ಮಡಿಕೇರಿ, ನ. ೨೮: ಕ್ರಿಸ್ಮಸ್ ಅಂಗವಾಗಿ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್, ಕುಶಾಲನಗರ ತಾಲೂಕು ಘಟಕ ಹಾಗೂ ಕೂಡಿಗೆ ಪವಿತ್ರ ದೇವಾಲಯದ ಸಹಯೋಗದಲ್ಲಿ ಡಿ.೧ ರಂದು ಜಿಲ್ಲಾ ಮಟ್ಟದ ಕ್ರಿಸ್‌ಮಸ್ ಕ್ಯಾರೊಲ್ ಗಾಯನ ಸ್ಪರ್ಧೆ ನಡೆಯಲಿದೆ.

ಕೂಡಿಗೆ ಆಂಜೆಲಾ ವಿದ್ಯಾನಿಕೇತನ ಆವರಣದಲ್ಲಿ ಮಧ್ಯಾಹ್ನ ೧೨ ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ವಿಧಾನ ಪರಿಷತ್ತು ಸದಸ್ಯ ಐವಾನ್ ಡಿಸೋಜ ಉದ್ಘಾಟಿಸಲಿದ್ದು, ಮೈಸೂರು ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿ ಮಹಾ ಧರ್ಮಾಧ್ಯಕ್ಷ ಡಾ.ಬರ್ನಾಡ್ ಮೊರಸ್ ದಿವ್ಯ ಸಾನಿಧ್ಯ ವಹಿಸಿ, ಆರ್ಶೀವಚನ ನೀಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಕೆ.ಎ. ಪೀಟರ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಡಿಕೇರಿ ವಲಯ ಗುರು ಜಾರ್ಜ್ ದೀಪಕ್, ಕೂಡಿಗೆ ಪವಿತ್ರ ಕುಟುಂಬ ದೇವಾಲಯದ ಧರ್ಮಗುರು ಚಾರ್ಲ್ಸ್ ನೊರೋನ್ಹ, ಕುಶಾಲನಗರ ಸಂತ ಸೆಬಾಸ್ಟಿಯನ್‌ರ ದೇವಾಲಯದ ಧರ್ಮಗುರು ಎಂ. ಮಾರ್ಟಿನ್, ಕೂಡಿಗೆ ಆಂಜೆಲಾ ವಿದ್ಯಾನಿಕೇತನ ಸುಪೀರಿಯರ್ ಸಿಸ್ಟರ್ ರೇಖಾ, ಕುಶಾಲನಗರ ಹೋಲಿ ಸ್ಪಿರಿಟ್ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಸ್ಪಂದನ, ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ, ಪ್ರಧಾನ ಕಾರ್ಯದರ್ಶಿ ಜೂಡಿ ವಾಸ್, ಉಪಾಧ್ಯಕ್ಷ ಎ.ಜಿ. ಯೇಸುದಾಸ್, ಸೋಮವಾರಪೇಟೆ ಉಪಾಧ್ಯಕ್ಷ ಫ್ರಾನ್ಸಿಸ್ ಡಿಸೋಜಾ ಪಾಲ್ಗೊಳ್ಳಲಿದ್ದಾರೆ.

ಸಂಜೆ ೪ ಗಂಟೆಗೆ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು, ಅತಿಥಿಗಳಾಗಿ ವೀರಾಜಪೇಟೆ ವಲಯ ಗುರು ಜೇಮ್ಸ್ ಡೊಮಿನಿಕ್, ಸುಂಟಿಕೊಪ್ಪ ಸಂತ ಅಂಥೋಣಿ ದೇವಾಲಯದ ಧರ್ಮಗುರು ವಿಜಯಕುಮಾರ್, ಹಟ್ಟಿಹೊಳೆ ಹೋಲಿ ರೋಸರಿ ದೇವಾಲಯದ ಧರ್ಮಗುರು ಗಿಲ್ಬರ್ಟ್ ಡಿಸಿಲ್ವ, ಕೂಡಿಗೆ ಪವಿತ್ರ ದೇವಾಲಯದ ಧರ್ಮಗುರು ಚಾರ್ಲ್ಸ್ ನೊರೋನ್ಹ, ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ವಿ.ಎಸ್. ಸಜಿ, ಮತ್ತಿತರರು ಭಾಗವಹಿಸಲಿದ್ದಾರೆ.