ಗುಡ್ಡೆಹೊಸೂರು, ನ. ೨೮: ಯಾರೇ ಆಗಿರಲಿ ಅವರವÀ ಜನಾಂಗ, ಸಮುದಾಯದ ಸಂಸ್ಕೃತಿ, ಪದ್ಧತಿ, ಆಚಾರ - ವಿಚಾರಗಳನ್ನು ಎಂದಿಗೂ ಮರೆಯಬಾರದೆಂದು ಶಕ್ತಿ ದಿನಪತ್ರಿಕೆ ಉಪ ಸಂಪಾದಕ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಕುಡೆಕಲ್ ಸಂತೋಷ್ ಹೇಳಿದರು.
ಗುಡ್ಡೆಹೊಸೂರು ಅರೆಭಾಷೆ ಗೌಡ ಸಂಘದ ೧೦ನೇ ವರ್ಷದ ಮಹಾಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದ ಅವರು; ಹತ್ತು ಕುಟುಂಬ ಹದಿನೆಂಟು ಗೋತ್ರದ ಅರೆಭಾಷೆ ಜನಾಂಗದ ಸಂಸ್ಕೃತಿ, ಆಚಾರ - ವಿಚಾರ, ಪದ್ಧತಿಗಳು ವಿಭಿನ್ನ ಹಾಗೂ ವಿಶೇಷತೆಯಿಂದ ಕೂಡಿದೆ. ಹಿಂದೆ ಪುತ್ತೂರುವರೆಗೆ ವಿಸ್ತರಿಸಿಕೊಂಡಿದ್ದ ಕೊಡಗು ಜಿಲ್ಲೆಯಲ್ಲಿ ನೆಲೆಸಿದ್ದ ಗೌಡ ಸಮುದಾಯದವರು ಕೂಡ ಇಲ್ಲಿನ ಮೂಲನಿವಾಸಿಗಳಾಗಿರುತ್ತಾರೆ. ಕೃಷಿಕರು ಹಾಗೂ ಶೌರ್ಯವಂತರಾಗಿದ್ದ ಕಾರಣಕ್ಕಾಗಿ ರಾಜರ ಕಾಲದಲ್ಲಿಯೇ ಗೌಡ ಸಮುದಾಯದವರಿಗೆ ಸಾಂಪ್ರದಾಯಿಕ ಉಡುಗೆ, ಖಡ್ಗ, ಶಾಸನಗಳನ್ನು ನೀಡಿರುವ ಬಗ್ಗೆ ಉಲ್ಲೇಖವಿದೆ. ಇದನ್ನು ಎಲ್ಲರೂ ಅರಿತುಕೊಂಡು ಮುಂದಿನ ಪೀಳಿಗೆಗೆ ತಿಳಿಸುವದರೊಂದಿಗೆ ನಮ್ಮ ಸಂಸ್ಕೃತಿ, ಪದ್ಧತಿಗಳನ್ನು ಉಳಿಸಿ, ಬೆಳೆಸಬೇಕೆಂದು ಹೇಳಿದರು.
ಗೌಡ ಜನಾಂಗದ ಪ್ರತಿಯೊಂದು ಹಬ್ಬ, ಆಚರಣೆಗಳು ಪ್ರಕೃತಿ - ಪರಿಸರಕ್ಕೆ ಸಂಬAಧಪಟ್ಟವುಗಳಾಗಿದ್ದು, ಒಂದೊAದು ಆಚರಣೆಗಳಿಗೂ ಒಂದೊAದು ಹಿನ್ನೆಲೆಯಿದೆ. ಈ ಬಗ್ಗೆ ಯುವ ಪೀಳಿಗೆಗೆ ತಿಳಿಯಪಡಿಸಬೇಕಿದೆ. ಸ್ವಾತಂತ್ರö್ಯ ಹೋರಾಟಗಾರ, ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡ, ಕೆದಂಬಾಡಿ ರಾಮೇಗೌಡ, ಕುಡೆಕಲ್ ಪುಟ್ಟ ಅವರುಗಳ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕು ಎಂದು ಹೇಳಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪನೆಗೆ ಕಾರಣಕರ್ತರಾದ ಆಗಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ವಿಧಾನಸಭಾಧ್ಯಕ್ಷರಾಗಿದ್ದ ಕೆ.ಜಿ. ಬೋಪಯ್ಯ, ಶಾಸಕರಾಗಿದ್ದ ಅಪ್ಪಚ್ಚುರಂಜನ್, ಕೊಡಗು ಗೌಡ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷರಾಗಿದ್ದ ತುಂತಜೆ ಗಣೇಶ್ ಮತ್ತು ತಂಡದವರ ಶ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಅಕಾಡೆಮಿಯಿಂದಾಗಿ ಇಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಹಳ್ಳಿಯಿಂದ ಹಿಡಿದು ಡೆಲ್ಲಿಯವರೆಗೆ ಪಸರಿಸುವಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ವಾಭಿಮಾನಕ್ಕೆ ಧಕ್ಕೆ ತರಬಾರದು
ಮುಖ್ಯ ಅತಿಥಿಗಳಾಗಿದ್ದ ವಿಧಾನಸಭಾ ಮಾಜಿ ಅಧ್ಯಕ್ಷ ಕೊಂಬಾರನ ಜಿ. ಬೋಪಯ್ಯ ಮಾತನಾಡಿ, ಯಾರೂ ಕೂಡ ಯಾವುದೇ ಒಂದು ಜಾತಿಯಲ್ಲಿ ಹುಟ್ಟಬೇಕೆಂದು ಬಯಸಿ ಹುಟ್ಟುವುದಿಲ್ಲ. ಹುಟ್ಟಿದ ನಂತರ ನಮ್ಮ ಜಾತಿ ಸಂಸ್ಕೃತಿ, ಆಚಾರ - ವಿಚಾರಗಳ ಬಗ್ಗೆ ಅಭಿಮಾನವಿರಬೇಕು. ಬೇರೆೆ ಜಾತಿ, ಸಂಸ್ಕೃತಿ ಬಗ್ಗೆ ದುರಾಭಿಮಾನ ಇರಬಾರದು. ಸಂಸ್ಕೃತಿ, ಆಚಾರಗಳನ್ನು ಬಳಸಿ, ಬೆಳೆಸಬೇಕೆಂದು ಕರೆ ನೀಡಿದರು.
ಸಮಾಜ, ಸಂಘ - ಸಂಸ್ಥೆಗಳ ಸ್ಥಾಪನೆಯೊಂದಿಗೆ ನಾಡಿಗೆ ಉತ್ತಮ ಸಂದೇಶ ನೀಡಬೇಕು. ಇದರಿಂದ ದೇಶಕ್ಕೆ ಒಳಿತಾಗಲಿದೆ. ಕೆಲವೊಂದು ದುಷ್ಟಶಕ್ತಿಗಳು ಹುಳಿ ಹಿಂಡುವ ಕೆಲಸ ಮಾಡುತ್ತಾರೆ. ಅಂತಹವರುಗಳನ್ನು ಸಮಾಜದಿಂದ ದೂರ ಇಡಬೇಕು. ಅಂತಹವರು ಸಮಾಜಕ್ಕೆ ಕಂಟಕಪ್ರಾಯರಾಗಿರುತ್ತಾರೆ ಎಂದು ಹೇಳಿದರು.
ಅರೆಭಾಷೆ ಸಂಸ್ಕೃತಿಗೆ ಒತ್ತಾಸೆ ನೀಡುವ ಸಲುವಾಗಿ ಅಕಾಡೆಮಿ ಸ್ಥಾಪನೆ ಮಾಡಲಾಗಿದೆ. ಅಕಾಡೆಮಿಯ ಕೆಲಸ - ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ಆಗಬೇಕಿದೆ. ನಮ್ಮ ಸಂಸ್ಕೃತಿ, ಇತಿಹಾಸವನ್ನು ಬೆಳೆಸಿಕೊಂಡು ಹೋಗಬೇಕಿದೆ ಎಂದ ಅವರು, ಎಲ್ಲರೂ ಮಕ್ಕಳಿಗೆ ಶಿಕ್ಷಣ ನೀಡಬೇಕು, ಆ ಮೂಲಕ ಆರ್ಥಿಕವಾಗಿ ಸಬಲರಾಗಬೇಕು. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡುವ ಕೆಲಸ ಆದರೆ, ಅದನ್ನು ವಿರೋಧಿಸಬೇಕು. ಯಾವುದೇ ಕಾರಣಕ್ಕೂ ಹಿಂಜರಿಕೆ ಇರಬಾರದೆಂದು ಹೇಳಿದರು.
ಜಾಗ ಮಾರಬೇಡಿ
ಮತ್ತೋರ್ವ ಅತಿಥಿ, ಮಾಜಿ ಸಚಿವ ಮಂಡೇಪAಡ ಅಪ್ಪಚ್ಚು ರಂಜನ್ ಮಾತನಾಡಿ, ಗುಡ್ಡೆಹೊಸೂರು ಗೌಡ ಸಂಘದವರು ಸ್ವಂತ ಕಟ್ಟಡಕ್ಕಾಗಿ ಜಾಗ ಖರೀದಿ ಮಾಡಿದ್ದಾರೆ. ಕೂಡಲೇ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭ ಮಾಡಿ; ಸಂಸದರು, ವಿಧಾನಪರಿಷತ್ ಸದಸ್ಯರ ಮೂಲಕ ಹಾಗೂ ಸ್ವತಃ ತಾನು ಕೂಡ ಸಹಕಾರ ನೀಡುವುದಾಗಿ ಹೇಳಿದರು.
ನಮ್ಮ ಸಂಸ್ಕೃತಿ, ಪದ್ಧತಿಗಳನ್ನು ಬೆಳೆಸುವುದರೊಂದಿಗೆ ಮುಂದಿನ ಪೀಳಿಗೆಗೆ ಪರಿಚಯಿಸಬೇಕು; ಅದು ದೇಶಕ್ಕೆ ಪೂರಕವಾಗಿರಬೇಕು. ಕಷ್ಟ ಕಾಲದಲ್ಲಿದ್ದಾಗ ಒಬ್ಬರಿಗೊಬ್ಬರು ಸಹಕಾರ ಮಾಡಬೇಕು. ಯಾವುದೇ ಕಾರಣಕ್ಕೂ ನಮ್ಮ ಅಜ್ಜ, ಅಪ್ಪ, ಸಂಪಾದನೆ ಮಾಡಿರುವ ಜಾಗವನ್ನು ಮಾರಾಟ ಮಾಡಬೇಡಿ, ಕೊಡಗು ಜಿಲ್ಲೆಯಲ್ಲಿರುವಂತಹ ಜಾಗ ಬೇರೆಲ್ಲೂ ಸಿಗುವುದಿಲ್ಲ. ಇಲ್ಲಿನ ವಾತಾವರಣ ಬೇರೆಲ್ಲೂ ಕಾಣಸಿಗುವುದಿಲ್ಲವೆಂದು ಕಿವಿಮಾತು ಹೇಳಿದರು.
ಕೊಡಗು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬೆದರಂಗಾಲ ಭಾರತೀಶ್ ಮಾತನಾಡಿ; ಜನಾಂಗಬಾAಧವರು ಎಲ್ಲರೂ ಒಗ್ಗಟ್ಟಾಗಿ ಇರಬೇಕು, ಸಂಸ್ಕೃತಿ, ಪದ್ಧತಿ, ಬೆಳೆಸಿಕೊಂಡು ಹೋಗಬೇಕು ಎಂದು ಹೇಳಿದರು. ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ಗೌಡ ಸಮುದಾಯದ ಬಹುತೇಕ ಮಂದಿ ಇದ್ದಾರೆ. ಎಲ್ಲರೂ ಸೇರಿ ಸಂಘ ಸ್ಥಾಪನೆ ಮಾಡಿರುವುದು ಉತ್ತಮ ಕಾರ್ಯವಾಗಿದೆ. ಆ ಮೂಲಕ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿ, ಒಗ್ಗಟ್ಟು ಪ್ರದರ್ಶಿಸುತ್ತಿರುವುದು ಶ್ಲಾಘನೀಯವೆಂದರು.ಮತ್ತೋರ್ವ ಅತಿಥಿ ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ಮಾತನಾಡಿ; ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ಪ್ರತಿಯೊಂದು ಮತೆತನದವರು ಇದ್ದಾರೆ. ಎಲ್ಲರೂ ಕೂಡ ಸಮಾಜದಲ್ಲಿ ಸದಸ್ಯತ್ವ ಪಡೆದುಕೊಂಡು ಒಗ್ಗಟ್ಟು ಪ್ರದರ್ಶಿಸುತ್ತಿರುವುದು ಸಂತಸದ ವಿಷಯ; ನಮ್ಮದು ಶ್ರೀಮಂತ ಸಂಸ್ಕೃತಿಯಾಗಿದ್ದು, ಯಾವುದೇ ಹಿಂಜರಿಕೆ ಇಲ್ಲದೆ ಪಾಲನೆ ಮಾಡಿಕೊಂಡು ಬೆಳೆಸಬೇಕೆಂದು ಹೇಳಿದರು.
ಗೌಡ ಜನಾಂಗದವರು ಕೃಷಿಕರು, ಧೈರ್ಯವಂತರಾಗಿದ್ದು, ಸಮಾಜದಲ್ಲಿ ಯಾವುದೇ ಸಂದರ್ಭದಲ್ಲೂ ನಿರ್ಣಾಯಕ ಪಾತ್ರ ವಹಿಸುವವರಾಗಿದ್ದಾರೆ. ಯಾವುದೇ ಸಮಸ್ಯೆ ಬಂದರೂ ಎದುರಿಸಬೇಕು ಈ ನಿಟ್ಟಿನಲ್ಲಿ ಕುಶಾಲನಗರ ಗೌಡ ಸಮಾಜ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಗುಡ್ಡೆಮನೆ ವಿಶ್ವಕುಮಾರ್ ಮಾತನಾಡಿ, ಸಂಘಕ್ಕೆ ನಿವೇಶನ ಖರೀದಿಗೆ ಸಂಬAಧಿಸಿದAತೆ ಮಾಜಿ ಶಾಸಕರುಗಳಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ಅವರುಗಳು ಸಹಕಾರ ನೀಡಿದ್ದಾರೆ. ಇದೀಗ ಈಗಿನ ಸರಕಾರ ಸಂಘ - ಸಂಸ್ಥೆಗಳಿಗೆ ಜಾಗ ನೀಡಬಾರದೆಂದು ತೀರ್ಮಾನ ಮಾಡಿದೆ. ಆದರೂ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಪ್ರಯತ್ನಿಸಲಾಗುವುದೆಂದರು.
ನಮ್ಮ ಸಂಸ್ಕೃತಿ, ಶಾಸ್ತçದ ಬಗ್ಗೆ ತಿಳಿದಿರಬೇಕು. ಮೊಬೈಲ್ ಬಂದ ಮೇಲೆ ಎಲ್ಲವೂ ಮರೆತುಹೋಗುತ್ತಿದೆ. ಮೊಬೈಲ್ ಅನ್ನು ಮಿತವಾಗಿ ಬಳಸುವದರೊಂದಿಗೆ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವಂತೆ ಹೇಳಿದರು.
ಇದೇ ಸಂದರ್ಭದಲ್ಲಿ ಸಮಾಜಸೇವೆ ನಡೆಸುತ್ತಿರುವ ಕುಶಾಲನಗರದ ಅಮೆಮನೆ ಜನಾರ್ಧನ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕಪಡೆದ ಮೆರ್ಕಜೆ ಮೇದಪ್ಪ, ಭಾಗೀರತಿ ಪುತ್ರಿ ರೋಹಿಣಿ, ದ್ವಿತೀಯ ಪಿ.ಯು.ಸಿ ಹೆಚ್ಚು ಅಂಕಪಡೆದ ದೇವಿಕಾ, ಕ್ರೀಡೆಯಲ್ಲಿ ಸಾಧನೆ ಮಾಡಿದ ಕುಂಬುಗೌಡನ ವಿನೋದ್ ಪುತ್ರ ವಿಶ್ವಜೀತ್ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಬಾಜಡ್ಕ ಮುತ್ತಪ್ಪ ಜಯಶ್ರೀ ಪುತ್ರಿ ಶಿವಾನಿ ಅವರುಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷೆ ಬೊಮ್ಮೆಗೌಡನ ಭುವನೇಶ್ವರಿ, ಕಾರ್ಯದರ್ಶಿ ಅಚ್ಚಾಂಡಿರ ತಾರ ಹೇಮರಾಜ್, ಖಜಾಂಚಿ ಕುಡೆಕಲ್ ರೂಪ ನಿತ್ಯನಂದ, ನಿರ್ದೇಶಕರಾದ ಬೊಮ್ಮುಡಿ ಬಾಲಕೃಷ್ಣ ಚಂಡಿರ ಮಂಜುನಾಥ್, ಪುದಿಯನೆರವನ ಪದ್ಮಾವತಿ, ಬೈಲೆಮನೆ ಮಾಚಮ್ಮ, ಗುಡ್ಡೆಮನೆ ರವಿ, ಕರ್ಣಯ್ಯನ ಬಾಲಕೃಷ್ಣ, ಕುಡೆಕಲ್ ಗುರುಪ್ರಸಾದ್, ಕೋಡಿ ಪೂವಯ್ಯ,ಅಚ್ಚಾಂಡಿರ ಹೇಮರಾಜ್, ಮಂದೊಡಿ ಜಗನ್ನಾಥ್, ಗುಡ್ಡೆಮನೆ ಜಯವಿಶುಕುಮಾರ್ ಉಪಸ್ಥಿತರಿದ್ದರು.
ಇದೇ ಸಂದರ್ಭ ಸದಸ್ಯರ ಮಕ್ಕಳಿಂದ ಮತ್ತು ಮಿಲನ ಭರತ್ ತಂಡದವರಿAದ ಅರೆಭಾಷೆ, ಪದ್ದತಿಯ ಬಗ್ಗೆ ಬೆಳಕು ಚೆಲ್ಲುವ ನೃತ್ಯ ಪ್ರದರ್ಶನ ನಡೆಯಿತು. ಚಂಡಿರ ಮಂಜುನಾಥ್ ಸ್ವಾಗತಿಸಿದರು. ಭುವನೇಶ್ವರಿ ವಂದಿಸಿದರು. ಕುಡೆಕಲ್ ಗಣೇಶ್ ಕಾರ್ಯಕ್ರಮ ನಿರೂಪಿಸಿದರು.