x

ಕಣಿವೆ, ನ. ೨೭: ಕೊಡಗಿನ ಪ್ರವೇಶ ದ್ವಾರ ಕುಶಾಲನಗರ ಬಳಿಯ ಕೊಪ್ಪದಲ್ಲಿ ಸಂಚಾರ ನಿಯಮ ಬಿಗಿಗೊಳಿಸಿದ್ದು, ಸವಾರರು, ಚಾಲಕರು ಕೊಪ್ಪ ಬಂತೆAದರೆ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಕೊಡಗು ಪೊಲೀಸ್ ಇಲಾಖೆ ದಶಕಗಳಿಂದಲೂ ಜನಜಾಗೃತಿ ಮೂಡಿಸುತ್ತಲೇ ಬಂದಿದೆ. ಕುಶಾಲನಗರ ಆಸುಪಾಸಿನ ಪಿಯು ಹಾಗೂ ಪದವಿ ಕಾಲೇಜುಗಳಿಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮಗಳ ಕುರಿತು ಅರಿವು, ಕಾರ್ಯಾಗಾರ ಹಾಗೂ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಿಯೂ ಆಗಿದೆ.

ಆದರೇನು ಫಲ? ವಾಹನಗಳ ಅವಘಡಗಳಲ್ಲಿ, ಜೀವ ಹಾನಿಗಳಲ್ಲಿ ಸುಧಾರಣೆ ಆಥವಾ ಕ್ಷೀಣತೆ ಕಾಣಲಿಲ್ಲ. ಅತೀ ಹೆಚ್ಚು ವಾಹನಗಳ ದಟ್ಟಣೆಯ ಕೊಪ್ಪ ಹಾಗೂ ಕುಶಾಲನಗರ ಮಾರ್ಗದಲ್ಲಿ ಹಾದು ಹೋಗಿರುವ ರಾಷ್ಟಿçÃಯ ಹೆದ್ದಾರಿ ೨೭೫ ರಲ್ಲಿ ನಿತ್ಯವೂ ಘಟಿಸುತ್ತಿದ್ದ ವಾಹನಗಳ ಅಪಘಾತಗಳಿಂದ ಸಂಚಾರಿ ಪೊಲೀಸ್ ಇಲಾಖೆ ಹೈರಾಣಾಗಿ ಹೋಗಿತ್ತು.

ಕೊನೆಗೆ ದಂಡA ದಶಗುಣಂ ಎಂಬAತೆ ಮೈಸೂರು ವಿಭಾಗೀಯ ಪೊಲೀಸ್ ಇಲಾಖೆ ಕುಶಾಲನಗರದ ಪ್ರವೇಶ ದ್ವಾರ ಕೊಪ್ಪಾದ ಕಾವೇರಿ ಪ್ರತಿಮೆ ಬಳಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ವಾಹನಗಳನ್ನು ಚಾಲಿಸುವ ಚಾಲಕರಿಗೆ ಮೂಗುದಾರ ಹಾಕಲೆಂಬAತೆ ಹೆದ್ದಾರಿಯ ಮಧ್ಯ ಭಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿತು. ಇದರ ಮುಖೇನ ವಾಹನ ಚಾಲಕರಿಗೆ ಬಿಸಿ ಮುಟ್ಟಿಸಲು ಮುಂದಾಯಿತು.

ಎಲ್ಲಾ ಹಂತದ ವಾಹನಗಳಿಗೂ ದಂಡ ರವಾನೆ

ಈ ಹೆದ್ದಾರಿಯಲ್ಲಿ ಮೈಮರೆತು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ವಾಹನಗಳನ್ನು ಚಾಲಿಸುವ ಪ್ರತಿಯೊಬ್ಬರಿಗೂ ದಂಡದ ರಶೀದಿಯನ್ನು ಚಾಲಕರ ಮೊಬೈಲ್‌ಗಳಿಗೆ ರವಾನಿಸಲು ಆರಂಭಿಸಿತು.

ದ್ವಿಚಕ್ರ ಸವಾರರು ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿದರೆ, ಇಬ್ಬರ ಬದಲಿ ಮೂವರನ್ನು ಕುಳ್ಳಿರಿಸಿ ಬೈಕ್ ಚಾಲಿಸಿದರೆ ಆರಂಭಿಕ ಎಚ್ಚರಿಕೆಯ ನೋಟಿಸ್ ಆಗಿ ರೂ.೫೦೦ರ ದಂಡವನ್ನು ವಿಧಿಸುತ್ತಿದೆ.

ಇನ್ನು ಮೂರು ಚಕ್ರಗಳ ಆಟೋ ಚಾಲಕರು ಖಾಕಿ ಸಮವಸ್ತç ಧರಿಸದೇ ಇದ್ದಲ್ಲಿ ಹಾಗೂ ಮುಂಬದಿ ಸೀಟಿನಲ್ಲಿ ಪ್ರಯಾಣಿಕರನ್ನು ಕುಳ್ಳಿರಿಸಿ ಆಟೋ ಚಾಲಿಸಿದಲ್ಲಿ ೫೦೦ ರೂ.ಗಳ ರಶೀದಿ ಹಾಗೆಯೇ ನಾಲ್ಕು ಚಕ್ರಗಳ ಯಾವುದೇ ಕಾರುಗಳ ಎಡ ಬದಿ ಪ್ರಯಾಣಿಕ ಮತ್ತು ಚಾಲಕ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸದೇ ಕಾರು ಚಲಾಯಿಸಿದಲ್ಲಿ ರೂ.೫೦೦ ರ ದಂಡವನ್ನು ವಿಧಿಸುತ್ತಿದೆ.

ಮೈಮರೆತೋ ಅಥವಾ ಅಸಡ್ಡೆಯಿಂದಲೋ ಸಂಚಾರಿ ನಿಯಮಗಳನ್ನು ಪಾಲಿಸದಿರುವ ಚಾಲಕರಿಗೆ ಇದೀಗ ಕೊಪ್ಪಾ ಎಂದರೆ ಕಪ್ಪ ಪೊಲೀಸ್ ಇಲಾಖೆಗೆ ದಂಡ ಕಟ್ಟುವ ಭಯದಿಂದ ಹೌಹಾರುತ್ತಿದ್ದಾರೆ.

ಸೀಟ್ ಬೆಲ್ಟ್ ಧರಿಸದಿರೋ ಆಟೋ ಚಾಲಕನಿಗೆ ದಂಡ...!

ಆಟೋದಲ್ಲಿ ಚಾಲಕ ಸೀಟ್ ಬೆಲ್ಟ್ ಹಾಕಿಲ್ಲ ಎಂದು ಕೊಪ್ಪದಲ್ಲಿ ರೂ.೫ ೦೦ ದಂಡದ ರಸೀದಿ ಬಂದ ಬಗ್ಗೆ ಕುಶಾಲನಗರದ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ಹರಿದಾಡಿತು.

ಈ ಬಗ್ಗೆ ಕುಶಾಲನಗರದ ಆಟೋ ಚಾಲಕರ ಸಂಘದ ಅಧ್ಯಕ್ಷ ಮೋಹನ್ ಎಂಬವರಲ್ಲಿ ಈ ಬಗ್ಗೆ ಮಾಹಿತಿ ಬಯಸಿದಾಗ, ಆಟೋಗಳಿಗೆ ಸೀಟ್ ಬೆಲ್ಟ್ ಎಲ್ಲಿಂದ ಸಾಧ್ಯ ? ಅದು ೫೦೦ ರೂಗಳ ದಂಡ ಕೆ.ಎಂ.ಅಜೀಜ್ ಎಂಬವರು ಖಾಕಿ ಶರ್ಟ್ ಧರಿಸದೇ ಆಟೋ ಚಲಾಯಿಸಿದ ಬಗ್ಗೆ ಬಂದ ದಂಡದ ರಶೀದಿಯಾಗಿದೆ ಎಂದರು.

- ಕೆ.ಎಸ್. ಮೂರ್ತಿ