ವೀರಾಜಪೇಟೆ, ನ. ೨೮: ತಾ.೨೨ ರಿಂದ ೨೪ರವರೆಗೆ ಸಿದ್ದಾಪುರ, ಪಾಲಿಬೆಟ್ಟ, ಅಮ್ಮತ್ತಿ ವ್ಯಾಪ್ತಿಯಲ್ಲಿ ನಡೆದ ರಾಷ್ಟಿçÃಯ ಮಟ್ಟದ ರ್ಯಾಲಿಯಲ್ಲಿ ಕೊಡಗಿನ ಹಲವು ಮಂದಿ ಭಾಗವಹಿಸಿ ಸಾಧನೆ ಗೈದಿದ್ದಾರೆ. ಬ್ಲೂ ಬ್ಯಾಂಡ್ ಮೋಟಾರ್ ಸ್ಪೋರ್ಟ್ಸ್, ರೋಬಸ್ಟಾ ಅಡ್ವೆಂಚರ್ ಮತ್ತು ಸ್ಪೋರ್ಟ್ಸ್ ಅಕಾಡಮಿ ವತಿಯಿಂದ ರ್ಯಾಲಿ ಆಯೋಜನೆಗೊಂಡಿದ್ದು, ಕ್ರೀಡಾ ಪ್ರೇಮಿಗಳ ಮೈನವಿರೇಳಿಸಿತು.
ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಕೊಡಗಿನ ರ್ಯಾಲಿ ಪಟುಗಳು ಹಲವು ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಪಡೆದುಕೊಂಡರು.
ಐ.ಎನ್.ಆರ್.ಸಿ ವಿಭಾಗ-೨ ರಲ್ಲಿ ಅಮ್ಮತ್ತಿಯ ತಿಮ್ಮು ಉದ್ದಪಂಡ - ಹಾಸನದ ಜೇಸನ್ ಸಲ್ದಾನ ಜೋಡಿ (ಆರ್ಕ ಮೋಟಾರ್ ಸ್ಪೋರ್ಟ್ಸ್) ದ್ವಿತೀಯ ಸ್ಥಾನ ಪಡೆದುಕೊಂಡಿತು. ತೃತೀಯ ಸ್ಥಾನವನ್ನು ಅಮ್ಮತ್ತಿಯ ಕೊಂಗAಡ ಗಗನ್ ಕರುಂಬಯ್ಯ ಹಾಗೂ ಮಂಗಳೂರಿನ ಡೀನ್ ಮಸ್ಕರೇನಸ್ ಜೋಡಿ ಪಡೆದುಕೊಂಡಿತು.
ಐ.ಎನ್.ಆರ್.ಸಿ. ಕಿರಿಯರ ವಿಭಾಗ-೧ ರಲ್ಲಿ ದಿತ್ವೀಯ ಸ್ಥಾನವನ್ನು ಮೇಕೇರಿಯ ಅಬಿನ್ ಆರ್.ರೈ ಮತ್ತು ಬೆಂಗಳೂರಿನ ಅರವಿಂದ್ ಧೀರೆಂದ್ರ ಜೋಡಿ ಪಡೆದುಕೊಂಡಿತು.
ಎಫ್.ಎA.ಎಸ್.ಸಿ.ಐ ಕ್ಲಾಸಿಕ್ ಚಾಲೇಂಜ್
(ಮೊದಲ ಪುಟದಿಂದ) ವಿಭಾಗದಲ್ಲಿ ಕೊಡಗಿನವರಾದ ಕಾರ್ಯಪ್ಪ (ಕಾಸ್ ಮೋಟಾರ್ ಸ್ಪೋರ್ಟ್ಸ್ ಬೆಂಗಳೂರು) ಹಾಗೂ ಪ್ರವೀಣ್ ದ್ವಾರಕನಾಥ್ ಜೋಡಿ ಪಡೆದುಕೊಂಡಿತು.
ಎಫ್.ಎA.ಎಸ್.ಸಿ.ಐ ಜಿಪ್ಸಿ ಚಾಲೇಂಜ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಕೊಕ್ಕೆಂಗಡ ದರ್ಶನ್ ನಾಚಪ್ಪ ಮತ್ತು ಮೇಕೇರಿರ ಅಭಿನವ್ ಗಣಪತಿ (ಟೀಮ್ ಆ್ಯಸ್ಪೆöÊರ್) ಜೋಡಿ ಪಡೆದುಕೊಂಡಿತು. ಇದೇ ವಿಭಾಗದಲ್ಲಿ ತೃತೀಯ ಸ್ಥಾನವನ್ನು ವೀರಾಜಪೇಟೆಯ ಕೊಂಗAಡ ಕವನ್ ಕಾರ್ಯಪ್ಪ ಮತ್ತು ಗೋಣಿಕೊಪ್ಪದ ಮನೆಯಪಂಡ ಗೌರವ್ ಅಯ್ಯಪ್ಪ ಪಡೆದುಕೊಂಡರು. ಚೆಪ್ಪುಡಿರ ಮಾಚಯ್ಯ ಎಂ.ಎಸ್.ಪಿ ಟ್ಯೂನರ್ ಪ್ರಶಸ್ತಿಯನ್ನು ಪಡೆದುಕೊಂಡರು.
ಕೊಡಗು ಜಿಲ್ಲೆಯಲ್ಲಿ ಸಂಸ್ಥೆಯು ದ್ವಿತೀಯ ಬಾರಿ ರಾಷ್ಟ್ರೀಯ ರ್ಯಾಲಿ ಚಾಂಪಿಯನ್ಶಿಪ್ಅನ್ನು ಆಯೋಜಿಸಿದ್ದು, ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರ್ಯಾಲಿ ಆಯೋಜಿಸಲು ಆಯೋಜಕರು, ಪ್ರಾಯೋಜಕರು, ಟಾಟಾ ಕಾಫಿ ಲಿಮಿಟೆಡ್ ಸಂಸ್ಥೆ, ಅರಣ್ಯ , ಆರೋಗ್ಯ ಮತ್ತು ಪೊಲೀಸ್ ಇಲಾಖೆ ಉತ್ತಮವಾಗಿ ಸಹಕಾರವನ್ನು ನೀಡಿರುವುದಾಗಿ ರೋಬಾಸ್ಟ ಅಡ್ವೇಂಚರ್ ಅಂಡ್ ಸ್ಪೋರ್ಟ್ಸ್ ಅಕಾಡಮಿಯ ನಿರ್ದೇಶಕರಾದ ಕುಂಞAಗಡ ಮಹೇಶ್ ಅಪ್ಪಯ್ಯ ‘ಶಕ್ತಿ’ಗೆ ತಿಳಿಸಿದ್ದಾರೆ.