ಕಣಿವೆ, ನ. ೨೮: ಜಿಲ್ಲೆಯ ಜಲಾಶಯಗಳ ಸ್ಥಿತಿಗತಿ, ಕೃಷಿ ಚಟುವಟಿಕೆಗಳಿಗೆ ಜಲಾಶಯಗಳ ನೀರು ನಿರ್ವಹಣೆಯ ಕುರಿತು ಖುದ್ದು ಪರಿಶೀಲನೆ ನಡೆಸಿ ಕೇಂದ್ರಕ್ಕೆ ವರದಿ ಕಳುಹಿಸುವ ಸಂಬAಧ ಕೇಂದ್ರ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳ ತಂಡ ಜಿಲ್ಲೆಯ ಹಾರಂಗಿ ಹಾಗೂ ಚಿಕ್ಲಿಹೊಳೆ ಜಲಾಶಯಗಳಿಗೆ ಆಗಮಿಸಿ ಪರಿಶೀಲನೆ ನಡೆಸಿತು.

ಪ್ರಾಧಿಕಾರದ ಸದಸ್ಯರಾದ ಡಾ.ಗೋಪಾಲ್‌ಲಾಲ್ ನೇತೃತ್ವದ ತಂಡ ಚಿಕ್ಲಿಹೊಳೆ ಜಲಾಶಯಕ್ಕೆ ಭೇಟಿ ನೀಡಿ ಜಲಾಶಯದ ನೀರು ಸಂಗ್ರಹಣೆ, ಜಲಾಶಯದ ಮುಖ್ಯ ದ್ವಾರವನ್ನು ಪರಿಶೀಲಿಸಿತು.

ಈ ಸಂದರ್ಭ ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ರಘುಪತಿ, ಪ್ರಭಾರ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ಸಹಾಯಕ ಅಭಿಯಂತರ ಕಿರಣ್ ಹಾಗೂ ಸೌಮ್ಯ ಇದ್ದರು.

ಈ ಸಂದರ್ಭ ಪತ್ರಕರ್ತರೊಂದಿಗೆ ಚಿಕ್ಲಿಹೊಳೆ ಜಲಾಶಯದ ಅವ್ಯವಸ್ಥೆ ಹಾಗೂ ಅನಾನುಕೂಲಗಳ ಬಗ್ಗೆ ರೈತ ಮುಖಂಡರೂ ಆದ ನಂಜರಾಯಪಟ್ಟಣ ಪಂಚಾಯಿತಿ ಸದಸ್ಯ ಆರ್.ಕೆ.ಚಂದ್ರು ಹಾಗೂ ಜೆ.ಟಿ.ಕಾಳಿಂಗ, ತಳೂರು ನಾಗರಾಜು ಮಾತನಾಡಿ, ಚಿಕ್ಲಿಹೊಳೆ ಜಲಾಶಯ ಯೋಜನೆ ರೈತರ ಪಾಲಿಗೆ ವರವಾಗದ ಬದಲು ಶಾಪವಾಗಿದೆ. ಜಲಾಶಯದ ನಾಲೆಗಳಲ್ಲಿ ಹೂಳು ತುಂಬಿದ್ದು ಮರಗಿಡಗಳು ಬೆಳೆದು ನಿಂತಿವೆ. ಇದರಿಂದಾಗಿ ಅಚ್ಚುಕಟ್ಟು ರೈತರ ಯಾವುದೇ ಭೂಮಿಗೆ ನೀರು ಹರಿಯುತ್ತಿಲ್ಲ. ಬದಲಾಗಿ ಕೃಷಿಕರ ಮನೆಗಳು ಶೀತಪೀಡಿತವಾಗಿವೆ.

ಪರಿಸ್ಥಿತಿ ಹೀಗಿರುವಾಗ ನೀರಾವರಿ ಇಲಾಖೆಯ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಯೋಜನೆ ಜಾರಿಗೊಳಿಸುತ್ತಿಲ್ಲ. ಜಲಾಶಯದ ಅಸಮರ್ಪಕ ನೀರು ನಿರ್ವಹಣೆಯಿಂದಾಗಿ ಅಪಾರ ಪ್ರಮಾಣದಲ್ಲಿ ಹಾನಿಗೊಳಗಾಗುತ್ತಿರುವ ರೈತರ ಸಮಸ್ಯೆಗಳನ್ನು ಅಧಿಕಾರಿಗಳು ಪರಿಹರಿಸುತ್ತಿಲ್ಲ.

ರಾಜ್ಯ ಮತ್ತು ಕೇಂದ್ರದಿAದ ಜಲಾಶಯದ ಸ್ಥಿತಿಗತಿ ಪರಿಶೀಲಿಸಲು ಧಾವಿಸುವ ಅಧಿಕಾರಿಗಳನ್ನು ಗುಟ್ಟಾಗಿ ಕರೆ ತಂದು ಗುಟ್ಟಾಗಿಯೇ ಕಳುಹಿಸುತ್ತಿದ್ದಾರೆ ಎಂದು ಇ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ವರದಿ : ಕೆ.ಎಸ್. ಮೂರ್ತಿ