ಸುಂಟಿಕೊಪ್ಪ, ನ. ೨೮: ಸಮೀಪದ ಬೋಯಿಕೇರಿ ಅಂಗನ ವಾಡಿಯಲ್ಲಿ, ವಿವಿಧ ಅಂಗನವಾಡಿ ಗಳಲ್ಲಿ ೩೨ ವರ್ಷಗಳ ಕಾಲ ಕಾರ್ಯಕರ್ತೆಂ iÀÄರಾಗಿ ಕಾರ್ಯ ನಿರ್ವಹಿಸಿದ ಮಕ್ಕಂದೂರು ಅಂಗನ ವಾಡಿ ಕಾರ್ಯಕರ್ತೆ ಪ್ರೇಮಾವತಿ, ಬೋಯಿಕೇರಿ ಅಂಗನವಾಡಿ ಕಾರ್ಯಕರ್ತೆ ಲೀಲಾವತಿ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟಣೆಯ ಕೊಡಗು ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ತಿಂಗಳಿಗೆ ತಾವು ಪಡೆಯುವ ಗೌರವ ಧನಕ್ಕೆ ಮೀರಿ ನಿಸ್ವಾರ್ಥ ಸೇವೆ ಮಾಡುತ್ತಿದ್ದು ಇವರಿಂದ ಬಾಲ್ಯದಲ್ಲಿ ಮಕ್ಕಳು ಸಂಸ್ಕಾರ, ಸಂಸ್ಕೃತಿ ಮತ್ತು ಶಿಸ್ತು ಪಡೆದು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಿದ್ದಾರೆ. ಇಂತಹ ಕಾರ್ಯಕರ್ತೆಯರ ಸೇವೆ ಯನ್ನು ಗುರುತಿಸಿ ಸನ್ಮಾನಿಸುವುದು ಅವಿಸ್ಮರಣಿಯ ಎಂದರು. ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ೩೦ ರಿಂದ ೩೨ ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಸರಕಾರದಿಂದ ದೊರೆಯುವ ಸೌಲಭ್ಯದೊಂದಿಗೆ ಅಂಗನವಾಡಿ ಕೇಂದ್ರವನ್ನು ಉತ್ತಮ ಮಟ್ಟದಲ್ಲಿ ನಡೆಸಿದ್ದು ಮಕ್ಕಳಿಗೆ ಮತ್ತು ಮಹಿಳೆಯರಿಗೆ ಎಲಾ ರೀತಿಯ ಸೌಲಭ್ಯ ದೊರಕಿಸಿಕೊಡುವಲ್ಲಿ ಬಹಳಷ್ಟು ಶ್ರಮವಹಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭ ಅಂಗನವಾಡಿ ಕಾರ್ಯಕರ್ತರನ್ನು ಸರಕಾರಿ ನೌಕರರು ಎಂದು ಪರಿಗಣಿಸಬೇಕು. ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಅಂಗನವಾಡಿ ಶಿಕ್ಷಕಿಯರು ಎಂದು ಪುನರ್ ಪದನಾಮಕರಿಸುವ ಬಗ್ಗೆ ಮನವಿಯನ್ನು ಅಂಗನವಾಡಿ ಕಾರ್ಯಕರ್ತೆಯರು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹಾಗೂ ಶಾಸಕ ಮಂತರ್ ಗೌಡ ಅವರಿಗೆ ತೆನ್ನೀರ ಮೈನಾ ಮುಖಾಂತರ ಮನವಿ ಸಲ್ಲಿಸಿದರು. ನಂತರ ಅಂಗನವಾಡಿ ಕಾರ್ಯಕರ್ತೆಯರಿಗೆ ಯೂನಿ ಟರ್ನ್ ಕರ್ನಾಟಕ ತರಬೇತಿ ನೀಡಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಮಕ್ಕಳಿಗೆ ಛದ್ಮವೇಷ ಮತ್ತು ವಿವಿಧs ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಂಘಟಣೆಯ ಅಧ್ಯಕ್ಷರಾದ ಧರಣಿ, ಇತರರು ಹಾಜರಿದ್ದರು.