ವೀರಾಜಪೇಟೆ, ನ. ೨೭: ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ಕಾಪಾಡಲು ಹಾಗೂ ದೈಹಿಕ ಆರೋಗ್ಯ ವನ್ನು ಬೆಳೆಸುವಲ್ಲಿ ಕ್ರೀಡೆಯ ಮಹತ್ವ ಅಪಾರವಾದದ್ದು ಎಂದು ವೀರಾಜಪೇಟೆ ರಾಷ್ಟಿçÃಯ ಆರೋಗ್ಯ ಮಿಷನ್ ಸದಸ್ಯರಾದ ಡಾ. ಮಾತಂಡ ಆರ್. ಅಯ್ಯಪ್ಪ ಅಭಿಪ್ರಾಯಪಟ್ಟರು.

ವೀರಾಜಪೇಟೆ ಕಾವೇರಿ ಪದವಿ ಕಾಲೇಜಿನಲ್ಲಿ ನಡೆದ ಕ್ರೀಡಾ ಮೇಳ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಕ್ರೀಡೆ ಎಂಬುದು ಬಹಳ ಮಹತ್ವ ಪೂರ್ಣವಾದ ದೈಹಿಕ, ಮಾನಸಿಕವಾದ ಒಂದು ವ್ಯಾಯಾಮ. ದೇಹ ಹಾಗೂ ಮನಸ್ಸನ್ನು ಸದೃಢವಾಗಿಡುವಲ್ಲಿ ಕ್ರೀಡೆಯ ಮಹತ್ವ ಅಪಾರವಾದದ್ದು. ಕ್ರೀಡೆ ನಮ್ಮ ಜೀವನಶೈಲಿ ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಒಂದು ಅಂಶ. ಹಿರಿಯರಿಗೆ ಗೌರವ ನೀಡುವುದು, ಗೆಲುವಿಗಾಗಿ ಒಗ್ಗಟ್ಟಿನಿಂದ ಶ್ರಮಿಸುವುದು, ಕ್ರೀಡೆಯನ್ನು ನೋಡಿ ಸಂಭ್ರಮಿಸುವುದು, ಕ್ರೀಡಾಪಟುಗಳಿಗೆ ಉತ್ತೇಜನವನ್ನು ನೀಡುವುದು ಇವೆಲ್ಲವೂ ಕ್ರೀಡೆಯಿಂದ ಸಾಧ್ಯವಾಗಿದೆ. ಇತ್ತೀಚಿನ ಸಂದರ್ಭದಲ್ಲಿ ಜೀವನಶೈಲಿ ಅಪಾರ ಬದಲಾವಣೆಯನ್ನು ಕಂಡರೆ ನಮ್ಮ ಯುವಜನತೆ ಕ್ರೀಡೆಗಿಂತ ಮೊಬೈಲ್, ಟಿವಿಗಳಂತಹ ಆಧುನಿಕ ಮಾಧ್ಯಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೈಹಿಕವಾಗಿ ಹಾಗೂ ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ. ಇದರಿಂದ ಯುವ ಪೀಳಿಗೆ ತಮ್ಮ ಈ ವಯಸ್ಸಿನಲ್ಲಿ ಸಮಾಜದೊಂದಿಗೆ ತೊಡಗಿಕೊಂಡು ಪಡಬೇಕಾದ ಸಂಭ್ರಮದಿAದ ದೂರ ಉಳಿಯುತ್ತಿದ್ದಾರೆ.

ದೈಹಿಕವಾಗಿ, ಮಾನಸಿಕವಾಗಿ ಅವರಲ್ಲಿ ಉತ್ಸಾಹ, ನವಚೇತನ ಕಾಣುತ್ತಿಲ್ಲ. ಆದ್ದರಿಂದ ವಿದ್ಯಾ ಸಂಸ್ಥೆಗಳು, ಇನ್ನಿತರ ಸಂಘ-ಸAಸ್ಥೆಗಳು ಹೆಚ್ಚಿನ ಮಟ್ಟದಲ್ಲಿ ಈ ರೀತಿಯ ಕ್ರೀಡಾ ಚಟುವ ಟಿಕೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳನ್ನು ಕ್ರೀಡೆಯ ಕಡೆ ಸೆಳೆದು ಯುವ ಜನತೆಗೆ ಕ್ರೀಡೆಯ ಮಹತ್ವವನ್ನು ತಿಳಿಸಬೇಕಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್. ಸಲ್ದಾನ ಕ್ರೀಡೆಯೆನ್ನುವಂತದ್ದು ಎಲ್ಲರನ್ನು ದೈಹಿಕವಾಗಿ, ಮಾನಸಿಕವಾಗಿ ಒಗ್ಗೂಡಿಸುವಂತಹದ್ದು. ಇಂತಹ ಕ್ರೀಡಾಕೂಟಗಳ ನಿರಂತರ ಆಯೋಜನೆ ಯುವಜನರನ್ನು ಸದೃಢಗೊಳಿಸುತ್ತದೆ. ನಮ್ಮ ಈ ಸಂಸ್ಥೆ ವಿದ್ಯಾರ್ಥಿಗಳಿಗೆ ಕೇವಲ ಪಠ್ಯ ಚಟುವಟಿಕೆಗಳನ್ನು ಮಾತ್ರ ನಡೆಸುತ್ತಿಲ್ಲ. ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಮಹತ್ವವನ್ನು ನೀಡುತ್ತಿದೆ. ಕಾಲೇಜಿನಲ್ಲಿ ಪ್ರತಿದಿನ ಅಂತಿಮ ೪೫ ನಿಮಿಷಗಳನ್ನು ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಗಾಯನ, ನೃತ್ಯ, ಚಿತ್ರಕಲೆಗಳಂತಹ ಆಸಕ್ತಿಯ ಚಟುವಟಿಕೆಗಳಿಗೆ ಮೀಸಲಿಡಲಾಗುತ್ತಿದೆ ಎಂದರು.

ಅಕ್ಟೋಬರ್ ೪ ರಿಂದ ೨೦ ರವರೆಗೆ ನಡೆದ ಕ್ರೀಡಾಮೇಳದ ವಿವಿಧ ಕ್ರೀಡಾ ಸ್ಪರ್ಧೆಗಳ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಈ ಸಂದರ್ಭ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ತಮ್ಮಯ್ಯ, ಐಕ್ಯೂಎಸಿ ಸಂಯೋಜಕಿ ಪ್ರಿಯಾ, ವಿದ್ಯಾರ್ಥಿ ಕ್ಷೇಮಪಾಲನ ಸಮಿತಿ ಸಂಚಾಲಕ ನಾಗರಾಜು, ಕ್ರೀಡಾ ನಾಯಕ ಕಾರ್ಯಪ್ಪ ಉಪಸ್ಥಿತರಿದ್ದರು. ಕ್ರೀಡಾ ಮೇಳದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳು, ಕಾಲೇಜಿನ ವಿದ್ಯಾರ್ಥಿ ವೃಂದ, ಉಪನ್ಯಾಸಕರು, ಆಡಳಿತ ಸಿಬ್ಬಂದಿಗಳು ಉಪಸ್ಥಿತರಿದ್ದರು.