ಕೂಡಿಗೆ, ನ. ೨೮: ಹೆಬ್ಬಾಲೆಯ ಶ್ರೀ ಬನಶಂಕರಿ ಅಮ್ಮನವರ ಜಾತ್ರೋತ್ಸವವು ಡಿ. ೧ ರಂದು ನಡೆಯಲಿದೆ.

ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನ ಮತ್ತು ಶ್ರೀ ಬಸವೇಶ್ವರ ದೇವಸ್ಥಾನ, ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಸಮಿತಿ ಹಾಗೂ ಹೆಬ್ಬಾಲೆ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ವರ್ಷಂಪ್ರತಿಯAತೆ ಬನಶಂಕರಿ ಜಾತ್ರೋತ್ಸವ ಕಾರ್ಯಕ್ರಮಗಳು ನಡೆಯಲಿದ್ದು, ಡಿ. ೧. ರಂದು ಬೆಳಿಗ್ಗೆ ಗಣಪತಿ ಪೂಜೆ, ರಕ್ಷಾಬಂಧನ, ನವಗ್ರಹ ಕಲಶಗಳ ಸ್ಧಾಪನೆ, ೧೦ ಗಂಟೆಗೆ ಗಣಹೋಮ, ದುರ್ಗಾಹೋಮ,ನವಗ್ರಹ ಹೋಮ, ಮೃತ್ಯುಂಜಯ ಹೋಮ, ಮಧ್ಯಾಹ್ನ ಅಭಿಷೇಕ ಮಹಾಪೂಜೆ ನಡೆಯಲಿದೆ. ಸಂಜೆ ೭.೩೦ ಗಂಟೆಗೆ ಕೊಂಡಪೂಜೆ ಅಗ್ನಿ ಕೊಂಡ ಸ್ದಾಪನೆ, ಹಣ್ಣು ತುಪ್ಪ ನೈವೇದ್ಯ, ರಾತ್ರಿ ೮ ಗಂಟೆಗೆ ವಿವಿಧ ಉಪ ಗ್ರಾಮಗಳ ಮತ್ತು ಹೆಬ್ಬಾಲೆ ವಾರ್ಡ್ಗಳ ವಿವಿಧ ಸಂಘಟನೆಗಳಿAದ ಮಂಟಪಗಳ ಶೋಭಾಯತ್ರೆಯು ಹೆಬ್ಬಾಲೆ ಬಸ್ ನಿಲ್ದಾಣದ ಸರ್ಕಲ್‌ನಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.

ರಾತ್ರಿ ೧೦ ಗಂಟೆಗೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ಉತ್ಸವ ಆರಂಭವಾಗಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ರಮೇಶ್ ತಿಳಿಸಿದ್ದಾರೆ.