ಗೋಣಿಕೊಪ್ಪಲು, ನ. ೨೮: ರಾಷ್ಟಿçÃಯ ಮಟ್ಟದ ಕರಾಟೆ ಪಂದ್ಯಾವಳಿಯು ಇತ್ತೀಚೆಗೆ ನವದೆಹಲಿ ಯಲ್ಲಿ ಜರುಗಿತು. ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲೆಯ ೪ ಮಂದಿ ಆಯ್ಕೆಯಾಗಿದ್ದು, ಉತ್ತಮ ಪ್ರದರ್ಶನ ನೀಡಿದರು. ಪಂದ್ಯಾವಳಿಯಲ್ಲಿ ಗೋಣಿಕೊಪ್ಪಲು ಸಮೀಪದ ಕೈಕೇರಿ ಗ್ರಾಮದ ಜಮ್ಮಡ ಡೇರಿನ್ ದೇವಯ್ಯ ಹಾಗೂ ಗೋಣಿಕೊಪ್ಪಲುವಿನ ತಸನ್ ನಂಜಪ್ಪ ಕಂಚಿನ ಪದಕವನ್ನು ತಮ್ಮದಾಗಿಸಿ ಕೊಂಡರು. ಹಿರಿಯ ಕರಾಟೆ ಪಟುಗಳಾದ ಕೊಡಗಿನ ಸಿ.ಎಸ್. ಅರುಣ್ ಮಾಚಯ್ಯ ಮುಂದಾಳತ್ವದಲ್ಲಿ ಕರ್ನಾಟಕ ತಂಡದಲ್ಲಿ ಪ್ರರ್ವತ್ ಪೂವಣ್ಣ ಹಾಗೂ ಜಯಶೀಲ ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿದರು. ಕರಾಟೆ ಶಿಕ್ಷಕ ರಾದ ಜಮ್ಮಡ ಜಯ ಜೋಯಪ್ಪ, ಎಂ.ಆರ್. ಸುಮನ್ ಅವರಿಂದ ವಿದ್ಯಾರ್ಥಿಗಳು ಕರಾಟೆ ಶಿಕ್ಷಣ ಪಡೆದಿದ್ದರು.