ಮಡಿಕೇರಿ, ನ. ೨೯: ಶ್ರೀ ಗಣಪತಿ ರಥೋತ್ಸವದ ಪ್ರಯುಕ್ತ ಕರ್ನಾಟಕ ಅಮೆಚೂರ್ ಬಾಡಿಬಿಲ್ಡರ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ನ್ಯೂಜೆನ್ ಫಿಟ್ನೆಸ್ ಕುಶಾಲನಗರ ಮತ್ತು ಟೀಮ್ ಕಾವೇರಿ ಕ್ಲಾಸಿಕ್ ಸಹಯೋಗದೊಂದಿಗೆ ಮೊದಲ ವರ್ಷದ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯನ್ನು ಕುಶಾಲನಗರದ ರೈತ ಸಹಕಾರ ಭವನದಲ್ಲಿ ತಾ. ೩೦ರಂದು (ಇಂದು) ಆಯೋಜಿಸಲಾಗಿದೆ. ಕಾವೇರಿ ಕ್ಲಾಸಿಕ್ (ರಾಜ್ಯಮಟ್ಟ), ಮಿಸ್ಟರ್ ಕೊಡಗು (ಜಿಲ್ಲಾಮಟ್ಟ) ಮತ್ತು ಮೆನ್ಸ್ ಫಿಜಿಕ್ (ರಾಜ್ಯಮಟ್ಟದ) ಸ್ಪರ್ಧೆ ನಡೆಯಲಿದೆ. ಕಾವೇರಿ ಕ್ಲಾಸಿಕ್ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕದ ಖ್ಯಾತ ಬಾಡಿಬಿಲ್ಡರ್ಸ್ ಭಾಗವಹಿಸಲಿದ್ದಾರೆ. ಕಾವೇರಿ ಕ್ಲಾಸಿಕ್ ಸ್ಪರ್ಧೆಯಲ್ಲಿ ೧೫೦, ಮಿಸ್ಟರ್ ಕೊಡಗು ಸ್ಪರ್ಧೆಯಲ್ಲಿ ೮೦ ಮತ್ತು ಮೆನ್ಸ್ ಫಿಜಿಕ್ ಸ್ಪರ್ಧೆಯಲ್ಲಿ ೧೦೦ ಬಾಡಿಬಿಲ್ಡರ್ಸ್ ಭಾಗವಹಿಸಲಿದ್ದಾರೆ.
ಮಿಸ್ಟರ್ ಕೊಡಗು ಸ್ಪರ್ಧೆಯಲ್ಲಿ ವಿಜೇತ ಸ್ಪರ್ಧಿಗೆ ೨೦ ಸಾವಿರ ನಗದು, ಹಾಗೂ ಬೆಸ್ಟ್ ಪೋಸರ್‌ಗೆ ಐದು ಸಾವಿರ ರೂ. ನಗದು, ರಾಜ್ಯಮಟ್ಟದ ಕಾವೇರಿ ಕ್ಲಾಸಿಕ್ ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಸ್ಪರ್ಧಿಗೆ ೫೦ ಸಾವಿರ ನಗದು ಬಹುಮಾನ ನೀಡಲಾಗುತ್ತದೆ. ಮೋಸ್ಟ್ ಮಸ್ಕೂö್ಯಲರ್ ಬಾಡಿಬಿಲ್ಡರ್ಸ್ಗೆ ರೂ. ೧೫ ಸಾವಿರ ಹಾಗೂ ಬೆಸ್ಟ್ ಪೋಸರ್‌ಗೆ ರೂ. ೧೦ ಸಾವಿರ ನಗದು ಬಹುಮಾನ ನೀಡಲಾಗುತ್ತದೆ. ಎರಡು ವಿಭಾಗಗಳಲ್ಲಿ ನಡೆಯಲಿರುವ ರಾಜ್ಯಮಟ್ಟದ ಮಿಸ್ಟರ್ ಕಾವೇರಿ ಕ್ಲಾಸಿಕ್ ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಸ್ಪರ್ಧಿಗೆ ರೂ. ೧೦ ಸಾವಿರ ನಗದು ಬಹುಮಾನ ನೀಡಲಾಗುತ್ತದೆ.