ಸಿದ್ದಾಪುರ, ನ. ೨೮: ಕಸ ಸಂಗ್ರಹಣೆಗೆ ನೀಡಿರುವ ಕಬ್ಬಿಣದ ಪೆಟ್ಟಿಗೆಗಳು ಕಾಡು ಪಾಲಾಗಿರುವ ದೃಶ್ಯ ಸಿದ್ದಾಪುರದಲ್ಲಿ ಕಂಡು ಬಂದಿದೆ. ಸಿದ್ದಾಪುರ ಪಟ್ಟಣದಲ್ಲಿ ದಿನನಿತ್ಯ ಕಸ ಹಾಗೂ ತ್ಯಾಜ್ಯಗಳು ತುಂಬಿರುವ ಹಿನ್ನೆಲೆಯಲ್ಲಿ ಅವುಗಳನ್ನು ಸಂಗ್ರಹಣೆ ಮಾಡಿ ಪೆಟ್ಟಿಗೆಯಲ್ಲಿ ತುಂಬಿ ವಿಲೇವಾರಿ ಮಾಡುವ ಸಲುವಾಗಿ ಸ್ಥಳೀಯ ವರ್ತಕರು ನಾಲ್ಕು ಕಬ್ಬಿಣದ ಪೆಟ್ಟಿಗೆಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಸಾವಿರಾರು ರೂಪಾಯಿ ವೆಚ್ಚ ಮಾಡಿ ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಕೊಡುಗೆಯಾಗಿ ನೀಡಿದ್ದರು. ಆದರೆ ಗ್ರಾಮ ಪಂಚಾಯಿತಿಯು ಅದನ್ನು ಸಮರ್ಪಕವಾಗಿ ಬಳಸದೆ ಸಿದ್ದಾಪುರ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಜಾಗದಲ್ಲಿ ಇಟ್ಟಿರುವುದು ಕಂಡು ಬಂದಿದ್ದು ಇದೀಗ ಪೆಟ್ಟಿಗೆಗಳ ಸುತ್ತಲೂ ಕಾಡುಬಳ್ಳಿಗಳು ಹಾಗೂ ಗಿಡಗಂಟಿಗಳು ಬೆಳೆದು ವ್ಯರ್ಥವಾಗಿ ಬಿದ್ದಿರುವುದು ಕಂಡು ಬರುತ್ತಿದೆ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಯಾವುದೇ ರೀತಿಯಲ್ಲಿ ತಲೆ ಕೆಡಿಸಿ ಕೊಳ್ಳದೆ ನಿರ್ಲಕ್ಷö್ಯ ವಹಿಸಿರುವುದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ. ಒಟ್ಟಿನಲ್ಲಿ ಗ್ರಾಮದ ಹಿತದೃಷ್ಟಿಯಿಂದ ಉದಾರವಾಗಿ ನೀಡಿದ್ದ ಕಸ ಸಂಗ್ರಹಣ ಪೆಟ್ಟಿಗೆಯನ್ನು ನಗರದಲ್ಲಿ ಅಳವಡಿಸಿ ಎಲ್ಲೆಂದರಲ್ಲಿ ಕಂಡುಬರುವ ತ್ಯಾಜ್ಯಗಳು ಒಂದೆಡೆ ಸಂಗ್ರಹವಾಗುವAತೆ ಕ್ರಮ ವಹಿಸಬೇಕಾದ ಗ್ರಾಮ ಪಂಚಾಯಿತಿ ನಿರ್ಲಕ್ಷö್ಯ ತೋರಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ವರ್ತಕರು ನೀಡಿರುವ ಕಸ ಸಂಗ್ರಹಣ ಪೆಟ್ಟಿಗೆಯನ್ನು ಸಮರ್ಪಕವಾಗಿ ಬಳಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.