ಪೊನ್ನಂಪೇಟೆ, ನ. ೨೯: ಕೋಟೂರು ಗ್ರಾಮದ ಶ್ರೀ ಮಹಾದೇವರ ದೇವಸ್ಥಾನದಲ್ಲಿ ಗ್ರಾಮದ ಇಬ್ಬರು ಸಾಧಕರಾದ ಅಜ್ಜ ಮತ್ತು ಮೊಮ್ಮಗಳಿಗೆ ಒಂದೇ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯೋತ್ಸವ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಹಾಗೂ ಅವರ ಮೊಮ್ಮಗಳು ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಎರಡನೇ ರ‍್ಯಾಂಕ್, ಜಿಲ್ಲೆಗೆ ಪ್ರಥಮ ರ‍್ಯಾಂಕ್ ಪಡೆದ ಕಾಟಿಮಾಡ ಭಾಷಿತ ಅವರುಗಳನ್ನು ಸನ್ಮಾನ ಮಾಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಮ್ಮಿ ಅಣ್ಣಯ್ಯ, ನಾನು ಮತ್ತು ನನ್ನ ಮೊಮ್ಮಗಳು ಒಂದೇ ವೇದಿಕೆಯಲ್ಲಿ ಸನ್ಮಾನ ಸ್ವೀಕರಿಸಿದ್ದು ಅತ್ಯಂತ ಖುಷಿಕೊಟ್ಟಿದೆ ಎಂದರು.
ಈ ಸಂದರ್ಭ ದೇವಸ್ಥಾನ ಸಮಿತಿ ಅಧ್ಯಕ್ಷ ಕೊಳ್ಳಿಮಾಡ ಸೋಮಯ್ಯ, ಕಾರ್ಯದರ್ಶಿ ಕೊಳ್ಳಿಮಾಡ ಸಚಿನ್, ಖಜಾಂಚಿ ಕಾಟಿಮಾಡ ಗಿರಿ, ನಿರ್ದೇಶಕರಾದ ಕೊಳ್ಳಿಮಾಡ ರವಿ, ಕೊಂಗಿರ ಮನು, ಕೊಂಗಿರ ಚುಮ್ಕುರು, ಇನ್ನಿತರರು ಇದ್ದರು.