ವೀರಾಜಪೇಟೆ, ನ. ೨೭: ಕೊಡವ ಸಾಂಪ್ರದಾಯಿಕ ವಾಲಗತ್ತಾಟನ್ನು ಪೋಷಿಸಿ ಬೆಳೆಸುವ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ವೀರಾಜಪೇಟೆಯ ತೂಕ್ ಬೊಳಕ್ ಕಲೆ ಕ್ರೀಡೆ ಸಾಹಿತ್ಯ ಅಕಾಡೆಮಿ ನಡೆಸುತ್ತಿರುವ ತೂಕ್ ಬೊಳಕ್ ಕೊಡವ ವಾಲಗತ್ತಾಟ್ ನಮ್ಮೆ ಎಂಬ ವಿನೂತನ ಪೈಪೋಟಿ ಕಾರ್ಯಕ್ರಮ ಡಿಸೆಂಬರ್ ೧೦ ರಂದು ಪೊನ್ನಂಪೇಟೆ ಕೊಡವ ಸಮಾಜದ ಆವರಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸಂಚಾಲಕ ಮುಲ್ಲೇಂಗಡ ಮಧೋಶ್ ಪೂವಯ್ಯ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಪೊನ್ನಂಪೇಟೆ ಕೊಡವ ಸಮಾಜದ ಸಹಕಾರದಲ್ಲಿ ಈ ಬಾರಿ ವಿಜೃಂಭಣೆಯಿAದ ವಾಲಗತಾಟ್ ನಮ್ಮೆಯನ್ನು ಆಚರಿಸಲು ನಿರ್ಧರಿಸಿದ್ದು, ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೆ ಪೈಪೋಟಿ ನಡೆಯಲಿದ್ದು, ಪೊನ್ನಂಪೇಟೆಯಲ್ಲಿ ನಡೆಯುವ ಕೊಡವ ವಾಲಗತಾಟ್ ನಮ್ಮೆಗೆ ಹೆಚ್ಚಿನ ಜನತೆ ಆಗಮಿಸಬೇಕು.
ಚಿಕ್ಕ ಮಕ್ಕಳಿಂದ ೧ನೇ ತರಗತಿ, ೨-೪ನೇ ತರಗತಿ, ೫-೭ನೇ ತರಗತಿ, ೮-೧೦ನೇ ತರಗತಿ, ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ, ಪದವಿ, ಸಾರ್ವಜನಿಕರು, ಹಿರಿಯ ನಾಗರಿಕರು ಹೀಗೆ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಈ ಸ್ಪರ್ಧೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಆಸಕ್ತರು ಡಿಸೆಂಬರ್ ೫ರ ಒಳಗೆ ತಮ್ಮ ಹೆಸರನ್ನು ವೀರಾಜಪೇಟೆ ಮೂರ್ನಾಡು ರಸ್ತೆಯಲ್ಲಿರುವ ತೂಕ್ ಬೊಳಕ್ ಪತ್ರಿಕೆ ಕಾರ್ಯಾಲಯ ಅಥವಾ ೯೪೮೦೫೫೬೬೬೭, ೯೪೮೦೯೦೫೭೫೬ ಮೊಬೈಲ್ ಸಂಖ್ಯೆಯಲ್ಲಿ ನೋಂದಾಯಿಸಬಹುದಾಗಿದೆ.