vಮಡಿಕೇರಿ, ನ. ೨೯: ಅಭಿವೃದ್ಧಿ ಕಾರ್ಯಕ್ರಮಗಳು ಕಳಪೆ ಎಂದು ಕಂಡು ಬಂದಲ್ಲಿ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡದಂತೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ತಿಳಿಸಿದ್ದಾರೆ.
ಬೆಟ್ಟಗೇರಿಯಲ್ಲಿ ಗ್ರಾಮಸ್ಥರೊಂದಿಗೆ ಅಹವಾಲು ಸ್ವೀಕಾರ ಸಂದರ್ಭ ಈ ಬಗ್ಗೆ ಮಾತನಾಡಿದರು. ಕಾಮಗಾರಿಯಲ್ಲಿ ಗುಣಮಟ್ಟ ಕಳಪೆಯಾಗದ ಹಾಗೆ ಸ್ಥಳೀಯ ನಾಗರಿಕರು ಜಾಗೃತಿ ವಹಿಸಬೇಕು. ಅನುದಾನ ಸಾರ್ವಜನಿಕ ತೆರಿಗೆ ಹಣ. ಹಾಗಾಗಿ ಸರ್ಕಾರಿ ಕೆಲಸದ ಬಗ್ಗೆ ಸಾರ್ವಜನಿಕರು ಮುತುವರ್ಜಿ ವಹಿಸಬೇಕು ಎಂದು ಹೇಳಿದರು.
ಈಗಾಗಲೇ ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ೧.೧೦ ಕೋಟಿ ರೂ. ಅನುದಾನವನ್ನು ಒದಗಿಸಿದ್ದು ೭೦ ಲಕ್ಷ ರೂ. ಗಳ ಕಾಮಗಾರಿ ಮುಗಿದಿದ್ದು ೪೦ ಲಕ್ಷ ರೂ. ಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಮಾಹಿತಿ ನೀಡಿದರು.
ಸ್ಥಳೀಯ ಆಟೋ ಚಾಲಕರು ರಸ್ತೆ ಬದಿ ಸ್ಲಾö್ಯಬ್ ಅಳವಡಿಕೆಗೆ ಮನವಿ ಮಾಡಿದರು. ಬೆಟ್ಟಗೇರಿ ಗ್ರಾಮದಲ್ಲಿ ಜಲಜೀವನ್ ಯೋಜನೆ ಸಮರ್ಪಕವಾಗಿ ಆಗದೆ ಇರುವ ಬಗ್ಗೆ ಸ್ಥಳೀಯರು ದೂರಿದರು. ಕಸ ವಿಲೇವಾರಿ ಘಟಕ ಸ್ಥಗಿತಗೊಂಡಿರುವ ವಿವರಗಳನ್ನು ನೀಡಿದರು. ಪೊನ್ನಣ್ಣ ಅವರು ಸಂಭAದಪಟ್ಟ ಅಧಿಕಾರಿಗಳಿಂದ ಎರಡು ದಿನಗಳಲ್ಲಿ ವರದಿ ಸಲ್ಲಿಸುವಂತೆ ಆಪ್ತ ಕಾರ್ಯದರ್ಶಿ ಮೂಲಕ ನಿರ್ದೇಶನ ನೀಡಿದರು.
ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ವಲಯ ಕಾಂಗ್ರೆಸ್ ಅಧ್ಯಕ್ಷ ಕೊಡಗನ ತೀರ್ಥ ಪ್ರಸಾದ್, ಪ್ರಮುಖರಾದ ಕೇಟೋಳಿ ಮೋಹನ್ ರಾಜ್, ಕಾಳೆರಮ್ಮನ ಕುಮಾರ್, ನಾಪಂಡ ಗಣೇಶ್, ಸಮದ್ ಬೆಟ್ಟಗೇರಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.