ಗೋಣಿಕೊಪ್ಪಲು, ನ. ೨೮: ಪರ-ವಿರೋಧದ ಮೂಲಕ ಒಂದೇ ವಿಚಾರದಡಿ ನಡೆದ ಚರ್ಚೆಯಿಂದ ಶ್ರೀಮಂಗಲ ಗ್ರಾಮಸಭೆ ಗೊಂದಲದ ಗೂಡಾಗಿ ಪರಿವರ್ತನೆಗೊಂಡಿತು. ಹೋಂಸ್ಟೇವೊAದರ ನಿರ್ಮಾಣಕ್ಕೆ ನಿರಾಪೇಕ್ಷಣಾ ಪತ್ರ ನೀಡಿದ ವಿಷಯ ಚರ್ಚಾ ವಸ್ತುವಾಗಿತ್ತು. ಸುದೀರ್ಘ ಚರ್ಚೆಯ ಬಳಿಕ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಒಪ್ಪಿಗೆ ನಂತರ ಮುಂದಿನ ದಿನಗಳಲ್ಲಿ ಹೋಂಸ್ಟೇ-ರೆಸಾರ್ಟ್ ನಿರ್ಮಾಣಕ್ಕೆ ಎನ್.ಓ.ಸಿ. ನೀಡಲು ನಿರ್ಧಾರ ಕೈಗೊಳ್ಳಲಾಯಿತು.
ಶ್ರೀಮಂಗಲ ಗ್ರಾಮ ಪಂಚಾಯಿತಿ ಗ್ರಾಮ ಸಭೆಯು ಗ್ರಾ.ಪಂ. ಅಧ್ಯಕ್ಷೆ ಕಳ್ಳಂಗಡ ವಸಂತಿ ಅಧ್ಯಕ್ಷತೆಯಲ್ಲಿ ನಡೆಯಿತು. ಕಳೆದ ಸಾಲಿನ ವರದಿಯ ಬಗ್ಗೆ ಯಾವುದೇ ಚರ್ಚೆಗಳು ನಡೆಯಲಿಲ್ಲ. ಸಭೆಗೆ ಆಗಮಿಸಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖಾ ಕಾರ್ಯಕ್ರಮವನ್ನು ಸಭೆಯ ಮುಂದಿಡಲು ಆರಂಭಿಸಿದರು.
ಆರAಭದಲ್ಲಿಯೇ ಕಂದಾಯ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದ ಬಗ್ಗೆ ವಿವರ ನೀಡುತ್ತಿದ್ದಂತೆಯೇ ಶ್ರೀಮಂಗಲ ಕುರ್ಚಿ ಗ್ರಾಮದಲ್ಲಿ ನೂತನವಾಗಿ ಆರಂಭಗೊAಡಿರುವ ಹೋಂಸ್ಟೇ ನಿರ್ಮಾಣದ ಬಗ್ಗೆ ಗ್ರಾಮಸ್ಥರಾದ ಕುಪ್ಪಂಡ ಸಂಜು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಗ್ರಾಮದ ಅಜ್ಜಮಾಡ ಪ್ರಮೋದ್, ಕಾಳಿಮಾಡ ವಿಜಯ್, ಅಜ್ಜಮಾಡ ಮೋಹನ್ ಧ್ವನಿಗೂಡಿಸಿದರು.
ಕಂದಾಯ ಇಲಾಖಾ ಅಧಿಕಾರಿ ಗ್ರಾಮ ಪಂಚಾಯಿತಿ ನೀಡಿರುವ ನಿರಾಪೇಕ್ಷಣಾ ಪತ್ರದ ಆಧಾರದಲ್ಲಿ ಹಾಗೂ ವಿವಿಧ ಇಲಾಖೆ ನೀಡಿರುವ ಅನುಮತಿಯ ಹಿನ್ನೆಲೆಯಲ್ಲಿ ಹೋಂಸ್ಟೇಗೆ ಅನುಮತಿಯನ್ನು ನೀಡಲು ಹಿರಿಯ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಸಮಜಾಯಿಷಿಕೆ ನೀಡಿದರು.
ಅಧಿಕಾರಿಯ ಉತ್ತರಕ್ಕೆ ತೃಪ್ತರಾಗದ ಗ್ರಾಮಸ್ಥರಾದ ಕುಪ್ಪಂಡ ಸಂಜು ಹೋಂಸ್ಟೇ ವಿಚಾರದಲ್ಲಿ ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಿದ್ದೇವೆ. ಹೋಂಸ್ಟೇ ನಿರ್ಮಾಣದ ಜಾಗದಲ್ಲಿ ಮಾಲೀಕರು ವಾಸ ಇಲ್ಲ. ಆದರೆ, ಇಲಾಖಾಧಿಕಾರಿಗಳು ವಾಸ ದೃಢೀಕರಣ ಪತ್ರ ನೀಡಿರುವುದು ಸರಿಯಲ್ಲ ಎಂದು ಕಂದಾಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ನಿಯಮದಂತೆ ಸ್ಥಳದ ಮಹಜರಿಗೆ ತೆರಳಿದ ವೇಳೆ ಮನೆ ಮಾಲೀಕರು ವಾಸವಿರುವುದು ದೃಢಪಟ್ಟಿದೆ. ವಾಸ ದೃಢೀಕರಣವನ್ನು ನೀಡಲು ಮೇಲಧಿಕಾರಿಗಳಿಗೆ ಶಿಫಾರಸ್ಸು ಮಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಇದರಿಂದ ಕೆರಳಿದ ಕೆಲವರು ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸಭೆ ಸಂಪೂರ್ಣ ಗೊಂದಲದ ಗೂಡಾಗಿ ಪರಿವರ್ತನೆಗೊಂಡಿತು. ಅಧ್ಯಕ್ಷರು ಎದ್ದು ನಿಂತು ಸಭೆಯನ್ನು ಹತೋಟಿಗೆ ತರುವ ಪ್ರಯತ್ನ ನಡೆಸಿದರು. ಪರಸ್ಪರ ಮಾತಿನÀ ಚಕಮಕಿಯಲ್ಲಿ ಗ್ರಾಮ ಸಭೆಯು ಸಂಪೂರ್ಣ ಗೊಂದಲಕ್ಕೀಡಾಯಿತು.
ನೋಡಲ್ ಅಧಿಕಾರಿ ಡಾ. ಗಿರೀಶ್ ಮಧ್ಯೆ ಪ್ರವೇಶಿಸಿ ಸಭೆಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು. ಬಂದಿದ್ದು ಅಗತ್ಯ ದಾಖಲಾತಿ ನೀಡಲು ತಾ.೨೯ ಅನ್ನು ನಿಗದಿಪಡಿಸಲಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನ್ಯಾಯಾಲಯಕ್ಕೆ ದಾಖಲೆ ನೀಡಬೇಕು ಎಂದು ಸಭೆಯ ಅಧ್ಯಕ್ಷೆ ಕಳ್ಳಂಗಡ ವಸಂತಿ ಸಭೆಗೆ ಮಾಹಿತಿ ನೀಡಿದರು.
ನ್ಯಾಯಲಯದ ಆದೇಶದ ವಿವರವನ್ನು ನೋಡಲ್ ಅಧಿಕಾರಿಯವರ ಸಮ್ಮುಖದಲ್ಲಿ ನೀಡಿ ಸಭೆಯಲ್ಲಿ ವಿವರಣೆ ನೀಡಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪಲ್ವಿನ್ ಪೂಣಚ್ಚ ಮಾತನಾಡಿ, ಮುಂದಿನ ದಿನದಲ್ಲಿ ಹೋಂಸ್ಟೇ ಹಾಗೂ ರೆಸಾರ್ಟ್ಗಳಿಗೆ ಅನುಮತಿ ನೀಡುವ ವೇಳೆ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಂಡ ನಂತರ ಮುಂದಿನ ಪ್ರಕ್ರಿಯೆ ನಡೆಸಬೇಕು ಎಂದು ಸಲಹೆ ನೀಡಿದರು.
ಅಂತಿಮವಾಗಿ ಕುರ್ಚಿ, ಶ್ರೀಮಂಗಲ ಭಾಗದಲ್ಲಿ ಮುಂದಿನ ದಿನಗಳಲ್ಲಿ ಹೋಂಸ್ಟೇ ಅಥವಾ ರೆಸಾರ್ಟ್ ನಿರ್ಮಾಣದ ಸಂದರ್ಭ ಪಂಚಾಯಿತಿಯ ಆಡಳಿತ ಮಂಡಳಿಯ ಸರ್ವ ಸದಸ್ಯರ ನಿರ್ಧಾರದ ಮೇಲೆ ನಿರಾಪೇಕ್ಷಣಾ ಪತ್ರ ನೀಡಲು ನಿರ್ಣಯವನ್ನು ಕೈಗೊಳ್ಳಲಾಯಿತು
ಸಭೆಗೆ ಸ್ಥಳೀಯ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಆಗಮಿಸಿ ಇಲಾಖೆ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು. ಬಸ್‌ಗಳಲ್ಲಿ ಬರುವ ಶಾಲಾ ವಿದ್ಯಾರ್ಥಿಗಳು ಬಸ್‌ನ ಬಾಗಿಲಲ್ಲಿಯೇ ಜೋತಾಡಿಕೊಂಡು ಬರುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗ್ರಾ.ಪಂ. ಸದಸ್ಯೆ ಚೋಕಿರ ಕಲ್ಪನ ತಿಮ್ಮಯ್ಯ ಪೊಲೀಸರಿಗೆ ಮನವಿ ಮಾಡಿದರು.
ಪಂಚಾಯಿತಿಯ ವಾಣಿಜ್ಯ ಸಂಕೀರ್ಣದಲ್ಲಿ ಶೌಚಾಲಯ ಇಲ್ಲದಿರುವು ದರಿಂದ ವ್ಯಾಪಾರ ಮಾಡುವವರಿಗೆ ತೊಂದರೆಯಾಗಿದೆ. ಕಟ್ಟಡವು ಅಲ್ಲಲ್ಲಿ ಬಿರುಕು ಬಿಟ್ಟು ಶಿಥಿಲಾವಸ್ಥೆಗೆ ತಲುಪಿದೆ ಎಂದು ಸ್ಥಳೀಯ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಮಾಣಿರ ಮುತ್ತಪ್ಪ ಗಮನ ಸೆಳೆದರು.
ಜನವರಿ ತಿಂಗಳಿನಿAದ ಮಾರ್ಚ್ ತಿಂಗಳಿನವರೆಗೆ ರೈತರು ತಮ್ಮ ಪಿಕ್‌ಅಪ್ ಜೀಪಿನಲ್ಲಿ ಕಾರ್ಮಿಕರನ್ನು ಕರೆ ತರುವ ಸಂದರ್ಭ ಪೊಲೀಸರು ತೊಂದರೆ ನೀಡದಂತೆ ಗ್ರಾಮ ಪಂಚಾಯಿತಿಯ ಸದಸ್ಯ ಅಜ್ಜಮಾಡ ಜಯ ಮನವಿ ಮಾಡಿದರು. ಪಿಡಿಓ ಸತೀಶ್ ಸ್ವಾಗತಿಸಿ, ವಂದಿಸಿದರು.
ಸಭೆಯಲ್ಲಿ ಶ್ರೀಮಂಗಲ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆ ಪಿ.ಕೆ. ರಾಣಿ, ಸದಸ್ಯರುಗಳಾದ ಎ.ಸಿ. ಜಯ, ಎಂ.ಎನ್. ಪೊನ್ನಪ್ಪ, ಡಿ.ಪಿ. ಸಾವಿತ್ರಿ, ಪಿ.ಜಿ. ಗೋಪಿ, ಸಿ.ಜಿ. ಕಾಳಯ್ಯ, ಹೆಚ್.ಕೆ. ಮಲ್ಲಿಗೆ, ಜೆ.ಆರ್. ರಾಜು, ಪಣಿಯರ ಕರಿಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ವಿ.ಎಸ್. ಸತೀಶ್, ಕಾರ್ಯದರ್ಶಿಗಳಾದ ಎಂ.ಎಸ್. ವಿನುತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಭೆಯಲ್ಲಿದ್ದ ಚೆಸ್ಕಾಂ ಅಧಿಕಾರಿಗಳು ಕಾರ್ಯಕ್ರಮದ ವಿವರಣೆ ನೀಡುತ್ತಿದ್ದಂತೆಯೇ, ಸಭೆಯಲ್ಲಿ ಮತ್ತೆ ಗೊಂದಲದ ವಾತಾವರಣ ನಿರ್ಮಾಣವಾಯಿತು. ಚರ್ಚೆಯಲ್ಲಿರುವ ಹೋಂಸ್ಟೇಗೆ ವಿದ್ಯುಚ್ಛಕ್ತಿ ನೀಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಅಧಿಕಾರಿಯೂ ಪಂಚಾಯಿತಿ ನೀಡಿರುವ ನಿರಾಪೇಕ್ಷಣಾ ಪತ್ರದ ಆಧಾರದ ಮೇಲೆ ಅನುಮತಿ ನೀಡಿರುವುದಾಗಿ ಸಭೆಗೆ ಉತ್ತರಿಸಿದರು.
ಅಧಿಕಾರಿಯ ಉತ್ತರದಿಂದ ತೃಪ್ತರಾಗದ ಸಂಜುರವರು ಸಾರ್ವಜನಿಕರು ನೀಡಿರುವ ದೂರನ್ನು ಆಲಿಸದೆ ವಿದ್ಯುತ್ ನೀಡಿರುವುದು ಸರಿಯಲ್ಲ. ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಮಜಾಯಿಷಿಕೆ ನೀಡಬೇಕೆಂದು ಒತ್ತಾಯಿಸಿದರು. ಈ ವೇಳೆ ಪಿಡಿಓ ಸತೀಶ್‌ರವರು ವಿದ್ಯುಚ್ಛಕ್ತಿಗೆ ಪಂಚಾಯಿತಿ ವತಿಯಿಂದ ನಿರಾಪೇಕ್ಷಣಾ ಪತ್ರ ನೀಡಿರುವುದಾಗಿ ಸ್ಪಷ್ಟನೆ ನೀಡಿದರು.
ಹೋಂಸ್ಟೇ ನಡೆಸುತ್ತಿರುವ ವಿಚಾರದಲ್ಲಿ ನ್ಯಾಯಾಲಯದಿಂದ ಆದೇಶ