ಕೂಡಿಗೆ, ನ. ೨೮: ಕೂಡಿಗೆ ಕೃಷಿ ಕ್ಷೇತ್ರದ ಆವರಣದಲ್ಲಿರುವ ಕೂಡಿಗೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆಯನ್ನು ಆಯೋಜನೆ ಮಾಡಲಾಗಿತ್ತು. ಮಕ್ಕಳ ಸಂತೆ ಕಾರ್ಯಕ್ರಮ ಉದ್ಘಾಟನೆಯನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಂದೀಶ್ ನೆರವೇರಿಸಿ ಮಾತನಾಡಿ, ಶಾಲೆಗಳಲ್ಲಿ ಮಕ್ಕಳಿಗಾಗಿ ಸಂತೆಯ ವ್ಯವಸ್ಥೆ ಮಾಡುವುದರಿಂದಾಗಿ ಮಕ್ಕಳ ವ್ಯವಹಾರ ಜ್ಞಾನದ ಬೆಳೆವಣಿಗೆ ಮತ್ತು ಗ್ರಾಮೀಣ ಪ್ರದೇಶದ ವಿವಿಧ ಬಗೆಗಳ ವಸ್ತುಗಳ ಮಾಹಿತಿ, ವ್ಯಾಪಾರದ ಮೂಲಕ ಜನ ಸಂಪರ್ಕ ಹೆಚ್ಚುತ್ತದೆ.

ಮುಂದಿನ ದಿನಗಳಲ್ಲಿ ವ್ಯವಹಾರಿಕ ದೃಷ್ಟಿಯ ಬೆಳೆವಣಿಗೆಗೆ ಅನುಕೂಲ ಕಲ್ಪಿಸುತ್ತದೆ ಎಂದರು. ಈ ಸಂದರ್ಭ ವಿವಿಧ ಬಗೆಗಳ ತರಕಾರಿ, ಇತರೆ ತಿಂಡಿ-ತಿನಿಸುಗಳನ್ನು ತಂದು ಮಕ್ಕಳು ಮಾರಾಟ ಮಾಡಿದರು. ಶಾಲಾ ಮುಖ್ಯೋಪಾಧ್ಯಾಯ ಎಸ್.ಎ. ಯೋಗೇಶ್, ಶಿಕ್ಷಕರಾದ ನಾಗರಾಜು, ಶೈಲಜಾ, ತಾರಾಮಣಿ, ನೇತ್ರ, ಶಶಿಕಲಾ, ಸೌಮ್ಯ, ಸೇರಿದಂತೆ ಶಾಲಾ ವಿದ್ಯಾರ್ಥಿಗಳ ಪೋಷಕರು ಹಾಜರಿದ್ದು ವ್ಯಾಪಾರದಲ್ಲಿ ತೊಡಗಿದರು.