತಿರುವ ದೀಪಿಕಾ ಬೆಂಗಳೂರಿನ ರೇವಾ ಯೂನಿವರ್ಸಿಟಿಯಲ್ಲಿ ಪ್ರಥಮ ಪಿ.ಯು.ಸಿ. ವ್ಯಾಸಂಗ ನಡೆಸುತ್ತಿದ್ದಾರೆ. ಇವರು ಮಡಿಕೇರಿ ತಾಲೂಕಿನ ಕುಂದಚೇರಿ ಗ್ರಾಮದ ಪೊನ್ನೆಟ್ಟಿ ಪ್ರಸನ್ನ ಹಾಗೂ ಕೇಶ್ವರಿ ದಂಪತಿಯ ಪುತ್ರಿ.