ಮಡಿಕೇರಿ, ನ. ೨೮: ಮಡಿಕೇರಿಯ ಶ್ರೀ ಆಂಜನೇಯ ದೇವಾಲಯದಲ್ಲಿ ಭಗವದ್ಗೀತಾ ಅಭಿಯಾನವು ಬುಧವಾರ ನಡೆಯಿತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ‘ಶಕ್ತಿ’ ಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಉಪನ್ಯಾಸ ನೀಡಿ, ಭಗವದ್ಗೀತೆಯ ಮಹತ್ವವನ್ನು ತಿಳಿಸಿದರು.

ಪ್ರತಿಯೋರ್ವನ ಜೀವನದಲ್ಲಿ ಭಗವದ್ಗೀತೆಯ ೧೮ ಅಧ್ಯಾಯಗಳಲ್ಲಿ ಬರುವ ಸಾಲುಗಳು ಭಕ್ತಿಯ ಮಾರ್ಗಕ್ಕೆ, ಅಧ್ಯಾತ್ಮದತ್ತ ಕೊಂಡೊಯ್ಯಲಿದೆ ಎಂದು ವಿವರಿಸಿದರು. ಭಗವದ್ಗೀತೆಯ ೯ನೇ ಅಧ್ಯಾಯದಲ್ಲಿಯೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಧ್ಯಾತ್ಮ ವಿಚಾರವನ್ನು, ೮ನೇ ಅವತಾರ ಪುರುಷ ಶ್ರೀ ಕೃಷ್ಣ ಅರ್ಜುನನಿಗೆ ಹೇಳಿದ್ದಾನೆ. ಭಗವದ್ಗೀತೆಯಲ್ಲಿ ಸಮಾಜಕ್ಕೆ ಅಂತಿಮವಾದ ಬೋಧನೆಯನ್ನು ಶ್ರೀ ಕೃಷ್ಣನು ಮಾಡಿದ್ದಾನೆ ಎಂದು ತಿಳಿಸಿದರು.

ಮಡಿಕೇರಿ ಶ್ರೀ ಆಂಜನೇಯ ದೇವಾಲಯದಲ್ಲಿ ತಾ. ೨೦ ರಿಂದ ೨೬ ರತನಕ ಭಗವದ್ಗೀತಾ ಅಭಿಯಾನ ನಡೆದು ನಿನ್ನೆ ಸಂಪನ್ನಗೊAಡಿತು. ಮುಂದುವರೆದು ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ಶ್ರೀ ಕೃಷ್ಣ ಆಕರ್ಷಣೆಯ ದೇವರಾಗಿದ್ದಾನೆ ಎಂದು ತಿಳಿಸಿದರು. ಭಗವದ್ಗೀತೆಯ ಸಾರವನ್ನು ಇಂದು ಎಲ್ಲರೂ ಮನನ ಮಾಡುವುದು ಅಗತ್ಯವಿದೆ ಎಂದು ನುಡಿದರು. ಅದರಿಂದಾಗಿ ಸಮಾಜದಲ್ಲಿ ಉತ್ತಮ ಸಂಸ್ಕಾರ-ಸAಸ್ಕೃತಿಯನ್ನು ನಾವು ಮೈಗೂಡಿಸುವಂತಾಗಲಿ ಎಂದು ಹಾರೈಸಿದರು. ಸೋಂದ ಸ್ವರ್ಣವಲ್ಲೀ ಮಹಾಸಂಸ್ಥಾನದಿAದ ರಾಜ್ಯಾದ್ಯಂತ ಈ ಅಭಿಯಾನ ಆಯೋಜಿಸಿರುವುದು ಸ್ವಾಗತಾರ್ಹ ಎಂದರು.

ಪ್ರಾರAಭದಲ್ಲಿ ಭಗವದ್ಗೀತಾ ಅಭಿಯಾನದ ಜಿಲ್ಲಾ ಸಂಚಾಲಕ ಎಸ್.ಎಸ್. ಸಂಪತ್ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂದು ಮಾನವ ಅನೇಕ ವಿಕಾರಗಳಿಗೆ ಬಲಿಯಾಗುತ್ತಿದ್ದಾನೆ. ವಿಕೃತವಾದ ಮನಸ್ಸು ಅಡ್ಡದಾರಿಯನ್ನು ಹಿಡಿಯುತ್ತಿದೆ. ಭಯೋತ್ಪಾದನೆ, ಅತ್ಯಾಚಾರ, ಕೊಲೆ, ಸುಲಿಗೆ, ಮಾದಕ ದ್ರವ್ಯ ಸೇವನೆ, ಕೌಟುಂಬಿಕ ಸಮಸ್ಯೆ ದಿನದಿಂದ ದಿನ ಹೆಚ್ಚಾಗುತ್ತಿದೆ. ಇವೆಲ್ಲವುಗಳಿಗೆ ವಿಕೃತ ಮನಸ್ಸೇ ಮುಖ್ಯ ಕಾರಣ. ವಿಕೃತ ಮನಸ್ಸಿನ ಪರಿಷ್ಕಾರಕ್ಕೆ ಅಧ್ಯಾತ್ಮ ವಿದ್ಯೆಯೇ ಏಕೈಕ ಪರಿಹಾರ. ಆ ಅಧ್ಯಾತ್ಮ ವಿದ್ಯೆಯ ಆಕಾರ ಗ್ರಂಥವೇ ಭಗವದ್ಗೀತೆ. ಗೀತೆಯ ಮೂಲಕ ಸಮಾಜದಲ್ಲಿ ಸುಖ-ಶಾಂತಿ ನೆಲೆಸುವಂತೆ ಹಾಗೂ ಪ್ರತಿ ವ್ಯಕ್ತಿಯನ್ನು ಸುಸಂಸ್ಕೃತನನ್ನಾಗಿ ರೂಪಿಸುವುದಕ್ಕಾಗಿ ಶ್ರೀ ಸೋಂದಾ ಸ್ವರ್ಣವಲ್ಲಿ ಪೀಠಾಧೀಶ ಶ್ರೀ ಗಂಗಾಧರೇAದ್ರ ಸರಸ್ವತಿ ಮಹಾಸ್ವಾಮಿಗಳು ೨೦೦೭ನೇ ಸಾಲಿನಿಂದ ಈ ಅಭಿಯಾನ ಪ್ರಾರಂಭಿಸಿದ್ದಾರೆ ಎಂದು ತಿಳಿಸಿದರು. ಗೌರಮ್ಮ ಮಾದಮ್ಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಕೊನೆಯಲ್ಲಿ ಗೀತಾ ಸಂಪತ್ ಕುಮಾರ್ ವಂದಿಸಿದರು.