ಗೋಣಿಕೊಪ್ಪ ವರದಿ, ನ. ೨೮ : ಹಾಕಿಕೂರ್ಗ್ ಸಹಯೋಗದಲ್ಲಿ ಕುಟ್ಟಂದಿ ಗ್ರಾಮದ ಬೇರಳಿನಾಡ್, ಕುತ್ತ್ನಾಡ್ ಪ್ರೌಢಶಾಲೆಯ ವಜ್ರಮಹೋತ್ಸವ ಪ್ರಯುಕ್ತ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಹಾಕಿ ಟೂರ್ನಿಯ ಗುರುವಾರದ ಪಂದ್ಯಗಳಲ್ಲಿ ಮಹಾದೇವ ಸ್ಪೋರ್ಟ್ಸ್ ಕ್ಲಬ್, ಕುಂದ ಬೊಟ್ಟಿಯತ್ನಾಡ್, ಕೋಣನಕಟ್ಟೆ ಇಲೆವೆನ್, ಡ್ರಿಬ್ಲ್ ಹೆಂಪ್ ಹಾಗೂ ಮೂರ್ನಾಡು ಬ್ಲೇಜ್ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶ ಪಡೆದುಕೊಂಡಿವೆ. ಸೋಲನುಭವಿಸಿದ ನಾಪೋಕ್ಲು ಶಿವಾಜಿ, ಅಮ್ಮತ್ತಿ ಎಎಸ್‌ಸಿ, ಕುತ್ತ್ನಾಡ್ ಸ್ಟೆçöÊಕರ್ಸ್, ಮೂರ್ನಾಡು ಎಂಆರ್‌ಎಫ್ ತಂಡಗಳು ಸೋಲಿನೊಂದಿಗೆ ಟೂರ್ನಿಯಿಂದ ಹೊರ ನಡೆದವು

ಮಹಾದೇವ ಸ್ಪೋರ್ಟ್ಸ್ ಕ್ಲಬ್ ತಂಡಕ್ಕೆ ನಾಪೋಕ್ಲು ಶಿವಾಜಿ ೨-೦ ಗೋಲುಗಳ ಜಯ ಸಿಕ್ಕಿತು. ಮಹಾದೇವ ಪರ ಮೊಹಮ್ಮದ್ ನಹೀಮ್, ಅಖಿಲ್ ಅಯ್ಯಪ್ಪ ತಲಾ ಒಂದೊAದು ಗೋಲು ಬಾರಿಸಿ ಗೆಲುವು ತಂದುಕೊಟ್ಟರು.

ಕುAದ ಬೊಟ್ಟಿಯತ್ನಾಡ್ ತಂಡವು ಮೂರ್ನಾಡು ಎಂಆರ್‌ಎಫ್ ತಂಡವನ್ನು ೩-೨ ಗೋಲುಗಳಿಂದ ಮಣಿಸಿತು. ಕುಂದ ಪರವಾಗಿ ರೋಶನ್ ಕುಮಾರ್, ಸೋಮಣ್ಣ, ಅನಿಲ್, ಎಂಆರ್‌ಎಫ್ ಪರವಾಗಿ ಸಬಾಜ್, ವಿಘ್ನೇಶ್ ಗೋಲು ದಾಖಲಿಸಿದರು.

ಕೋಣನಕಟ್ಟೆ ಇಲೆವೆನ್ ತಂಡವು ಕುತ್ತ್ನಾಡ್ ಸ್ಟೆçöÊಕರ್ಸ್ ವಿರುದ್ದ ೪-೨ ಗೋಲುಗಳಿಂದ ಜಯ ಸಂಪಾದಿಸಿತು. ಕೋಣನಕಟ್ಟೆ ತಂಡದ ರಂಜಿತ್, ಪ್ರಫುಲ್ ಬಿದ್ದಪ್ಪ ತಲಾ ೨ ಗೋಲು, ಕುತ್ತ್ನಾಡ್ ತಂಡದ ಅಖಿಲ್, ಜಯಪ್ರಕಾಶ್ ಒಂದೊAದು ಗೋಲು ದಾಖಲಿಸಿದರು.

ಡ್ರಿಬ್ಲ್ ಹೆಂಪ್ ತಂಡವು ಬೇಗೂರು ಇವೈಸಿ ತಂಡವನ್ನು ೨-೦ ಗೋಲುಗಳಿಂದ ಮಣಿಸಿತು. ಹೆಂಪ್ ಪರ ಸುಬ್ಬಯ್ಯ ೨ ಗೋಲು ದಾಖಲಿಸಿ ಸಂಚಲನ ಮೂಡಿಸಿದರು.

ಮೂರ್ನಾಡು ಬ್ಲೇಜ್ ತಂಡವು ಅಮ್ಮತ್ತಿ ಎಎಸ್‌ಸಿ ವಿರುದ್ದ ೨-೦ ಗೋಲುಗಳ ಅಂತರದಿAದ ಜಯಿಸಿತು. ಬ್ಲೇಜ್ ಪರವಾಗಿ ಹರ್ಪಾಲ್ ೨ ಗೋಲು ದಾಖಲಿಸಿದರು.