ಮಡಿಕೇರಿ, ನ. ೨೮: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದಾಲಯ ಶಿವಮೊಗ್ಗ ಇದರ ವ್ಯಾಪ್ತಿಯ ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ ಇವರ ವತಿಯಿಂದ ೫ ದಿನಗಳ ಕಾಲ ವಿವಿಧ ಬಗೆಯ ತರಬೇತಿ ಕಾರ್ಯಕ್ರಮವನ್ನು ನೀಡಲಾಗುತ್ತಿದೆ.

ಇಚ್ಚೆಯುಳ್ಳ ಪರಿಶಿಷ್ಟ ಪಂಗಡದ ರೈತ ಹಾಗೂ ರೈತ ಮಹಿಳೆಯರು ಈ ತರಬೇತಿಯಲ್ಲಿ ಭಾಗವಹಿಸಬಹುದು. ಈ ತರಬೇತಿ ಡಿಸೆಂಬರ್ ೨ ರಿಂದ ೬ ರವರೆಗೆ ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆಯಲ್ಲಿ ನಡೆಯಲಿದೆ. ತರಬೇತಿ ಕಾರ್ಯಕ್ರಮದಲ್ಲಿ ಜೇನು ಕೃಷಿ, ಸಿರಿಧಾನ್ಯಗಳು, ಬಿದಿರು ಉತ್ಪನ್ನಗಳು, ಹಣ್ಣುಗಳ ಮೌಲ್ಯವರ್ಧನೆ, ಮಾರುಕಟ್ಟೆ ಸೌಲಭ್ಯಗಳು ವಿವಿಧ ಅಂಶಗಳ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ. ಆಸಕ್ತರು ತಮ್ಮ ಹೆಸರು ನೋಂದಾ ಯಿಸಿಕೊಳ್ಳಬಹುದು. ತರಬೇತಿಯ ಅವಧಿ ಬೆಳಿಗ್ಗೆ ೧೦ರಿಂದ ೪ ಗಂಟೆಯವರೆಗೆ. ಹೆಚ್ಚಿನ ಮಾಹಿತಿಗಾಗಿ ಡಾ. ಲಕ್ಷಿö್ಮ, ಪಳಗಾನೂರಮಠ, ಸಹಾಯಕ ಪ್ರಾಧ್ಯಾಪಕರು, ದೂರವಾಣಿ ಸಂಖ್ಯೆ ೯೪೮೩೩೩೨೩೯೧ ಸಂಪರ್ಕಿಸಬಹುದು.